ಗಂಡನಿಲ್ಲವೆಂದು ಲೈನ್‌ಮ್ಯಾನ್ ಸಖ್ಯ ಬೆಳೆಸಿದ ಗೃಹಿಣಿ, ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

Published : Dec 16, 2023, 06:29 PM IST
ಗಂಡನಿಲ್ಲವೆಂದು ಲೈನ್‌ಮ್ಯಾನ್ ಸಖ್ಯ ಬೆಳೆಸಿದ ಗೃಹಿಣಿ, ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಸಾರಾಂಶ

ಗಂಡನಿಲ್ಲವೆಂದು ಲೈನ್‌ಮ್ಯಾನ್ ಸಂಬಂಧದಲ್ಲಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಚಾಮರಾಜನಗರ (ಡಿ.16): ಮದುವೆಯಾಗಿ ಸಂಸಾರ ಈಗಷ್ಟೇ ಶುರುವಾಗಿದೆ ಎನ್ನುವಷ್ಟರಲ್ಲೇ ವಿಧಿಯಾಟಕ್ಕೆ ಗಂಡ ಬಲಿಯಾಗುತ್ತಾನೆ. ಆದರೆ, ಗಂಡನಿಲ್ಲದ ನಂತರ ಈಕೆಗೆ ಹರೆಯದ ವಯಸ್ಸಾದ್ದರಿಂದ ಲೈನ್‌ಮ್ಯಾನ್‌ನ ಸಖ್ಯವನ್ನು ಬೆಳೆಸಿ ಲಿವಿಂಗ್‌ ಟುಗೆದರ್‌ ರೀತಿ ವಾಸಿಸುತ್ತಿದ್ದಳು. ಆದರೆ, ಅವರ ಸಹವಾಸವನ್ನು ಬಿಡುವಂತೆ ಮನೆಯವರು ಗಲಾಟೆಯನ್ನು ಮಾಡಿದ್ದರು. ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ ಲಿವಿಂಗ್ ಟುಗೆದರ್‌ನಲ್ಲಿದ್ದ ಗೃಹಿಣಿ ಈಗ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

ಹೌದು, ಅನುಮಾನಸ್ಪದ ರೀತಿಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಆದರ್ಶನಗರದ ಮನೆಯೊಂದರಲ್ಲಿ ನಡೆದಿದೆ. ಅಗರ ಗ್ರಾಮದ ರೇಖಾ (27) ಮೃತ ದುರ್ದೈವಿ ಆಗಿದ್ದಾಳೆ. ಕಳೆದ ಎರೆಡು ವರ್ಷದ ಹಿಂದೆ ರೇಖಾಳ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಸಾವಿನ ಬಳಿಕ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದನ ಸಹವಾಸದಲ್ಲಿದ್ದಳು. ಇಬ್ಬರ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್‌ನಲ್ಲಿ ವಾಸವಾಗಿದ್ದರು.

ಮಗಳ ಮೇಲೆ ಆಸೆ, ಅತ್ತೆ ಮೇಲೆ ಪ್ರೀತಿ; ರಾತ್ರಿ ಚಕ್ಕಂದವಾಡ್ತಿದ್ದಾಗ ಗ್ರಾಮಸ್ಥರ ಕೈಗೇ ಸಿಕ್ಕಿಬಿದ್ದ ಅತ್ತೆ-ಅಳಿಯ!

ಈ ವಿಚಾರವನ್ನು ತಿಳಿದ ಮನೆಯವರು ರೇಖಾ ಮತ್ತು ಆಕೆಯೊಂದಿಗೆ ಸಂಬಂಧದಲ್ಲಿದ್ದವನ ಜೊತೆಗೆ ಗಲಾಟೆ ಮಾಡಿದ್ದರು. ಮನೆಯಲ್ಲಿ ಎಷ್ಟೇ ಗಲಾಟೆ ಗದ್ದಲವಾದ್ರು ರೇಖಾ ಮಾತ್ರ ನಾಗೇಂದ್ರ ಅಲಿಯಾಸ್ ಆನಂದನ ಸಕ್ಯ ಬಿಟ್ಟಿರಲಿಲ್ಲ. ಈಗ ಅದೇ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದನ ಮನೆಯಲ್ಲಿ ರೇಖಾಳ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೆಳೆಯ ನಾಗೇಂದ್ರ ಅಲಿಯಾಸ್ ಆನಂದನೆ ರೇಖಾಳನ್ನ ಹೊಡೆದು ಕೊಂದಿರುವ ಆರೋಪ ಕೇಳಿಬಂದಿದೆ.

ಪ್ರೀತಿಯ ಹೆಸರಿನಲ್ಲಿ ಸೆಕ್ಸ್-ದೋಖಾ! ತಾನು ಅನುಭವಿಸಿ ಸ್ನೇಹಿತರ ಜೊತೆಗೂ ಮಲಗಿಸಿದ ಕಿರಾತಕ!

ಈ ಘಟನೆ ತಿಳಿಯುತ್ತಿದ್ದಂತೆ ಕೊಗ್ಳೆಗಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃದೇಹವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲು ಮುಂದಾದಾಗ, ಯಾವುದೇ ಕಾರಣಕ್ಕೂ ಶವ ಮುಟ್ಟದಂತೆ ಮೃತಳ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ನೀವು ಆರೋಪಿಯನ್ನು ಬಂಧಿಸಿದ ನಂತರವೇ ಶವವನ್ನು ಕೊಂಡೊಯ್ಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಸಂಬಂಧಿಕರ ಮನವೊಲಿಸಿದ ಪೊಲೀಸರು ಆಕೆಯ ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು