
ಚೆನ್ನೈ: ಇತ್ತೀಚೆಗೆ ಮಾದಕ ವಸ್ತುಗಳ ಕಳ್ಳಸಾಗಣೆಗೆ ಖದೀಮರು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಏನೇ ಹೊಸ ಹೊಸ ಕಳ್ಳಾಟ ಆಡಿದರೂ ಏರ್‌ಪೋರ್ಟ್‌ಗಳಲ್ಲಿ ಖದೀಮರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಅದೇ ರೀತಿ ಈಗ ಚೆನ್ನೈ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಸ್ಮಗ್ಲರ್ ತಿಮಿಂಗಿಲವೊಂದನ್ನು ಬಲೆಗೆ ಕೆಡವಿದ್ದಾರೆ. ಈತ ಮಾದಕ ವಸ್ತುಗಳ ಕಳ್ಳಸಾಗಣೆಗೆ ಆಯ್ದುಕೊಂಡ ಮಾರ್ಗವನ್ನು ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ತಾಂಜಾನಿಯಾ ಪ್ರಜೆ ಬಂಧಿತ ವ್ಯಕ್ತಿ. ಈತ ಸುಮಾರು 9 ಕೋಟಿ ಮೌಲ್ಯದ ಹೆರಾಯಿನ್‌ನನ್ನು ಸಣ್ಣ ಸಣ್ಣ ಮಾತ್ರೆಗಳ ರೂಪದಲ್ಲಿ ನುಂಗಿ ಇಲ್ಲಿ ಬಂದು ಅದನ್ನು ಬೇರೆಯದೇ ರೀತಿಯಲ್ಲಿ ಹೊಟ್ಟೆಯಿಂದ ತೆಗೆದು ಮಾರಾಟಕ್ಕೆ ಸಂಚು ರೂಪಿಸಿದ್ದ. ಈತ ಜುಲೈ 14 ರಂದು ಇಥಿಯೋಪಿಯಾ ಏರ್‌ಲೈನ್‌ಗೆ ಸೇರಿದ ET335/692 ವಿಮಾನದಲ್ಲಿ ಉಗಾಂಡಾದ ಎಂಟೆಬ್ಬೆಯಿಂದ ಚೆನ್ನೈಗೆ ಆಗಮಿಸಿದ್ದ. ಆದರೆ ಚೆನ್ನೈ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳಿಗೆ ಈತನ ಚಲನವಲನದ ಮೇಲೆ ಅನುಮಾನ ಉಂಟಾಗಿದ್ದು, ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ. ಈತನ ಹೊಟ್ಟೆಯಲ್ಲಿದ್ದ 1.266 ಕೆಜಿ ತೂಕದ 9 ಕೋಟಿ ಮೌಲ್ಯದ ಹೆರಾಯಿನ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ನಂತರ ವಶಕ್ಕೆ ಪಡೆದಿದ್ದಾರೆ.
ಕಳೆದ ಮೇ ತಿಂಗಳಲ್ಲೂ ಕೂಡ ಕಸ್ಟಮ್ಸ್ ಅಧಿಕಾರಿಗಳು ಇದೇ ರೀತಿಯ ಪ್ರಕರಣವೊಂದರಲ್ಲಿ ಉಗಾಂಡಾ ಪ್ರಜೆಯೊಬ್ಬನಿಂದ 5.56 ಕೋಟಿ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದರು. ಈತನ ಹೊಟ್ಟೆಯಲ್ಲಿ ಹೆರಾಯಿನ್ ಇದ್ದ 63 ಮಾತ್ರಗಳು ಇದ್ದವು.
3 ತಿಂಗಳಲ್ಲಿ ಭಾರತೀಯ ಮೂಲದ 2ನೇ ಡ್ರಗ್ ಪೆಡ್ಲರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಸಿಂಗಾಪುರ!
ದೇಶದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಅನ್ವಯ ಕಳೆದ ವರ್ಷವೊಂದರಲ್ಲೇ 5,600 ಕೆಜಿ ಹೆರಾಯಿನ್ ಮಾದಕ ವಸ್ತುವನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿವೆ. ಇದರ ಮೌಲ್ಯ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ. ಯಾಕೆಂದರೆ ಇದರ ಮೌಲ್ಯ ಹಲವು ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತ ದುಪ್ಪಟ್ಟಾಗಿದೆ. ಹಾಗಾದರೆ ಭಾರತದಲ್ಲಿ ಮಾದಕ ವಸ್ತುಗಳ ವ್ಯಸನಿಗಳ ಸಂಖ್ಯೆ ಎಷ್ಟಿರಬಹುದು ಮತ್ತು ಇದೆಷ್ಟು ದೊಡ್ಡ ಜಾಲವಾಗಿರಬಹುದು? ಭಾರತ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಬ್ಯೂಟಿ ಪ್ರಾಡಕ್ಟ್ಸ್, ಹೆಲ್ತ್ ಪ್ರಾಡಕ್ಟ್ಸ್ ಸೇರಿದಂತೆ ನೂರೆಂಟು ವಸ್ತುಗಳಿಗೆ ಇಡೀ ಜಗತ್ತಿನಲ್ಲೇ ದೊಡ್ಡ ಮಾರುಕಟ್ಟೆ ಎಂಬುದರಲ್ಲಿ ಸಂಶಯವೇ ಇಲ್ಲ. ಚೀನಾದ ಎಷ್ಟೋ ಕಂಪೆನಿಗಳು ಬದುಕಿರುವುದೇ ಭಾರತದ ಮಾರುಕಟ್ಟೆಯಿಂದ. ಆದರೆ ಇದನ್ನೂ ಮೀರಿದ ಕರಾಳ ಲೋಕವೊಂದು ನಮ್ಮ ದೇಶದಲ್ಲಿದೆ. ಅದೇ ಮಾರಕ ವಸ್ತುಗಳ ಮಾರುಕಟ್ಟೆ.
ಪ್ರತಿನಿತ್ಯ ನೂರಾರು ಕೋಟಿಗೂ ಅಧಿಕ ಹಣವನ್ನು ಭಾರತೀಯ ಮಾದಕ ವ್ಯಸನಿಗಳು ಇವುಗಳ ಮೇಲೆ ಖರ್ಚು ಮಾಡುತ್ತಾರೆ. ಭಾರತದೊಳಗೆ ಉತ್ಪಾದನೆಯಾಗುವ ಗಾಂಜಾ, ಅಫೀಮು, ಹಶಿಶ್ ಮುಂತಾದ ನೈಸರ್ಗಿಕ ಮಾದಕ ವಸ್ತುಗಳು ಒಂದು ಕಡೆಗಾದರೆ, ಕೆಮಿಕಲ್‌ಗಳಿಂದ ತಯಾರಿಸಲ್ಪಡುವ ಹೆರಾಯಿನ್, ಕೊಕೇನ್, ಮೆಥ್, ಆಂಫೆಟಮೀನ್, ಮೆಟಮಾರ್ಫಿನ್, ಹೈಡ್ರಾ, ಎಲ್‌ಎಸ್‌ಡಿ, ಆಸಿಡ್, ಮುಂತಾದ ಮಾದಕ ವಸ್ತುಗಳು ಬೇರೆಡೆಯಿಂದ ಆಮದಾಗುತ್ತವೆ. ಭಾರತದಲ್ಲಿ ಕಳೆದ ವರ್ಷ ವಶಕ್ಕೆ ಸಿಕ್ಕ ಮಾದಕ ವಸ್ತುಗಳ್ಯಾವುವು ಮತ್ತು ಯಾವ ರಾಜ್ಯದ ಬಜೆಟ್‌ಗಿಂತ ಇದರ ಮೌಲ್ಯ ಹೆಚ್ಚಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಮಹಿಳೆಯ ಗುಪ್ತಾಂಗದಲ್ಲಿ ಸಿಕ್ತು 88 ಪ್ಯಾಕೇಟ್ ಡ್ರಗ್ಸ್, ಹೊರತೆಗೆಯಲು 11 ದಿನ ಬೇಕಾಯ್ತು!
ಗೃಹ ಸಚಿವಾಲಯ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. 40,000 ಕೋಟಿ ರೂಪಾಯಿ ಮೌಲ್ಯದ 5,600 ಕೆಜಿ ಹೆರಾಯಿನ್ ಕಳೆದ ವರ್ಷ ವಶಕ್ಕೆ ಪಡೆಯಲಾಗಿದೆ ಎನ್ನುತ್ತದೆ ಈ ಮಾಹಿತಿ. ಮುಂದ್ರಾ ಪೋರ್ಟ್ ಒಂದರಲ್ಲೇ 3,000 ಕೆಜಿ ಹೆರಾಯಿನ್ ಕಳೆದ ವರ್ಷ ಸಿಕ್ಕಿತ್ತು. ಇಡೀ ಜಗತ್ತಲ್ಲೇ ಇದು ಅತ್ಯಂತ ದೊಡ್ಡ ಕನ್‌ಸೈನ್‌ಮೆಂಟ್ ಎಂಬ ಅಪಖ್ಯಾತಿಗೂ ಒಳಗಾಗಿತ್ತು. ಇದನ್ನು ಹೊರತುಪಡಿಸಿ ನೂರಾರು ದಾಳಿಗಳು ಇಡೀ ದೇಶಾದ್ಯಂತ ನಡೆದಿವೆ. ಅದರ ಮಾಹಿತಿಯನ್ನು ಗೃಹ ಸಚಿವಾಲಯ ನೀಡಿಲ್ಲ. ಅದನ್ನೂ ಸೇರಿಸಿದರೆ ಇನ್ನೆಷ್ಟು ಸಾವಿರ ಕೋಟಿ ಹೆಚ್ಚುತ್ತದೆಯೋ ಗೊತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ