ನಕ್ಸಲರಿಗೆ ಟ್ರ್ಯಾಕ್ಟರ್, ಗೂಡ್ಸ್ ಸರಬರಾಜು: ಬಿಜೆಪಿ ಮುಖಂಡ ಅರೆಸ್ಟ್

By Suvarna NewsFirst Published Jun 14, 2020, 10:04 PM IST
Highlights

ಮಾವೋವಾದಿಗಳಿಗೆ ಟ್ರಾಕ್ಟರ್ ಮತ್ತು ಇತರ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಪುರ್, (ಜೂನ್.14): ದಕ್ಷಿಣ ಬಸ್ತಾರ್‌ನ ನಕ್ಸಲರಿಗೆ ಟ್ರಾಕ್ಟರ್ ಮತ್ತು ಇತರ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ದಂತೇವಾಡದ ಬಿಜೆಪಿ ಮುಖಂಡ ಮತ್ತು ಆತನ ಸಹಚರನನ್ನು ಛತ್ತೀಸ್ ಗಢ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ದಂತೇವಾಡ ಬಿಜೆಪಿ ಉಪಾಧ್ಯಕ್ಷ ಜಗತ್ ಪೂಜಾರಿ ಬಂಧಿತ ಆರೋಪಿ.  ಅಬುಜ್ಮಡ್ ನಲ್ಲಿರುವ ನಕ್ಸಲಿರಿಗೆ ಸರಕು ಮತ್ತು ಇತರ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸರಿಗೆ ಖಚಿತ ಮಾಹಿತಿ ದೊರೆತ ನಂತರ ಜಗತ್ ಪೂಜಾರಿನನ್ನು ಬಂಧಿಸಲಾಗಿದೆ.

ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ!

ಪೂಜಾರಿ ಅವರು ಕಳೆದ 10 ವರ್ಷಗಳಿಂದ ಈ ಪ್ರದೇಶದ ವಿವಿಧ ಗುತ್ತಿಗೆ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ. ಹೀಗಾಗಿ ಮಾವೋವಾದಿಗಳಿಗೆ ಅವರು ಪೂರೈಸುತ್ತಿರುವ ವಿವಿಧ ವಸ್ತುಗಳ ಬಗ್ಗೆ ನಾವು ಮಾಹಿತಿ ಪಡೆಯುತ್ತಿದ್ದೇವೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಶೇಕ್ ಪಲ್ಲವ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಅವರು ಕೆಲವು ಮಧ್ಯವರ್ತಿಗಳ ಮೂಲಕ 100 ರೇಡಿಯೋ ಸೆಟ್‌ಗಳು, ಪ್ರಿಂಟರ್, ಲ್ಯಾಪ್‌ಟಾಪ್‌ಗಳನ್ನು ಮತ್ತು ಇತರ ವಸ್ತುಗಳನ್ನು ನಕ್ಸಲರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ನಾವು ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಇದೇ  ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್‌ ವೇಳೆ 17 ಯೋಧರು ಸಾವನ್ನಪ್ಪಿದ್ದರು.

ಅಲ್ಲದೇ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ  ನಕ್ಸಲರು ಐಇಡಿ ಸ್ಫೋಟಿಸಿ ಬಿಜೆಪಿ ಶಾಸಕ, ಐವರು ಪೊಲೀಸರನ್ನ ಬಲಿಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

click me!