
ಚಿತ್ರದುರ್ಗ (ಅ.24): ಸಂಬಂಧಿ ಯುವತಿಯ ಮೇಲೆ ನಿರಂತರ ಅತ್ಯಾಚಾರ ಮಾಡಿದ ಆರೋಪದ ಮೇಲೆ ಚಳ್ಳಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಬಿ. ಉಮೇಶ್‌ರನ್ನು ದಾವಣಗೆರೆ ವಲಯ ಐಜಿಪಿ ತ್ಯಾಗರಾಜನ್ ಅಮಾನತು ಮಾಡಿದ್ದಾರೆ. ನಿವೇಶನ ಸಂಬಂಧ ಸಮಸ್ಯೆ ಪರಿಹಿಸುವಂತೆ ಯುವತಿ ಕುಟುಂಬದವರು ಉಮೇಶ್ ಬಳಿ ಸಹಾಯ ಕೇಳಿದ್ದರು. ಆದರೆ ಉಮೇಶ್ ಸಹಾಯ ಮಾಡುವ ಬದಲು ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಏನಿದು ಪ್ರಕರಣ?:
ಈಗಾಗಲೇ ಎರಡು ಮದುವೆ ಆಗಿದ್ದರೂ ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿರುವ ಚಳ್ಳಕೆರೆ ಠಾಣೆ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿಗೆ ಸಂಬಂಧದಲ್ಲಿ ಸೋದರ ಮಾವನ ಮಗನಾಗಿರುವ ಉಮೇಶ್, ಐದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗ, ನಿವೇಶನ ನೆಪದಲ್ಲಿ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಯುವತಿ ನಿರಾಕರಿಸಿದಾಗ ಮಾನಹಾನಿ ಬೆದರಿಕೆ ಹಾಕುವ ಮೂಲಕ ಬಲತ್ಕಾರದಿಂದ ಅತ್ಯಾಚಾರವೆಸಗಿದ್ದಾನೆ ಅದರ ಪರಿಣಾಮವಾಗಿ ಈಗಾಗಲೇ ಯುವತಿಗೆ ಐದು ಬಾರಿ ಗರ್ಭಪಾತ ಮಾಡಿಸಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
ರಾಮನಗರದಲ್ಲಿ ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ, ಬಲವಂತದ ಮದುವೆ
ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಕೇಳಿದ್ದರು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾರೆ. ಬಳಿಕ ಯುವತಿ ಶಿವಮೊಗ್ಗದ ಬಿಇಡಿ ಓದುತ್ತಿದ್ದಾಗಲೂ ಮಂಚಕ್ಕೆ ಕರೆದಿರುವ ಇನ್ಸ್‌ಪೆಕ್ಟರ್. ಯುವತಿ ದಾವಣಗೆರೆಗೆ ಬರಲು ಒಪ್ಪದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ. ಮಾಡಿದ್ದಾನೆಂದು ಯುವತಿ ಆರೋಪಿಸಿದ್ದಾಳೆ.
ಈಗಾಗಲೇ ಎರಡು ಮದುವೆ ಆಗಿರುವ ಸಿಪಿಐ ಉಮೇಶ್‌ಗೆ ಮೂರನೇ ಹೆಂಡತಿಯಾಗಿರುವಂತೆ ಯುವತಿಗೆ ಒತ್ತಡ ಹಾಕಿದ್ದಾನೆ. ಮದುವೆ ಆಗಲು ನಿರಾಕರಿಸಿದ್ದ ಯುವತಿಗೆ ಬೆದರಿಕೆ ಹಾಕಿದ್ದಾನೆ. ದಾವಣಗೆರೆ ನಿವೇಶನ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ಬರುವಂತೆ ಮಾಡ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
Crime News: ಆಸ್ಪತ್ರೆಯಲ್ಲಿ ನರ್ಸ್ ಕಟ್ಟಿಹಾಕಿ ಗ್ಯಾಂಗ್ ರೇಪ್; ಅಪ್ರಾಪ್ತ ಸೇರಿ ಮೂವರ ಬಂಧನ
ಸಿಪಿಐ ಉಮೇಶ್ ವಿರುದ್ಧ ಕಲಂ 376 ಕ್ಲಾಸ್ (2)(k)(n), 323 , 504, 506 ಐಪಿಸಿ ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಚಳ್ಳಕೆರೆ ಮಹಿಳಾ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ