Murugha Swamy Case: ಅತ್ಯಾಚಾರ ಆರೋಪಿ ಮುರುಘಾಶ್ರೀಗೆ ಮಾಸ್ಟರ್​​ ಸ್ಟ್ರೋಕ್: ಮಠಕ್ಕೆ ಕಾಲಿಡೋದೂ ಅಸಾಧ್ಯ!?

By Suvarna News  |  First Published Nov 10, 2022, 1:44 PM IST

 Murugha Shree POCSO Case: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಅತ್ಯಾಚಾರ ಆರೋಪದ ಜೊತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಧಾರ್ಮಿಕ ಸ್ಥಳಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ, ಎಂಬುದನ್ನು ಉಲ್ಲೇಖಿಸಲಾಗಿದೆ. 


ಚಿತ್ರದುರ್ಗ (ನ.16): POCSO ಕಾಯ್ದೆಯಡಿಯಲ್ಲಿ ಜೈಲು ಸೇರಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ (Murugha Mutt Case) ವಿರುದ್ಧ ನಗರದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅಕಸ್ಮಾತ್ ಜಾಮೀನು ಸಿಕ್ಕರೂ ಮಠಕ್ಕೆ ಸೇರಿದಂತೆ ಮಾಡಲಿದ್ದಾರೆ. ಜೈಲಿನಿಂದ ಹೊರಬಂದು ಮಠ ಸೇರಿಕೊಳ್ಳುವ ಮುರುಘಾ ಆಸೆಗೆ ತಣ್ಣೀರು ಎರಚಲು ಮುಂದಾಗಿದ್ದು, ಇನ್ನೂ ಮುಂದೆ ಮಠಕ್ಕೆ ಕಾಲಿಡದಂತೆ ಮಾಡಿದ್ದಾರೆ ಚಿತ್ರದುರ್ಗ ಪೊಲೀಸರು.  ಪೀಠದ ಅಧಿಕಾರದಿಂದಲೇ ಎಲ್ಲವನ್ನೂ ಗೆಲ್ಲುವ ಹುಂಬತನಕ್ಕೆ ಖಾಕಿ ಕೊಳ್ಳಿ ಇಟ್ಟಿದೆ. ಜೈಲಿನಿಂದ ಹೊರ ಬಂದರೂ ಮಠಕ್ಕೆ ಕಾಲಿಡುವಂತಿಲ್ಲ ಮುರುಘಾಶ್ರೀ. ಅತ್ಯಾಚಾರ ಸೆಕ್ಷನ್​ ಜೊತೆಗೆ ಧಾರ್ಮಿಕ ಸ್ಥಳ ದುರ್ಬಳಕೆ ಕಾಯ್ದೆ ಸೇರಿಸಿದ್ದಾರೆ ಪೊಲೀಸರು. ಧಾರ್ಮಿಕ ಸ್ಥಳ ದುರ್ಬಳಕೆ ಕಾಯ್ದೆ 1988 (The Religious Institutions (Prevention of Misuse) Act, 1988) ಸೆಕ್ಷನ್​​ 3(f),​ 7ರ ಅಡಿ ಚಾರ್ಜ್​ಶೀಟಿನಲ್ಲಿ ಉಲ್ಲೇಖಿಸಿದ್ದು, ಧಾರ್ಮಿಕ ಸ್ಥಳದ ಮುಖ್ಯಸ್ಥರಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪವೂ ಇದೆ. 

ಧಾರ್ಮಿಕ ಸ್ಥಳ ದುರ್ಬಳಕೆ ಕಾಯ್ದೆ 1988 ಸೆಕ್ಷನ್​​ 3(f) ಉಲ್ಲಂಘಿಸಿದ್ದು, ಧಾರ್ಮಿಕ ಸ್ಥಳವನ್ನ ಕಾನೂನು ಬಾಹಿರ (Unlawful Activity) ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳುವಂತಿಲ್ಲ. ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅತ್ಯಾಚಾರವೆಸಗಿದ್ದು, ಆರೋಪಿತ ವ್ಯಕ್ತಿ ಅಧಿಕಾರಿ ದುರ್ಬಳಕೆ ಮಾಡಿಕೊಂಡ ಸ್ಥಳಕ್ಕೆ ಕಾಲಿಡುವಂತಿಲ್ಲಎಂದು ಉಲ್ಲೇಖಿಸಲಾಗಿದೆ. ಆರೋಪಿ ಧಾರ್ಮಿಕ ಸಂಸ್ಥೆಯಲ್ಲಿದ್ದು, ಪ್ರಮುಖ ಹುದ್ದೆಯಿಂದ ವಜಾಕ್ಕೆ ಅರ್ಹ. ಅಲ್ಲದೇ ಆರೋಪಿ ತನ್ನ ಅಧಿಕಾರದಲ್ಲಿ ಮುಂದುವರೆಸಲು ನಿರ್ಬಂಧ ವಿಧಸಬಹುದಾಗಿದೆ. 

Tap to resize

Latest Videos

Murugha Seer Case: ಲೇಡಿ ವಾರ್ಡನ್ ರಶ್ಮಿಯನ್ನು ವಿಚಾರಣೆ ನಡೆಸಲಿರುವ ಬಾಲಚಂದ್ರ ನಾಯ್ಕ್

ಅತ್ಯಾಚಾರದ ಆರೋಪದ ಮೇಲೆ ಕಂಬಿ ಎಣಿಸುತ್ತಿರುವ ಮುರುಘಾ ಶರಣ ವಿರುದ್ಧ ಪೊಲೀಸರು ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದು, ಅದರಲ್ಲಿ ಹಲವರ ವಿಚಾರಣೆ ನಡೆಸಿರುವ ಅಂಶಗಳನ್ನು ಸೇರಿಸಲಾಗಿದೆ. ಮಠದ ಹೆಯ ವಿದ್ಯಾರ್ಥಿನಿಯರು, ಆಡಳಿತಾಧಿಕಾರಿಗಳು ಹಾಗೂ ಹಾಸ್ಟೆಲ್ ವಾರ್ಡನ್ ಸೇರಿ ಹಲವರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. 

ಹಳೆಯ ವಿದ್ಯಾರ್ಥಿನಿ ಸಾಕ್ಷ್ಯ:  ನನ್ನ ತಂದೆಗೆ ಇಬ್ಬರು ಮಕ್ಕಳಿದ್ದು, ನಾನು ಹಿರಿಯವಳು. ನಾನು ಹುಳಿಯಾರಿನಲ್ಲಿ 7ನೇ ತರಗತಿ ಓದುತ್ತಿದ್ದೆ. ನನ್ನ ತಾಯಿ ಸತ್ತ ನಂತರ ನಮ್ಮನ್ನು ನೋಡಿಕೊಳ್ಳುವವರು ಇಲ್ಲದೇ ಇದ್ದುದರಿಂದ, ನನ್ನ ತಂದೆಯವರು ಚಿತ್ರದುರ್ಗದ ಮುರುಘ ಮಠದಲ್ಲಿರುವ ಪ್ರಿಯದರ್ಶಿನಿ ಪ್ರೌಢಶಾಲೆಗೆ 8ನೇ ತರಗತಿಗೆ ಸೇರಿಸಿದರು. ಮುರುಘ ಮಠದಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದಲ್ಲಿದ್ದೆ. ರಶ್ಮಿರವರು ವಾರ್ಡನ್ ಆಗಿದ್ದಾಗ ನಾನು 2 ವರ್ಷ ಇದ್ದೆ. ವಾರ್ಡನ್ ರಶ್ಮಿ ರವರು ನನ್ನನ್ನು ಆಗಾಗ ಸ್ವಾಮೀಜಿ ಹಣ್ಣು ಕೊಡುತ್ತಾರೆ ರಾತ್ರಿ 9 ಗಂಟೆಯ ನಂತರ ಹೋಗಿ ಇಸ್ಕೊಂಡು ಬಾ. ಅವರ ಬಳಿ ಹಣ ಕೇಳಿ ಇಸ್ಕೊಂಡು ಬಾ ಅಂತ ಹೇಳುತ್ತಿದ್ದರು, ಎಂದಿದ್ದಾಳೆ.

ರಾತ್ರಿ ಊಟವಾದ ನಂತರ ಹುಡುಗಿಯರು ಎಲ್ಲರೂ ಮಲಗಿದ ಮೇಲೆ ನಾನು ಹಿಂದಿನ ಬಾಗಿಲಿನಿಂದ ಸ್ವಾಮೀಜಿ ರೂಂಗೆ ಹೋಗುತ್ತಿದ್ದೆ. ನನಗೆ ಸ್ವಾಮೀಜಿಯವರು ಏನು ದೊಣಗ ಚೆನ್ನಾಗಿದ್ದೀಯ ಅಂತ ಅಡ್ಡ ಹೆಸರಿನಿಂದ ಕರೆದು ಮಾತನಾಡಿಸುತ್ತಿದ್ದರು. ಸ್ವಾಮೀಜಿ ನನಗೆ ತಿನ್ನಲು ಡ್ರೈ ಫೂಟ್ ಅಥವಾ ಚಾಕಲೇಟ್ ಕೊಡುತ್ತಿದ್ದರು. ನೀನು ಬರುವಾಗ ಯಾರಾದರೂ ನೋಡಿದ್ರಾ ಅಂತಾನೂ ಕೇಳುತ್ತಿದ್ದರು. ನಂತರ ಅವರು ನನ್ನ ಬಟ್ಟೆಯನ್ನು ಬಿಚ್ಚಲು ಹೇಳುತ್ತಿದ್ದರು. ಸ್ವಾಮೀಜಿ ಸಹ ಅವರು ಹಾಕಿಕೊಂಡ ಬಟ್ಟೆಗಳನ್ನು ಬಿಚ್ಚುತ್ತಿದ್ದರು. ಅವರು ನನ್ನನ್ನು ಅವರ ತೊಡೆಯ ಮೇಲೆ ಕೂರಿಸಿಕೊಂಡು ಪರ್ಸನಲ್ ಜಾಗಗಳನ್ನು ಮುಟ್ಟುತ್ತಿದ್ದರು. ನಂತರ ನನ್ನೊಂದಿಗೆ ಗಂಡ, ಹೆಂಡತಿಯಂತೆ ಸೇರುತ್ತಿದ್ದರು. ಸ್ವಾಮೀಜಿ ಆಲಾರಾಂ ಇಟ್ಟುಕೊಂಡು ಬೆಳಗಿನ ಜಾವ 4-30 ಅಥವಾ 5-00 ಗಂಟೆ ಸಮಯಕ್ಕೆ ನನಗೆ ಹಾಸ್ಟೆಲ್‌ಗೆ ಹೋಗು ಅಂತ ಕಳುಹಿಸುತ್ತಿದ್ದರು, ಎಂದಿದ್ದಾಳೆ.  

Murugha Shree Case: ಇಷ್ಟು ಕೀಳುಮಟ್ಟಕ್ಕೆ ಇಳೀತಾರೆ ಎಂದು ನಿರೀಕ್ಷಿಸಿರಲಿಲ್ಲ: ಮೌನ ಮುರಿದ ಬಿಎಸ್‌ವೈ

ಎಷ್ಟು ಬಾರಿ ಸ್ವಾಮೀಜಿ ಹತ್ತಿರ ಹೋಗಿದ್ದೆ ಅಂತ ನನಗೆ ನೆನಪಿಲ್ಲ. ನಂತರದ ದಿನಗಳಲ್ಲಿ ಪರಮಶಿವಯ್ಯರವರು ನೀನು ಸ್ವಾಮೀಜಿ ರೂಮಿಗೆ ಬಂದು ಹೋಗುವುದು ಮಠದಲ್ಲಿ ಕೆಲಸ ಮಾಡುವವರಿಗೆ ಗೊತ್ತಾಗುತ್ತಿದೆ. ಕ್ಯಾಮೆರಾದಲ್ಲಿ ನೀನು ಕಾಣುತ್ತಿದ್ದೀಯ. ನೀನು ಮಲ್ಲಾಡಿಹಳ್ಳಿ ಹಾಸ್ಟೆಲ್‌ಗೆ ಹೋಗು ಅಂತ ಹೇಳಿದರು. ನನಗೆ ಇಷ್ಟವಿಲ್ಲದಿದ್ದರೂ ಹಾಸ್ಟೆಲ್‌ ವಾರ್ಡನ್ ರಶ್ಮಿ ಅವರು ನಂದಿಬಸಯ್ಯ ಅವರೊಂದಿಗೆ ಮಲ್ಲಾಡಿಹಳ್ಳಿ, ಹಾಸ್ಟೆಲ್‌ಗೆ ಕಳುಹಿಸಿಕೊಟ್ಟರು. ನನಗೆ ಎರಡು ವರ್ಷಗಳ ಹಿಂದೆ ಮದುವೆ ಮಾಡಿದ್ದು, ನಾನು ನನ್ನ ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದೇನೆ, ಎಂದಿದ್ದಾಳೆ. 

click me!