Chikkamagaluru: ಒಂಟಿ ಮಹಿಳೆಯರೇ ಕಾಮುಕನ ಟಾರ್ಗೆಟ್: ಗ್ರಾಮಸ್ಥರಿಂದ ಬಿತ್ತು ಧರ್ಮದೇಟು

By Govindaraj S  |  First Published Jul 3, 2024, 11:48 PM IST

ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನಿಗೆ ಊರಿನ ಜನ ಹಿಡಿದು ಧರ್ಮದೇಟು ನೀಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ನಡೆದಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.03): ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನಿಗೆ ಊರಿನ ಜನ ಹಿಡಿದು ಧರ್ಮದೇಟು ನೀಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ನಡೆದಿದೆ. ಮಾವಿನಹಳ್ಳಿ ಮಂಜು ಊರಿನ ಜನರಿಂದ ಧರ್ಮದೇಟು ತಿಂದ ಯುವಕ. ಈತ ಊರಿನ ಮಹಿಳೆಯರು ಒಂಟಿಯಾಗಿ ಎಲ್ಲಿಗಾದರೂ ಹೋಗುವಾಗ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. 

Tap to resize

Latest Videos

undefined

ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ಮಹಿಳೆಯರ ಮೇಲೂ ದಾರಿ ಮಧ್ಯೆ ಅಡ್ಡ ಹಾಕಿ ಚೇಷ್ಟೆ ಮಾಡುತ್ತಿದ್ದ. ಮಹಿಳೆಯರು ಮನೆಯರಿಗೆ ತಿಳಿಸಿದರೆ ನಾಪತ್ತೆಯಾಗುತ್ತಿದ್ದ.  ಊರಿನ ಯುವಕರು ಈತನಿಗಾಗಿ ಹುಡುಕಾಡುತ್ತಿದ್ದರು. ಬಹುತೇಕ ಮಹಿಳೆಯರಿಗೆ ಮುಖ ತೋರಿಸದೆ ಹಿಂದಿನಿಂದ ಹೋಗಿ ಅಸಭ್ಯವಾಗಿ ವರ್ತಿಸಿ ಕಾಫಿತೋಟದ ಒಳಗೆ ಓಡಿಹೋಗುತ್ತಿದ್ದ. ಗ್ರಾಮಕ್ಕೆ ಬರುವ ಅಂಗನವಾಡಿ ಶಿಕ್ಷಕಿ ಜೊತೆಯೂ ಅಸಭ್ಯವಾಗಿ ವರ್ತಿಸಿದ್ದನು. 

ಅಂಧಾಭಿಮಾನಿಗಳೇ Social Mediaದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ?: ಪ್ರಥಮ್

ಬೆಳಗ್ಗೆ ವಾಕಿಂಗ್ ಬರುವ ಮಹಿಳೆಯರು ಅದೇ ಕೀಟಲೆ ಮಾಡುತ್ತಿದ್ದ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹಿಂಸೆ ಕೊಡುತ್ತಿದ್ದ ಈ ಭೂಪನಿಗೆ ಊರಿನ ಜನ ಧರ್ಮದೇಟು ನೀಡಿದ್ದಾರೆ. ಕಾಫಿತೋಟದಲ್ಲಿ ಅವಿತು ಕುಳಿತಿದ್ದ ಈತನನ್ನ ಕರೆತಂದು ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಬಾರಿಸಿ ಆಲ್ದೂರು ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!