ಸಿಸಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ/ ರೇಸ್ ಕೋರ್ಸ್ ಕಚೇರಿ ಮೇಲೆ ದಾಳಿ/ 40 ಅಧಿಕ ಮಂದಿ ಬಂಧನ/ ಮಾಲೀಕರು ಮತ್ತು ಬುಕ್ಕಿಗಳ ಸೆರೆ
ಬೆಂಗಳೂರು(ಡಿ. 06) ಬೆಂಗಳೂರು ರೇಸ್ ಕೋರ್ಸ್ ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಿದೆ. ಇದುವರೆಗೂ ಬುಕ್ಕಿಗಳು, ಮಾಲೀಕರು, ಸಿಬ್ಬಂದಿ ಸೇರಿದಂತೆ ಅಕ್ರಮದಲ್ಲಿ ಭಾಗಿಯಾಗಿದ್ದ 40 ಕ್ಕೂ ಜನರ ಬಂಧನವಾಗಿದೆ.
ಬಂಧಿತರಿಂದ ಬೆಟ್ಟಿಂಗ್ ಗೆ ಬಳಸಲಾಗುತ್ತಿದ್ದ ಸುಮಾರು 60 ಲಕ್ಷ ನಗದು ವಶ ಪಡಿಸಿಕೊಳ್ಳಲಾಗಿದೆ. ಹಣ ಸೇರಿದಂತೆ ಬೆಟ್ಟಿಂಗ್ ಗೆ ಬಳಸಲಾಗುತ್ತಿದ್ದ ಬುಕ್ಸ್, ಬಿಲ್ಸ್ ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಅಸಲಿ ಬಿಲ್ ಗಳನ್ನು ತೋರಿಸದೆ ತಪ್ಪು ಲೆಕ್ಕ ನೀಡಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಬೆಳಕಿಗೆ ಬಂದಿದೆ. ಸರ್ಕಾರದ ಬದಲಿಗೆ ಇವರೇ ಅಕ್ರಮವಾಗಿ ಬೆಟ್ಟಿಂಗ್ ನಡೆಸಿ ಬಾಜಿದಾರರಿಂದಲೂ ಹಣ ವಂಚಿಸುತ್ತಿದ್ದರು ಎಂಬ ಆತಂಕಕಾರಿ ಮಾಹಿತಿಯೂ ಬಹಿರಂಗವಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಮುಖ್ಯ ಕಚೇರಿಗೆ ಸಿಸಿಬಿ ಪೊಲೀಸರು ಕರೆದೊಯ್ದಿದ್ದಾರೆ.
ಕೆಪಿಎಲ್ ಬೆಟ್ಟಿಂಗ್ ಗೂ- ಹನಿಟ್ರ್ಯಾಪ್ ಗೂ ಎತ್ತಿಂದೆತ್ತಣ ಸಂಬಂಧ
ಈ ಬೆಟ್ಟಿಂಗ್ ಪ್ರಕರಣ ಕರ್ನಾಟಕ ಕ್ರಿಕೆಟ್ ಜಗತ್ತನ್ನು ಕಂಗಾಲು ಮಾಡಿತ್ತು. ಕೆಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ಕಬಂಧ ಬಾಹುಗಳು ಕನ್ನಡ ಚಿತ್ರರಂಗಕ್ಕೂ ವ್ಯಾಪಿಸಿದ್ದು, ತಮ್ಮ ಬಲೆಗೆ ಆಟಗಾರರನ್ನು ಬೀಳಿಸಿಕೊಳ್ಳಲು ಬುಕ್ಕಿಗಳು ಮೂವರು ಖ್ಯಾತ ನಟಿಯರನ್ನು ‘ಹನಿಟ್ರ್ಯಾಪ್’ನಲ್ಲಿ ಬಳಸಿದ್ದಾರೆ ಎಂದು ಸಿಸಿಬಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ಕೆಪಿಎಲ್ ಹಗರಣದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರು ಇದರಲ್ಲಿ ಭಾಗವಹಿಸಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದ್ದು ತನಿಖೆ ನಡೆಯುತ್ತಿದೆ. ಅದೇ ಸಂದರ್ಭದಲ್ಲಿ ಇದೀಗ ರೇಸ್ ಕೋರ್ಸ್ ಮೇಲೆಯೂ ಬುಕ್ಕಿಗಳ ನೆರಳು ಕಂಡಿದೆ.