ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲೂ ಇದೀಗ ಜಾರಕಿಹೊಳಿಗೆ ಮತ್ತೊಂದು ಆಘಾತವಾಗಿದೆ.
ಬೆಂಗಳೂರು, (ಮಾ.26): ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ ಯುವತಿ ಪರವಾಗಿ ವಕೀಲ ಜಗದೀಶ್ ಕೆ.ಎನ್. ನೇತೃತ್ವದ ತಂಡ ಪೊಲೀಸ್ ಕಮಿಷನರ್ ಕಚೇರಿಗೆ ಇಂದು (ಶುಕ್ರವಾರ) ಮಧ್ಯಾಹ್ನ ದೂರು ನೀಡಿದೆ.
ಶುಕ್ರವಾರ ಬೆಳಗ್ಗೆ 3ನೇ ವಿಡಿಯೋ ರಿಲೀಸ್ ಮಾಡಿದ್ದ 'ಸಂತ್ರಸ್ತ' ಯುವತಿ, ರಾಜ್ಯದ ಜನತೆ, ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷದವರು ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಇಷ್ಟು ದಿನ ಕಾಡುತ್ತಿದ್ದ ಜೀವ ಭಯ ನನ್ನನ್ನು ದೂರವಾಗಿದೆ. ನನ್ನಪರ ವಕೀಲರಾದ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿವೆ ಎಂದಿದ್ದಳು.
ಅದರಂತೆ ವಕೀಲ ಜಗದೀಶ್ ನೇತೃತ್ವದಲ್ಲಿ 6 ಜನರ ವಕೀಲರ ತಂಡ ಕಮಿಷನರ್ ಕಚೇರಿಗೆ ಆಗಮಿಸಿ ದೂರು ನೀಡಿದೆ. ಆ ದೂರಿನ ಪ್ರತಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.
ಕೆಲಸದ ಆಮೀಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ್ರು ಎಂದು ಸೀಡಿ ಲೇಡಿ ದೂರು
ನಮ್ಮನ್ನು ನಂಬಿ ಯುವತಿ ಲಿಖಿತ ದೂರು ಕಳುಹಿಸಿದ್ದಾಳೆ. ಅದನ್ನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ತಲುಪಿಸಿದ್ದೇವೆ. ಆಕೆ ಸದ್ಯ ಪ್ರಾಣ ಭೀತಿಯಲ್ಲಿರುವುದರಿಂದ ಪತ್ರ ಹೇಗೆ ಕಳುಹಿಸಿದಳು ಎಂಬ ಮೂಲವನ್ನು ಹೇಳಲು ಸಾಧ್ಯವಿಲ್ಲ. ಯುವತಿಗೆ ತಾನು ಸೇಫ್ ಅನಿಸಿದರೆ ಆಕೆಯೇ ಮುಂದೆ ಬಂದು ಸ್ವತಃ ಹೇಳಿಕೆ ನೀಡಲು ಸಿದ್ಧವಾಗಿದ್ದಾಳೆ ಎಂದು ವಕೀಲ ಜಗದೀಶ್ ಹೇಳಿದ್ದಾರೆ.
ಕಬ್ಬನ್ ಪಾರ್ಕ್ ಸೇಷನ್‌ಗೆ ವರ್ಗಾವಣೆ
ಹೌದು...ವಕೀಲರು ಕೊಟ್ಟ ದೂರನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವಂತೆ ಕಮಿಷನರ್ ಕಮಲ್ ಪಂತ್ ಅವರು ಡಿಸಿಪಿ ಅನುಚೇತ್‌ಗೆ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದೂರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಲಿದೆ.