ಅಳಿಯನ ಮದ್ವೆಲಿ ಡಾನ್ಸ್ ಮಾಡ್ತಿದ್ದ ಮಾವ ಕುಸಿದು ಬಿದ್ದು ಸಾವು

Published : May 11, 2023, 04:37 PM IST
ಅಳಿಯನ ಮದ್ವೆಲಿ ಡಾನ್ಸ್ ಮಾಡ್ತಿದ್ದ ಮಾವ ಕುಸಿದು ಬಿದ್ದು ಸಾವು

ಸಾರಾಂಶ

ಮದ್ವೆ ಮನೆಯಲ್ಲಿ ಬಿಂದಾಸ್ ಅಗಿ ಡಾನ್ಸ್‌ ಮಾಡ್ತಿದ್ದ ವ್ಯಕ್ತಿಯೊಬ್ಬರು ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಂಚಿ: ಮದ್ವೆ ಮನೆಯಲ್ಲಿ ಬಿಂದಾಸ್ ಅಗಿ ಡಾನ್ಸ್‌ ಮಾಡ್ತಿದ್ದ ವ್ಯಕ್ತಿಯೊಬ್ಬರು ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮೃತರನ್ನು  ಭಿಲಾಯ್ ಸ್ಟೀಲ್ ಪ್ಲಾಂಟ್ ಮ್ಯಾನೇಜರ್ ದಿಲೀಪ್ ಎಂದು ಗುರುತಿಸಲಾಗಿದೆ. ತಮ್ಮ ಸಂಬಂಧಿಯೊಬ್ಬರ ಮದ್ವೆ ಸಮಾರಂಭದಲ್ಲಿ ವೇದಿಕೆ ಮೇಲಿದ್ದ ಅವರು ವಧು ವರರು ಹಾಗೂ ಇತರ ಮೂವರ ಜೊತೆಗೂಡಿ ಪಂಜಾಬ್ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಅವರಿಗೆ  ಉಸಿರಾಟದ ಸಮಸ್ಯೆ ಆಗಿದ್ದು, ಸ್ಟೇಜ್‌ನಲ್ಲೇ ಅವರು ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ಅದಾದ ಕೆಲ ಕ್ಷಣದಲ್ಲಿ ಅವರು ಕುಳಿತಲ್ಲಿಯೇ ನೆಲಕ್ಕೆ ಒರಗಿದ್ದು ಪ್ರಾಣ ಬಿಟ್ಟಿದ್ದಾರೆ. 

ಛತ್ತೀಸ್‌ಗಢದ ಬಲೋದ್ ಜಿಲ್ಲೆಯ ದಳ್ಳಿ-ರಾಜರಾ ಪಟ್ಟಣದಲ್ಲಿ ಮೇ 5 ರಂದು ಈ ಘಟನೆ ನಡೆದಿದ್ದು, ಈಗ ಈ ಆಘಾತಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಿಲೀಪ್ ಡೊಂಗರ್‌ಗಢದಲ್ಲಿ (Dongargarh) ತಮ್ಮ ಸೋದರಳಿಯನ ಮದುವೆ ಸಮಾರಂಭದಲ್ಲಿ (wedding ceremony) ಭಾಗವಹಿಸಿದ್ದರು. ಮದುವೆಯ ವೇದಿಕೆ ಮೇಲೆ ಪಂಜಾಬ್ ಹಾಡಿಗೆ ಬಿಂದಾಸ್ ಆಗಿ ಅವರು ನರ್ತಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆ ಆಗಿದೆ. ನೃತ್ಯ ಮಾಡುತ್ತಿದ್ದಾಗಲೇ ದಿಲೀಪ್ ಅವರಿಗೆ ಉಸಿರಾಡಲು ಕಷ್ಟವಾದಂತಾಗಿದ್ದು, ವೇದಿಕೆಯ ಮೇಲೆಯೇ ಅವರು ಕುಳಿತಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ವೇದಿಕೆಯಲ್ಲೇ ಅವರು ನೆಲಕ್ಕೆ ಒರಗಿ ಪ್ರಾಣ ಬಿಟ್ಟಿದ್ದಾರೆ. 

ಹಾಸನದ ವ್ಯಕ್ತಿಗೆ ಹೃದಯಾಘಾತ: ಕುಳಿತಲ್ಲಿಯೇ ಕುಸಿದು ಬಿದ್ದು ಸಾವು

ಮೃತ ದಿಲೀಪ್ (Dilip) ಅವರು ತುಂಬಾ ಹಾಸ್ಯ ಪ್ರವೃತ್ತಿಯ ಹಾಗೂ ತಮಾಷೆಯ ವ್ಯಕ್ತಿಯಾಗಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳಿದ್ದು,  ಮದುವೆಯ ದಿನವೂ , ಅವರು ತಮ್ಮ ಎಂದಿನ ಉತ್ಸಾಹದಿಂದಲೇ ನೃತ್ಯ ಮಾಡಿದರು. ದಿಲೀಪ್ ಅವರನ್ನು ಇತ್ತೀಚೆಗೆ ವಿದ್ಯುತ್ ಸರಬರಾಜು ಇಲಾಖೆಗೆ ನಿಯೋಜಿಸಲಾಗಿತ್ತು. ಈ ದುರಂತ ನಡೆದಾಗ ಅವವರ ಜೊತೆಯಲ್ಲಿ ವೇದಿಕೆ ಮೇಲೆ ವಧುವರರು ಕೂಡ ಇದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಉಳಿಸಿಕೊಳ್ಳಲಾಗಲಿಲ್ಲ. 

ಅಕೌಂಟೆನ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಕುಸಿದು ಬಿದ್ದು ಸಾವು

ಹೀಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನರಸಿಂಗ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ (Narsing Multispecialty Hospital) ನಿರ್ದೇಶಕ ಡಾ ತಾರೇಶ್ ರಾವ್ಟೆ (Dr Taresh Ravte) ಮಾತನಾಡಿ, ದೇಹಕ್ಕೆ ಹೆಚ್ಚಿನ ರಕ್ತ ಪರಿಚಲನೆ ಅಗತ್ಯವಿದ್ದಾಗ ಹೃದಯವು ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಪಧಮನಿಗಳಲ್ಲಿ ಸಂಗ್ರಹವಾದ ಕೊಬ್ಬು ಹೃದಯಕ್ಕೆ ರಕ್ತ ಪೂರೈಕೆಯನ್ನು ತಡೆಯುತ್ತದೆ. ಜನರು ನಿಯಮಿತವಾಗಿ ದೇಹ ತಪಾಸಣೆಗೆ ಹೋಗಬೇಕು ಎಂದು ಹೇಳಿದರು.

ನೃತ್ಯ ಮಾಡುವಾಗ ಅಥವಾ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ ಹಲವಾರು ಘಟನೆಗಳು ದೇಶದ ವಿವಿಧ ಭಾಗಗಳಿಂದ ಇತ್ತೀಚೆಗೆ ಹೆಚ್ಚೆಚ್ಚು ವರದಿ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ