
ಚಾಮರಾಜನಗರ (ಫೆ.15): ಗಡಿ ನಾಡು ಚಾಮರಾಜನಗರದಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಗಮನಸೆಳೆದಿದೆ. ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದು ಪ್ರಿಯತಮೆಯ ಬಾಳನ್ನೇ ದುರಳನೊಬ್ಬ ನರಕ ಮಾಡಿದ್ದಾರೆ. ಪ್ರೀತಿ ಪ್ರೇಮಾ ಅಂತ ಹೇಳಿ ಮೂರು ಬಾರಿ ಪ್ರಿಯತಮೆಗೆ ಅಬಾರ್ಷನ್ ಕೂಡ ಮಾಡಿಸಿ ಓಡಿಹೋಗಿದ್ದಾನೆ. ವಿಚಿತ್ರ ಹಾಗೂ ವಿಲಕ್ಷಣ ಪ್ರೇಮ್ ಕಹಾನಿಗೆ ಬಲಿಯಾಗಿ ಪ್ರಿಯತಮೆ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. 2021ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವ ವೇಳೆ ಜಾನ್ ಪ್ರೆಸಿಲ್ಲಾ ಎನ್ನುವ ಹುಡುಗಿಗೆ ಕ್ಲಿಂಟನ್ ಎಂಬಾತನ ಪರಿಚಯವಾಗಿತ್ತು.ಇಬ್ಬರೂ ಮೇಡ್ ಫಾರ್ ಈಚ್ ಅದರ್ಸ್ ಎಂಬಂತೆ ಸುತ್ತಾಟ ಕೂಡ ಮಾಡಿದ್ದರು. ಇವರಿಬ್ಬರ ಪ್ರೀತಿ ಪ್ರೇಮ ಪ್ರಯಣದ ವಿಚಾರ ಇಬ್ಬರ ಮನೆಯವರಿಗೂ ಗೊತ್ತಾಗಿತ್ತು.ವಿಚಾರ ತಿಳಿದ ಪ್ರೇಯಸಿ ಜಾನ್ ಪ್ರೆಸಿಲ್ಲಾಳ ಕುಟುಂಬಸ್ಥರು ಕ್ಲಿಂಟನ್ ನ ಮನೆಯವರಿಗೆ ವಿಚಾರ ತಿಳಿಸಿದ್ದರು. ಆದರೆ, ಕ್ಲಿಂಟನ್ ಗೆ ಸಹೋದರಿ ಇದ್ದ ಕಾರಣ ಆಕೆಯ ವಿವಾಹ ಆಗುವವರೆಗೂ ಕ್ಲಿಂಟನ್ ಮದುವಗೆ ಕುಟುಂಬಸ್ಥರು ನಿರಾಕರಿಸಿದ್ದರು.
ಕ್ಲಿಂಟನ್ ಕುಟುಂಬಸ್ಥರು ವಿವಾಹಕ್ಕೆ ನಿರಾಕರಿಸಿದ್ದ ಕಾರಣ 2022 ರಲ್ಲಿ ತಮಿಳುನಾಡು ಮೂಲದ ಸ್ಟೀಫನ್ ರಾಜ್ ಎಂಬಾತನೊಂದಿಗೆ ಪ್ರೆಸಿಲ್ಲಾಳ ವಿವಾಹ ನಡೆದಿತ್ತು. ವಿವಾಹದ ಬಳಿಕ ಮಾಜಿ ಪ್ರಿಯಕರ ಕ್ಲಿಂಟನ್, ಪ್ರೆಸಿಲ್ಲಾಳ ಪ್ರೈವೇಟ್ ಫೋಟೊ ಹಿಡಿದು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಪತಿ ಸ್ಟೀಫನ್ ರಾಜ್ ಗೂ ಪ್ರೆಸಿಲ್ಲಾಳ ಫೋಟೊ ಕಳುಹಿಸಿ ಟಾರ್ಚರ್ ಕೊಡಲು ಶುರು ಮಾಡಿದ್ದ. ಪತ್ನಿಯ ಲವ್ವಿ ಡವ್ವಿ ವಿಚಾರ ತಿಳಿದು ಸ್ಟೀಫನ್ ರಾಜ್ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಈ ವೇಳೆ ಪತಿ ಸ್ಟೀಫನ್ ಗೆ ವಿಚ್ಛೇದನ ನೀಡಿ ಬಾ ನಾನು ಮದ್ವೆ ಆಗುತ್ತೇನೆ ಎಂದು ಕ್ಲಿಂಟನ್, ಪ್ರೆಸಿಲ್ಲಾಗೆ ಹೇಳಿದ್ದ ಎನ್ನಲಾಗಿದೆ.
ಸೃಷ್ಟಿ ಸಿರಿಯಾಗಿ, ಭೂಮಿ ತಂಪಾತಲೇ ಪರಾಕ್.., ವರ್ಷ ಭವಿಷ್ಯ ನುಡಿದ ಕಾರ್ಣಿಕ, ರೈತರಿಗೆ ಸಂತಸ!
ವಿಚ್ಛೇದನ ಬಳಿಕ ಮದುವೆ ಆಗದೆ ಪ್ರೆಸಿಲ್ಲಾ ಜೊತೆ ಕ್ಲಿಂಟನ್ 10 ತಿಂಗಳ ಸಂಸಾರ ಕೂಡ ನಡೆಸಿದ್ದ. ಪ್ರೆಸಿಲ್ಲಾ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ 3 ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದ ಎನ್ನಲಾಗಿದೆ. ಇದೆ ಫ್ರೆಬ್ರವರಿ 12 ರಂದು ಕೊಳ್ಳೇಗಾಲದಲ್ಲಿ ಕ್ಲಿಂಟನ್ ಹಾಗೂ ಪ್ರೆಸಿಲ್ಲಾಗೆ ರಿಜಿಸ್ಟರ್ ಮ್ಯಾರೇಜ್ ಫಿಕ್ಸ್ ಆಗಿತ್ತು. ಆದರೆ, ರಿಜಿಸ್ಟರ್ ಮ್ಯಾರೇಜ್ ಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕ್ಲಿಂಟನ್ ಎಸ್ಕೇಪ್ ಆಗಿದ್ದಾನೆ. ಪರಾರಿಯಾದ ಕ್ಲಿಂಟನ್ ನ ಹುಡುಕಿಕೊಡಿ ಎಂದು ನೊಂದ ಪ್ರಿಯತಮೆಯ ಕಣ್ಣೀರಿಟ್ಟಿದ್ದಾಳೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯಪುರದಲ್ಲಿ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ