ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರು ಶಿವಮೊಗ್ಗದ ಚುಂಚಾದ್ರಿ ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಜ.25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಆರೋಪಿ ನಾಗೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ (ಜ.29): ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಯನ್ನು ಮರು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರು ಶಿವಮೊಗ್ಗದ ಚುಂಚಾದ್ರಿ ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಜ.25 ರಂದು ಆತ್ಮಹತ್ಯೆ ಮಾಡಿಕೊಂಡು ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಾಗೇಂದ್ರನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ ದುರ್ದೈವಿ ಅನಿತಾ (32) ಆಗಿದ್ದಾರೆ. ಆರೋಪಿ ನಾಗೇಂದ್ರ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಕಾರಣ ನೇಣು ಬಿಗಿದುಕೊಂಡಿದ್ದಳು. ಮಹಿಳೆಯು ಬರೆದಿಟ್ಟಿದ್ದ ಡೆತ್‌ನೋಟ್ ಅನ್ನು ಪರಿಶೀಲಿಸಿದ ದೊಡ್ಡಪೇಟೆ ಪೊಲೀಸರು ಆತ್ಮಹತ್ಯೆ ಪ್ರಕರಣದ ಆರೋಪಿ ನಾಗೇಂದ್ರನನ್ನ ಬಂಧಿಸಿದ್ದಾರೆ. ಅನಿತಾರಿಗೆ ರಾಮಮೂರ್ತಿ ಎಂಬುವರೊಂದಿಗೆ 15 ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ, ಕಳೆದ ಎರಡು ವರ್ಷದ ಹಿಂದೆ ಪತಿ ರಾಮಮೂರ್ತಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: Tumkur: ನೇಣಿಗೆ ಶರಣಾದ ಮೂವರು ಅನಾಥ ಸಹೋದರಿಯರು: 9 ದಿನದ ಬಳಿಕ ಶವ ಪತ್ತೆ
ಸಹಕಾರ ಸಂಘದಲ್ಲಿ ಕಾರ್ಯದರ್ಶಿ:ಮೃತೆ ಅನಿತಾ ಶಿವಮೊಗ್ಗದ ಚುಂಚಾದ್ರಿ ವಿವಿದ್ದೇದ್ದೇಶ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದರು. ಕಳೆದೊಂದು ವರ್ಷದ ಹಿಂದೆ ಪಾಲಿಕೆಯಲ್ಲಿ ಚಾಲಕನಾಗಿದ್ದ ನಾಗೇಂದ್ರ ಅನಿತಾರ ಸಂಪರ್ಕಕ್ಕೆ ಬಂದಿದ್ದನು. ಈತನಿಗೂ ಈಗಾಗಲೇ ಮದುವೆಯಾಗಿದ್ದರೂ, ವಿಧವೆ ಮಹಿಳೆಯೊಂದಿಗೆ ದೈಹಿಕ ಸಂಬಂಧಕ್ಕೆ ಹೆಚ್ಚಿನ ಆಸಕ್ತಿ ತೋರಿಸಿ ತಾನು ನಿಮ್ಮನ್ನು ಮರು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕಕ್ಕೆ ಪುಸಲಾಯಿಸಿದ್ದನು. ನಂತರ, ತನ್ನ ಕಾಮವನ್ನು ತೀರಿಸಿಕೊಳ್ಳಲು ತೋರಿಸಿದ್ದ ಆಸಕ್ತಿಯನ್ನು ಮದುವೆ ಬಗ್ಗೆ ತೋರಿಸಿರಲಿಲ್ಲ. ಈತ ಮದುವೆಯಾಗಲು ನಿರಾಕರಿಸಿದ್ದರಿಂದ ಅನಿತಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು ಎಂದು ತಿಳಿದುಬಂದಿತ್ತು.
ಚಿತ್ರ ನೋಡಲಾಗಲಿಲ್ಲವೆಂದು ಅಭಿಮಾನಿ ಆತ್ಮಹತ್ಯೆ: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಸಿನಿ ತಾರೆಯರೇ ದೇವತೆಗಳಾಗಿದ್ದಾರೆ. ನಟರನ್ನೇ ತಮ್ಮ ದೇವರು ಎಂದು ಪೂಜಿಸುವವರು ಕೆಲವರು ಕಾಣಸಿಗುತ್ತಾರೆ. ಅದು ಎಷ್ಟರಮಟ್ಟಿಗೆ ಎಂದರೆ ದೊಡ್ಡ ದೊಡ್ಡ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಪೊಲೀಸರು (Police) ಹಿಡಿದಾಗ ಅವರು ಹೇಳುವ ಉತ್ತರ ಎಂದರೆ, ಆ ಚಿತ್ರದಲ್ಲಿನ ನಾಯಕನನ್ನು ನೋಡಿ ನಾನು ಇದನ್ನು ಅನುಸರಿಸಿದೆ ಎನ್ನುವುದು. ಅಷ್ಟು ಅಂಧಾಭಿಮಾನಿಗಳ ಸಂಖ್ಯೆಯೇ ಹೆಚ್ಚಾಗುತ್ತ ಸಾಗಿದೆ. ಒಂದು ಹಂತಕ್ಕೆ ಸೀಮಿತವಾಗಿರಬೇಕಾದ ಅಭಿಮಾನಿ ಅತಿರೇಕಕ್ಕೆ ಹೋಗಿ ನಟರನ್ನು ನೋಡಲು ಆಗಲಿಲ್ಲ ಎನ್ನುವ ಕಾರಣಕ್ಕೆ ಪ್ರಾಣ ಕಳೆದುಕೊಂಡಿರುವ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿರುವ ಮಧ್ಯೆಯೇ, ಈಗ ಇನ್ನೊಂದು ಆಘಾತಕಾರಿ (shocking) ಘಟನೆಯೊಂದು ಹೊರಬಂದಿದೆ.
ಇದನ್ನೂ ಓದಿ: ನೇಣಿಗೆ ಶರಣಾದ ಪ್ರೇಮಿಗಳು: ಕೊನೆಯಾಸೆಯಂತೆ ತಾಳಿ ಕಟ್ಟಿಸಿಕೊಂಡೇ ಪ್ರಾಣಬಿಟ್ಟ ಯುವತಿ..!
ವೀರಬಾಗು ಸಾವಿಗೆ ಶರಣಾದ ಯುವಕ: ಈಗ ಇಂಥದ್ದೇ ಅತಿರೇಕದ ಅಭಿಮಾನ ಇನ್ನೊಂದು ಜೀವವನ್ನು ಬಲಿ ಪಡೆದಿದೆ. ತಮಿಳುನಾಡಿನ ತೂತುಕುಡಿಯ ಅಜಿತ್ ಅವರ ಅಭಿಮಾನಿ ವೀರಬಾಗು ಎನ್ನುವವರು ಸಾವಿಗೆ ಶರಣಾಗಿದ್ದಾರೆ. ತಮಗೆ 'ಥುನಿವು' ಚಿತ್ರ ನೋಡಲು ಅವಕಾಶ ಸಿಗದೇ ಇದ್ದುದಕ್ಕೆ ಇಂಥ ಒಂದು ಕೃತ್ಯ ಎಸಗಿದ್ದಾರೆ. ಮೃತ ದುರ್ದೈವಿಯನ್ನು ವೀರಬಾಗು (Veerabagu) ಎನ್ನಲಾಗಿದೆ. ಇವರು ಆಟೋ ಡ್ರೈವರ್ ಆಗಿದ್ದರು. ಅಷ್ಟಕ್ಕೂ ಆಗಿದ್ದು ಏನೆಂದರೆ ವೀರಬಾಗು ಅವರು ಕುಟುಂಬ ಸಮೇತರಾಗಿ 'ಥುನಿವು' ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ಆದರೆ ಸುಮ್ಮನೇ ಹೋಗಿದ್ದರೆ ಇಷ್ಟೆಲ್ಲಾ ರಾದ್ಧಾಂತ ಆಗುತ್ತಿರಲಿಲ್ಲ. ಕಂಠಪೂರ್ತಿ ಕುಡಿದು ತೂರಾಡುತ್ತಾ ಹೋಗಿದ್ದರು.