
ಬೆಂಗಳೂರು (ಏ.15): ‘ನಾನು ಈಗಲೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನ್ಯಾಯಾಲಯದಲ್ಲಿ 164ರಡಿ ನೀಡಿರುವ ಅತ್ಯಾಚಾರ ಆರೋಪದ ಹೇಳಿಕೆ ಬದ್ಧಳಾಗಿದ್ದೇನೆ. ನನ್ನ ತಂದೆ, ತಾಯಿ ಮನವೊಲಿಸಿದರೂ ನಾನು ಸತ್ಯವನ್ನೇ ನುಡಿಯುತ್ತೇನೆ’
- ಇದು ಸಿ.ಡಿ. ಪ್ರಕರಣ ಸಂಬಂಧ ತನ್ನ ಹೇಳಿಕೆ ಬದಲಾಯಿಸಲಾಗಿದೆ ಎಂಬ ವಂದತಿಗೆ ಯುವತಿ ನೀಡಿರುವ ಸ್ಪಷ್ಟನೆ.
ಒಂದೆಡೆ ಕೊರೋನಾ ಸೋಂಕಿತರಾಗಿ ಮಾಜಿ ಸಚಿವರು ಕ್ವಾರಂಟೈನ್‌ನಲ್ಲಿದ್ದರೆ, ಮತ್ತೊಂದೆಡೆ ಅವರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಯುವತಿ ದಿಢೀರನೇ ಹೇಳಿಕೆ ಬದಲಾಯಿಸಿದ್ದಾಳೆ ಎಂದು ಎರಡು ದಿನಗಳ ಹಿಂದೆ ಸಾಕಷ್ಟುವದಂತಿ ಹಬ್ಬಿತ್ತು. ಇದನ್ನು ಬಲವಾಗಿ ಅಲ್ಲಗೆಳೆದ ಯುವತಿ, ಯುಗಾದಿ ಹಬ್ಬದ ದಿನವಾದ ಮಂಗಳವಾರ ಬಿಡುಗಡೆಗೊಳಿಸಿದ 1.20 ನಿಮಿಷದ ವಿಡಿಯೋ ಹಾಗೂ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ನಿಲುವಿಗೆ ಬದ್ಧಳಾಗಿರುವುದಾಗಿ ತಿಳಿಸಿದ್ದಾಳೆ.
ರಾರಾ ಜಾರಕಿ ಎಂದವಳು ಒನ್ಸ್ ಮೋರ್ ಅಂದಳಾ ಸೀಡಿ ಲೇಡಿ..? .
ಅಲ್ಲದೆ, ‘ನನ್ನ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಪ್ರಸಾರ ಮಾಡುತ್ತಿರುವ ಹಿಂದೆ ಷಡ್ಯಂತ್ರವಿದೆ. ನಾನು ಯಾವುದೇ ಕಾರಣಕ್ಕೂ ಹೇಳಿಕೆ ಬದಲಾಯಿಸುವುದಿಲ್ಲ. ನನ್ನ ಹೆತ್ತವರು ಹೇಳಿದರೂ ಸತ್ಯವನ್ನೇ ನುಡಿಯುತ್ತೇನೆ ಎಂದು ಆಕೆ ಪುನರುಚ್ಚರಿಸಿದ್ದಾಳೆ. ಇದರೊಂದಿಗೆ ಮಾಜಿ ಸಚಿವರಿಗೆ ಎಸ್‌ಐಟಿ ಬಂಧನ ಭೀತಿ ಮತ್ತಷ್ಟುಹೆಚ್ಚಾಗಿದೆ’ ಎಂಬ ಮಾತುಗಳು ಕೇಳಿ ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ