ಲೇಡಿಸ್ ಹಾಸ್ಟೆಲ್‌ನ ಬಾತ್‌ರೂಮ್ ವಿಡಿಯೋ ಲೀಕ್: ಬೀದಿಗಳಿದ ವಿದ್ಯಾರ್ಥಿನಿಯರು

By Anusha KbFirst Published Sep 18, 2022, 10:09 AM IST
Highlights

ಚಂಡೀಗಡ: ಕಾಲೇಜಿನ ಮಹಿಳಾ ಹಾಸ್ಟೆಲ್‌ನ ಬಾತ್‌ರೂಮ್‌ನ ವಿಡಿಯೋವನ್ನು ಸೆರೆ ಹಿಡಿದು ಯಾರೋ ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ ಆಘಾತಕಾರಿ ಘಟನೆ ಪಂಜಾಬ್‌ನಲ್ಲಿ ನಡೆದಿದ್ದು, ಘಟನೆ ಖಂಡಿಸಿ ರಾತ್ರೋರಾತ್ರಿ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್‌ನ ಮೊಹಾಲಿಯಲ್ಲಿರುವ ಚಂಡೀಗಡ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜು ಹಾಸ್ಟೆಲ್‌ನಲ್ಲಿ ಈ ಮಾನಗೇಡಿ ಕೃತ್ಯ ನಡೆದಿದೆ. 

ಚಂಡೀಗಡ: ಕಾಲೇಜಿನ ಮಹಿಳಾ ಹಾಸ್ಟೆಲ್‌ನ ಬಾತ್‌ರೂಮ್‌ನ ವಿಡಿಯೋವನ್ನು ಸೆರೆ ಹಿಡಿದು ಯಾರೋ ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ ಆಘಾತಕಾರಿ ಘಟನೆ ಪಂಜಾಬ್‌ನಲ್ಲಿ ನಡೆದಿದ್ದು, ಘಟನೆ ಖಂಡಿಸಿ ರಾತ್ರೋರಾತ್ರಿ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್‌ನ (Punjab) ಮೊಹಾಲಿಯಲ್ಲಿರುವ (Mohali) ಚಂಡೀಗಡ ವಿಶ್ವವಿದ್ಯಾನಿಲಯಕ್ಕೆ (Chandigarh University) ಸೇರಿದ ಕಾಲೇಜು ಹಾಸ್ಟೆಲ್‌ನಲ್ಲಿ ಈ ಮಾನಗೇಡಿ ಕೃತ್ಯ ನಡೆದಿದೆ.  ಹಾಸ್ಟೆಲ್‌ನಲ್ಲಿ ವಾಸವಿದ್ದ ಹುಡುಗಿಯೇ ತನ್ನ ಜೊತೆ ಹಾಸ್ಟೆಲ್‌ನಲ್ಲಿ ವಾಸ ಮಾಡುವ ವಿದ್ಯಾರ್ಥಿನಿಯೊಬ್ಬಳು ಸ್ನಾನ ಮಾಡುತ್ತಿರುವಾಗ ಗೌಪ್ಯವಾಗಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಮಾಡಿದ್ದಾಳೆ ಎನ್ನಲಾಗಿದೆ. ಈ ಕೃತ್ಯವೆಸಗಿದ ಆರೋಪಕ್ಕೊಳಗಾಗಿರುವ ವಿದ್ಯಾರ್ಥಿನಿಯನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಮಧ್ಯೆ ವಿಡಿಯೋ ಸೋರಿಕೆಯಾದ ಪರಿಣಾಮ ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಿದ್ದ ಕೆಲ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ (suicide) ಯತ್ನಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಈ ವಿಚಾರವನ್ನು ವಿಶ್ವವಿದ್ಯಾನಿಲಯದ ಆಡಳಿತ ಹಾಗೂ ಪೊಲೀಸರು ಕೂಡ ನಿರಾಕರಿಸಿದ್ದಾರೆ. ವಿದ್ಯಾರ್ಥಿನಿಯರ ಆತ್ಮಹತ್ಯೆ ಯತ್ನ ಸತ್ಯಕ್ಕೆ ದೂರವಾದುದು ಇದು ಕೇವಲ ಊಹಾಪೋಹಾ ಎಂದು ಅವರು ಹೇಳಿದ್ದಾರೆ. ಆದರೆ ಬಾತ್‌ರೂಮ್ ವಿಡಿಯೋ ಲೀಕ್ ಆಗಿದೆ ಎಂದು ತಿಳಿದು ಓರ್ವ ವಿದ್ಯಾರ್ಥಿನಿ ತಲೆ ತಿರುಗಿ ಬಿದ್ದಿದ್ದಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹೇಳಿದ್ದಾರೆ. 

Protest breaks out in Chandigarh University after someone secretly recorded videos of girls from hostel bathroom and leaked them online. University administration is trying to muzzle the protest, according to a student :

pic.twitter.com/BIi1jTBPCN

— Yogita Bhayana योगिता भयाना (@yogitabhayana)

ಅಬ್ಬಬ್ಬೋ....! ಮತ್ತೊಂದು ವಿಡಿಯೋ ಲೀಕ್.....ಆತಂಕದಲ್ಲಿ ಸೋನು ಗೌಡ

ಈ ಘಟನೆಯ ಬಗ್ಗೆ ಸೈಬರ್ ಕ್ರೈಂ (cyber crime branch) ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಪ್ರಕರಣ ದಾಖಲಿಸಲಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವಂತೆ, ಹುಡುಗಿಯೊಬ್ಬಳು ತನ್ನ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು (photos) ತನ್ನ ಗೆಳೆಯನೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದಳು. ಆದರೆ ಈ ವೇಳೆ ಇತರರು ಈಕೆ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿದ್ದಾಳೆ ಎಂದು ಭಾವಿಸಿದರು ಎಂದು ತಿಳಿದು ಬಂದಿದೆ. 

I humbly request all the students of Chandigarh University to remain calm, no one guilty will be spared.

It’s a very sensitive matter & relates to dignity of our sisters & daughters.

We all including media should be very very cautious,it is also test of ours now as a society.

— Harjot Singh Bains (@harjotbains)

ಪಂಜಾಬ್ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ (School Education Minister) ಹರ್ಜೋತ್ ಸಿಂಗ್ ಬೈನ್ಸ್ (Harjot Singh Bains) ಘಟನೆ ಬಗ್ಗೆ ಮಾಹಿತಿ ಕೇಳಿದ್ದು, ಕಾಲೇಜು ವಿದ್ಯಾರ್ಥಿಗಳು ಸಂಯಮದಿಮದ ವರ್ತಿಸುವಂತೆ ಹೇಳಿದ್ದಾರೆ. ಆರೋಪಿ ಯಾರೇ ಆದರೂ ಸುಮ್ಮನೆ ಬಿಡುವುದಿಲ್ಲ. ಇದೊಂದು ತುಂಬಾ ಸೂಕ್ಷ್ಮವಾದ ವಿಚಾರ, ಅಲ್ಲದೇ ಇದು ನಮ್ಮ ಸಹೋದರಿಯರು ಹಾಗೂ ಮಕ್ಕಳ ಮರ್ಯಾದೆಯ ವಿಚಾರ, ಈ ವಿಚಾರದಲ್ಲಿ ಮಾಧ್ಯಮಗಳು ಸೇರಿದಂತೆ ಎಲ್ಲರೂ ತುಂಬಾ ಜಾಗರೂಕರಾಗಿರಬೇಕು. ಇದೊಂದು ಪರೀಕ್ಷೆಯ ಸಮಯವೂ ಹೌದು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿದ್ದಾರೆ. 


Coffee Nadu Chandu ಖಾತೆ ಹ್ಯಾಕ್; 150 'ಹಾಟ್‌' ವಿಡಿಯೋ ಲೀಕ್?

click me!