'ಸೆಕ್ಸ್ ಮಸಾಜ್‌ಗೆ ಕುಶಾಲನಗರದ ಹುಡುಗಿ ಬೇಕಾ?' ಎಂದು ವಂಚಿಸುತ್ತಿದ್ದ ಹಾಸನ ಜಿಲ್ಲೆಯ ಖತರ್ನಾಕ್ ಗ್ಯಾಂಗ್ ಅಂದರ್!

By Suvarna News  |  First Published Jul 9, 2024, 7:32 PM IST

ವಿಶೇಷ ಸಂಸ್ಕೃತಿ ಆಚಾರಗಳಿಗೆ ಕೊಡಗು ತನ್ನದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ಆನ್ಲೈನ್ನಲ್ಲಿ ಸೆಕ್ಸ್ ಮಸಾಜ್ ಮಾಡಿಸುವ ಆಸೆ ತೋರಿಸಿ ಕೊಡಗಿನ ಘನತೆಗೆ ಧಕ್ಕೆ ತರುತ್ತಾ ಹಲವು ವ್ಯಕ್ತಿಗಳಿಗೆ ವಂಚಿಸುತ್ತಿದ್ದ ಗುಂಪನ್ನು ಕೊಡಗು ಪೊಲೀಸರು ಹೆಡಮುರಿಕಟ್ಟಿದ್ದಾರೆ. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.9): ವಿಶೇಷ ಸಂಸ್ಕೃತಿ ಆಚಾರಗಳಿಗೆ ಕೊಡಗು ತನ್ನದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ಆನ್ಲೈನ್ನಲ್ಲಿ ಸೆಕ್ಸ್ ಮಸಾಜ್ ಮಾಡಿಸುವ ಆಸೆ ತೋರಿಸಿ ಕೊಡಗಿನ ಘನತೆಗೆ ಧಕ್ಕೆ ತರುತ್ತಾ ಹಲವು ವ್ಯಕ್ತಿಗಳಿಗೆ ವಂಚಿಸುತ್ತಿದ್ದ ಗುಂಪನ್ನು ಕೊಡಗು ಪೊಲೀಸರು ಹೆಡಮುರಿಕಟ್ಟಿದ್ದಾರೆ. 

ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಜನ ಆರೋಪಿಗಳನ್ನು ಬೆಂಗಳೂರಿಗೆ ತೆರಳಿ ಬಂಧಿಸಲಾಗಿದೆ. ಸಕಲೇಶಪುರದ ಮಂಜುನಾಥ, ಸಂದೀಪ್ ಕುಮಾರ್ ಸಿಎಸ್, ಸಿ. ಬಿ. ರಾಕೇಶ್, ಕೆ. ಜಯಲಕ್ಷ್ಮಿ, ಸಹನಾ, ಪಲ್ಲವಿ, ಅಭಿಷೇಕ್ ಮತ್ತು ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಂಧಿಸಿ ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಜನ ಆರೋಪಿಗಳನ್ನು ಬೆಂಗಳೂರಿಗೆ ತೆರಳಿ ಬಂಧಿಸಲಾಗಿದೆ. ಬಂಧಿತರಿಂದ ಎರಡು ಕಾರು 17 ಮೊಬೈಲ್, ಒಂದು ಟ್ಯಾಬ್, ಒಂದು ಲ್ಯಾಪ್ಟಾಪ್ ಹಾಗೂ ರೂ. 24,800 ನಗದು ವಶಕ್ಕೆ ಪಡೆದಿರುವ ಪೊಲೀಸರು.

Tap to resize

Latest Videos

undefined

ಮದುವೆಯಾಗೋದಾಗಿ ನಂಬಿಸಿ ಕೈಕೊಟ್ಟ ಪ್ರಿಯತಮ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ!

ಹುಡುಗಿಯರಿಂದ ಮಸಾಜ್ ಮಾಡಿಸುವ ಆಸೆ ತೋರಿಸಿ ಹುಡುಗಿಯರ ಪೋಟೊ ಕಳುಹಿಸಿ ಹಣ ಲೂಟಿಮಾಡುತ್ತಿದ್ದ ಜಾಲವನ್ನು ಕೊಡಗು(kodagu) ಜಿಲ್ಲೆಯ ಕುಶಾಲನಗರ ನಗರ ಪೊಲೀಸ(Kushalanagar police station)ರು ಭೇದಿಸಿದ್ದಾರೆ. ಪ್ರವಾಸಿಗರು ಹೆಚ್ಚು ಬರುವ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಹನಿಟ್ರ್ಯಾಪ್ ಪ್ರಕರಣ(honey trap case) ನಡೆದಿದ್ದು ಹಾಸನ ಮೂಲದ 3 ಮಹಿಳೆಯರು ಮತ್ತು 5 ಯುವಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕುಶಾಲನಗರದ ಹುಡುಗಿ ಬೇಕಾ ಎಂದು ಆಮಿಷ ತೋರಿಸಿ ವಂಚನೆ ಮಾಡುತ್ತಿದ್ದರು.

ಕುಶಾಲನಗರ  ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿ ಮಂಜು ಎಂಬುವವರು ಜೂನ್ 29 ರಂದು ಮೊಬೈಲ್ ನಲ್ಲಿರುವ Locanto App ನಲ್ಲಿ Kushalnagar Top Model Sexy Aunties Service Available Kushalnagar - 23 0 35 ಸೈಟ್ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಒಬ್ಬ ವ್ಯಕ್ತಿ ಮಾತನಾಡಿ ನಾನು ಕುಶಾಲನಗರದ ಕಾಳೇಘಾಟ್ ಲಾಡ್ಜ್ ಮೇನೇಜರ್ ಎಂಬುದಾಗಿ ಪರಿಚಯಿಸಿಕೊಂಡು ಲಾಡ್ಜ್ನಲ್ಲಿ ಹೆಂಗಸರಿಂದ ಸೆಕ್ಸ್/ಮಸಾಜ್ ಮಾಡಿಸಲಾಗುವುದು ಹಾಗೂ ಆನ್ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಹೆಂಗಸರ ಏರ್ಪಾಡು ಮಾಡಲಾಗುವುದು ಎಂದು ಆರೋಪಿಗಳು ಪೋನ್ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ. ಅಲ್ಲದೆ ದೂರುದಾರರ Whatsapp ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಒಂದು ಗಂಟೆಗೆ ರೂ. 1500 ಮತ್ತು ಒಂದು ರಾತ್ರಿಗೆ ರೂ. 4000 ಗಳ ಹಣ ನೀಡಬೇಕಾಗುವುದು ಎಂದು ಹೇಳಿದ್ದಾರೆ.

 ದೂರುದಾರರೂ ಗೂಗಲ್ ಪೇ ಮುಖಾಂತರ ರೂ. 1500 ಹಣವನ್ನು ಕಳುಹಿಸಿದ್ದು, ಅದೇ ವ್ಯಕ್ತಿ ಕರೆ ಮಾಡಿ ಕಾಳೇಘಾಟ್ ಲಾಡ್ಜ್ ಬಳಿ ಬಂದು ಲೋಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ್ದಾನೆ. ಆ ವ್ಯಕ್ತಿಯು ಹೇಳಿರುವಂತೆ ಕಾಳೇಘಾಟ್ ಲಾಡ್ಜ್ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್ಲೈನ್ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದಾರೆ. ಇದ್ದರಿಂದ ಅನುಮಾನಗೊಂಡ ದೂರುದಾರ ಕಾಳೇಘಾಟ್ ಲಾಡ್ಜ್ ಗೆ ತೆರಳಿ ರಿಸೆಪ್ಶನ್ನಲ್ಲಿ ಈ ಮೇಲಿನ ವಿಚಾರ ಹೇಳಿದಾಗ ಆ ತರಹದ ಯಾವುದೇ ರೀತಿಯ ಅವ್ಯವಹಾರವೇ ಇಲ್ಲ. ಹಾಗೂ ಇದೇ ವಿಚಾರ ಹೇಳಿಕೊಂಡು 3 ರಿಂದ 4 ಜನ ಬಂದಿದ್ದರು. ನಿಮಗೆ ಯಾರೋ ಮೋಸ ಮಾಡಿದ್ದಾರೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು  ಕಾಳೇಘಾಟ್(kaleghat Kodagu district) ಸಿಬ್ಬಂದಿ ತಿಳಿಸಿದ್ದಾರೆ. 

ಕೂರ್ಗ್‌ ಟ್ರಿಪ್‌ನಲ್ಲಿ ಗರ್ಭಿಣಿ ನೇಹಾ ಗೌಡ, ಮುಖದ ಕಳೆ ನೋಡಿದ್ರೆ ಹೆಣ್ಣು ಮಗುನೇ ಹುಟ್ಟೋದು ಎಂದ ನೆಟ್ಟಿಗರು!

ದೂರು ದಾಖಲಿಸಿಕೊಂಡ ಪೋಲಿಸರು ತನಿಖೆ ಮಾಡಿ ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಜನ ಆರೋಪಿಗಳನ್ನು ಬೆಂಗಳೂರಿಗೆ ತೆರಳಿ ಬಂಧಿಸಲಾಗಿದೆ. ಈ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

click me!