4 ಮದುವೆ, 13 ಯುವತಿಯರೊಂದಿಗೆ ಪ್ರೇಮದಾಟ: ಪೊಲೀಸರ ಬಲೆಗೆ ಬಿದ್ದ ಚಾಲಾಕಿ!

Published : Jun 13, 2020, 04:29 PM ISTUpdated : Jun 14, 2020, 04:51 PM IST
4 ಮದುವೆ, 13 ಯುವತಿಯರೊಂದಿಗೆ ಪ್ರೇಮದಾಟ: ಪೊಲೀಸರ ಬಲೆಗೆ ಬಿದ್ದ ಚಾಲಾಕಿ!

ಸಾರಾಂಶ

ಬ್ಯಾಡರಹಳ್ಳಿ  ಬಂದಿಯಾಗಿದ್ದ ಕಾಮುಕ ಸುರೇಶ್ ಪ್ರಕರಣ | ನಾಲ್ಕು ಮದುವೆಯಾಗಿ 13 ಯುವತಿಯರಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಚಾಲಾಕಿ | ಬ್ಯಾಡರಹಳ್ಳಿ ಪೊಲೀಸ್ರ ಕೈಗೆ ಸಿಕ್ತಿದ್ದಂತೆ ಆರೋಪಿ ಸುರೇಶನ ಮೇಲೆ‌ ದಾಖಲಾಗ್ತಿದೆ ಸಾಲು ಸಾಲು ದೂರು

ಬೆಂಗಳೂರು(ಜೂ.13): ಬ್ಯಾಡರಹಳ್ಳಿ ಪೊಲೀಸರ ಬಲೆಗೆ ಬಿದ್ದ‌ ಆರೋಪಿ ಸುರೇಶ್ ಎಂಬಾತನ ಕಾಮಪುರಾಣ ಸದ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯುವತಿಯರೊಂದಿಗೆ ಪ್ರೇಮದಾಟವಾಡಿದ್ದಲ್ಲದೇ, ನಿರುದ್ಯೋಗ ಯುವಕರನ್ನೂ ಬಲೆಗೆ ಬಿಳಿಸಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. 

ಬೆಂಗಳೂರು: ಕೆಜಿಗಟ್ಟಲೆ ಚಿನ್ನ ಕದ್ದು ಮಾರಲು ಯತ್ನಿಸಿ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

ಹೌದು ನಾಲ್ಕು ಮದುವೆಯಾಗಿ 13 ಯುವತಿಯರಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಮೋಸಗಾರ ನಿವಾಸಿ ಆರೋಪಿ ಸುರೇಶ್‌ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈತನ ಬಂಧನ ಬೆನ್ನಲ್ಲೇ ಸುರೇಶನ ಮೇಲೆ‌ ಸಾಲು ಸಾಲು ದೂರುಗಳು ದಾಖಲಾಗುತ್ತಿದ್ದು, ಇದು ಪೊಲೀಸರನ್ನೇ ಗಾಬರಿಗೊಳಿಸಿದೆ. ಈ ಕಾಮುಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಭಂದಿ ಮಗಳನ್ನೂ ಬಿಟ್ಟಿಲ್ಲ. ಸಾಲದೆಂಬಂತೆ ಬ್ಯಾಡರಹಳ್ಳಿ ಮಾತ್ರವಲ್ಲದೇ ಆರ್ ಆರ್ ನಗರ, ಕೆಎಸ್ ಲೇಔಟ್. ಕೆಂಗೇರಿ ಹುಬ್ಬಳ್ಳಿಯಲ್ಲೂ ಸಾಲು ಸಾಲು ದೂರುಗಳು ದಾಖಲಾಗಿವೆ. 

ದೊಡ್ಡ ಪರಂಪರೆ ಹೊಂದಿರುವ ಮಠದ ಸ್ವಾಮಿಯ ರಾಸಲೀಲೆ, ವೈರಲ್ ಆಯ್ತು ವಿಡಿಯೋ!

ಕೇವಲ ಯುವತಿಯರಷ್ಟೇ ಅಲ್ಲ ನಿರೋದ್ಯೋಗಿ ಯುವಕರನ್ನು ಈತ ತನ್ನ ಬುಟ್ಟಿಗೆ ಬೀಳಿಸಿದ್ದಾನೆ. ಪೊಲೀಸ್ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 10 ಲಕ್ಷ ಉಂಡೇನಾಮ ಹಾಕಿದ್ದಾನೆ. ಗಿರೀಶ್ ಎಂಬುವವರಿಗೆ ಕಳೆದ ಮೂರು ವರ್ಷದ ಹಿಂದೆ ಮಿನಿಸ್ಟರ್ ನನಗೆ ಪರಿಚರ ಇದ್ದಾರೆ ನಿನಗೆ ಕೆಲಸ‌ ಸಿಗುವುದರಲ್ಲಿ ಅನುಮಾನವೇ ಇಲ್ಲ ಎಂದು 10 ಲಕ್ಷ ನಾಮ ಹಾಕಿದ್ದಾನೆ.  

ಇನ್ನು 2011ರಲ್ಲೇ ಯುವತಿಯರ ನಗ್ನ‌ಚಿತ್ರ ಚಿತ್ರಿಕರಿಸಿ ಬೆದರಿಸುತ್ತಿದ್ದ ಆರೋಪದ ಮೇಲೆ ಈತನ ವಿರುದ್ಧ ಪ್ರಕರಣಗಳು ದಾಖಲಾಗಿತ್ತು.

ಈ ಖತರ್ನಾಕ್‌ ಕಾಮುಕ ಸುರೇಶ್‌ನನ್ನು ಕಾರ್ಯಾಚರಣೆ ನಡೆಸಿದ ಬಂಧಿಸಿದ ಪೊಲೀಸ್ ಇನ್ಸಪೆಕ್ಟರ್ ರಾಜೀವ್ ಅವರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಆಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ