
ಚೆನ್ನೈ(ಜೂ.13): ಕೈಹಿಡಿದ ಗಂಡ ಜೀವನ ಪರ್ಯಂತ ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆಂಬ ಕನಸುಗಳೊಂದಿಗೆ, ಮದುವೆಯಾಗಿ ಆತನ ಮನೆಗೆ ತೆರಳಿದ್ದ ಮೊದಲ ದಿನವೇ ನವವಧುವೊಬ್ಬಳು ಭೀಕರವಾಗಿ ಕೊಲೆಯಾಗಿದ್ದಾಳೆ. ಆಕೆಯನ್ನು ಕೊಲೆಗೈದಿದ್ದು ಬೇರೆ ಯಾರೂ ಅಲ್ಲ, ಜೀವನ ಪರ್ಯಂತ ಪ್ರೀತಿಸಬೇಕಿದ್ದ ಗಂಡ. ಇನ್ನು ತನ್ನನ್ನು ನಂಬಿ ಬಂದ ಹೆಂಡತಿಯನ್ನು ಕೊಲೆಗೈದ ಆತ ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ಈ ಮೂಲಕ ಮದುವೆ ಸಂಭ್ರಮದಲ್ಲಿದ್ದ ಮನೆ ಸಾವಿನ ಮನೆಯಾಗಿ ಮಾರ್ಪಾಡಾಗಿದೆ.
4 ಮದುವೆ, 13 ಯುವತಿಯರೊಂದಿಗೆ ಪ್ರೇಮದಾಟ: ಪೊಲೀಸರ ಬಲೆಗೆ ಬಿದ್ದ ಚಾಲಾಕಿ!
ಹೌದು ಚೆನ್ನೈನ ಮಿಂಜೂರ್ ಸಮೀಪ ಈ ಭೀಕರ ಘಟನೆ ನಡೆದಿದೆ. ಮೃತರನ್ನು ನೀತಿವಾಸನ್(24) ಮತ್ತು ಪತ್ನಿ ಸಂಧ್ಯಾ(20) ಎಂದು ಗುರುತಿಸಲಾಗಿದೆ. ಪರಸ್ಪರ ಸಂಬಂಧಿಗಳಾಗಿದ್ದ ಇವರ ಮದುವೆ ಕೊರೋನಾ ವೈರಸ್ ಭೀತಿ ಹಿನ್ನೆಲೆ ಕೇವಲ 20 ಮಂದಿ ಆಪ್ತರ ಸಮ್ಮುಖದಲ್ಲಿ ಬುಧವಾರ ನೆರವೇರಿತ್ತು. ಬಿಕ ಎಲ್ಲರೂ ಖುಷಿ ಖುಷಿಯಾಗಿ ನವ ವಧು ವರರನ್ನು ಮನೆಗೆ ಸ್ವಾಗತಿಸಿದ್ದರು.
ಆದರೆ ರಾತ್ರಿ ಇದ್ದಕ್ಕಿದ್ದಂತೆಯೇ ದಂಪತಿಯ ಕೋಣೆಯೊಳಗಿಂದ ಕೂಗಿಕೊಂಡ ಶಬ್ದ ಕೇಳಿಸಿದೆ. ಕೂಡಲೇ ಎಲ್ಲರೂ ಸೇರಿ ಕೋಣೆ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದು, ವರ ನೀತಿವಾಸನ್ ನಾಪತ್ತೆಯಾಗಿದ್ದ.
ದೊಡ್ಡ ಪರಂಪರೆ ಹೊಂದಿರುವ ಮಠದ ಸ್ವಾಮಿಯ ರಾಸಲೀಲೆ, ವೈರಲ್ ಆಯ್ತು ವಿಡಿಯೋ!
ಕೂಡಲೇ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಗಿಳಿದ ಪೊಲೀಸರು ತೀವ್ರ ಶೋಧ ನಡೆಸಿದಾಗ ವರ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಕಟ್ಟೂರು ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಪೋನ್ನೇರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ
ನೂತನ ವಧು-ವರ ಯಾವ ಕಾರಣಕ್ಕಾಗಿ ಜಗಳ ಮಾಡಿಕೊಂಡು, ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾಗಿದ್ದಾರೆ ಎಂಬುದು ಮಾತ್ರ ಈವರೆಗೂ ತಿಳಿದು ಬಂದಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ