14 ಲಕ್ಷ ರೂ. ತುಂಬಿದ್ದ ಎಟಿಎಂ ಯಂತ್ರ ಹೊತ್ತೊಯ್ದ ಕಳ್ಳರು!

Published : Jun 14, 2020, 08:31 PM ISTUpdated : Jun 14, 2020, 08:32 PM IST
14 ಲಕ್ಷ ರೂ. ತುಂಬಿದ್ದ ಎಟಿಎಂ ಯಂತ್ರ ಹೊತ್ತೊಯ್ದ ಕಳ್ಳರು!

ಸಾರಾಂಶ

ಲಾಕ್ ಡೌನ್ ನಡುವೆ ಕಳ್ಳರ ಉಪಟಳ/ ಎಸ್‌ಬಿಐ ಎಟಿಎಂ ಯಂತ್ರ ಹೊತ್ತೊಯ್ದರು/ 14 ಲಕ್ಷ ರೂ. ತುಂಬಿದ್ದ ಯಂತ್ರ/ ಇನ್ನೊಂದು ಕಡೆ ಎಟಿಎಂ ದೋಚಲು ಯತ್ನ

ಹರಿಯಾಣ (ಜೂ. 14)  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕಳ್ಳರು ದೊಡ್ಡ ಶಾಕ್ ಕೊಟ್ಟಿದ್ದಾರೆ. 14  ಲಕ್ಷ ರೂ. ತುಂಬಿದ್ದ ಎಟಿಎಂ ಯಂತ್ರವನ್ನು ಹೊತ್ತೊಯ್ದಿದ್ದಾರೆ.

ಶನಿವಾರ ಕಳ್ಳರು ಎಟಿಎಂ ಯಂತ್ರ ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಮುಂಜಾವಿನ ಒಳಗೆ ಈ ಕಳ್ಳತನ ನಡೆದಿದೆ. 
ಇದು ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಯದಿಂದ ಆಗಿದೆ ಎಂದು ಹೇಳಲಾಗಿದೆ. 

ಎಟಿಎಂಗಳಲ್ಲಿಯೂ ಸಾನಿಟೈಸರ್ ಇರುತ್ತಾ?

ಹರಿಯಾಣದಲ್ಲಿ ಎಟಿಎಂ ಯಂತ್ರ ಹೊತ್ತುಕೊಂಡು ಹೋಗಿದ್ದರೆ ಬಿಹಾರದ ಸಿವಾನ್ ನಲ್ಲಿ ಶಸ್ತ್ರಧಾರಿ ಕಳ್ಳರು ಎಟಿಎಂ ದೋಚುವ ಯತ್ನ ಮಾಡಿದ್ದು ಪೊಲೀಸರು ತಡೆದಿದ್ದಾರೆ.

ರಾತ್ರಿ 1.30 ರ ವೇಳೆ ಕಳ್ಳರು ದಾಳಿ ಮಾಡಿದ್ದರು. ಆದರೆ ಪೊಲೀಸರು ಗುಂಡಿನ ದಾಳಿ ಮಾಡಿದಾಗ ಕಳ್ಳರು ಎಸ್ಕೇಪ್ ಆಗಿದ್ದಾರೆ.  ಲಾಕ್ ಡೌನ್ ಕಾರಣಕ್ಕೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಇಡೀ ದೇಶಾದ್ಯಂತ ಪೊಲೀಸ್ ಇಲಾಖೆಗೆ ಹೊಸ ಸವಾಲು ತಂದಿಟ್ಟಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!