
ಬೆಂಗಳೂರು (ಆ.25): ಅಕ್ರಮ ಚಟುವಟಿಕೆಗಳ ಮಾಹಿತಿ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಶನಿವಾರ ನಸುಕಿನಲ್ಲಿ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಡ್ರಗ್ಸ್ ಮಾರಾಟ ಮತ್ತು ಭಯೋತ್ಪಾದಕ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ಸಭೆಗಳು ಸೇರಿ ಕಾನೂನು ಬಾಹಿರ ಚಟುವಟಿಕೆಗಳ ನಡೆದಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತು. ಈ ಹಿನ್ನೆಲೆ ಜೈಲಿನ ಮೇಲೆ ಶನಿವಾರ ನಸುಕಿನ 4.30 ಗಂಟೆಗೆ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ನಾಲ್ವರು ಎಸಿಪಿಗಳನ್ನೊಳಗೊಂಡ 100ಕ್ಕೂ ಹೆಚ್ಚಿನ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ.
ಚಿತ್ರದುರ್ಗ: ಅಪ್ರಾಪ್ತೆಯೊಂದಿಗೆ ಮದುವೆ ಬೇಡ ಎಂದ ತಾಯಿ, ಯುವಕ ಆತ್ಮಹತ್ಯೆ
ಶಂಕಿತ ಉಗ್ರರು, ಸಜಾ ಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ಬ್ಯಾರಕ್‌ಗಳನ್ನು ನಾಲ್ಕು ತಾಸುಗಳು ಸಿಸಿಬಿ ಪೊಲೀಸರು ಜಾಲಾಡಿದ್ದಾರೆ. ಆದರೆ ಈ ದಾಳಿ ವೇಳೆ ಮಾರಕಾಸ್ತ್ರ ಹಾಗೂ ಮೊಬೈಲ್‌ಗಳು ಸೇರಿ ಇತರೆ ವಸ್ತುಗಳು ಪತ್ತೆಯಾಗಿಲ್ಲ.
ನಿದ್ರೆಯಲ್ಲಿದ್ದ ನಟ ದರ್ಶನ್:
ಜೈಲಿನ ಮೇಲೆ ಸಿಸಿಬಿ ದಾಳಿ ನಡೆಸಿದ ವೇಳೆ ತಮ್ಮ ಸೆಲ್‌ನಲ್ಲಿ ನಟ ದರ್ಶನ್ ಗಾಢ ನಿದ್ರೆಯಲ್ಲಿ ದ್ದರು ಎಂದು ತಿಳಿದು ಬಂದಿದೆ. ದರ್ಶನ್ ತಮ್ಮ ಸೆಲ್‌ನಲ್ಲಿ ಬೆಡ್ ಶೀಟ್ ಹಾಸಿಕೊಂಡು ಸಾಧಾರಾಣ ವಿಚಾರಣಾ ಕೈದಿಯಂತೆ ಮಲ ಗಿದ್ದರು. ದಾಳಿ ವೇಳೆ ಅವರ ಸೆಲ್‌ಗೂ ಪೊಲೀಸರು ತೆರಳಿ ತಪಾಸಣೆ ನಡೆಸಿದರು. ಆದರೆ ಆ ವೇಳೆ ದರ್ಶನ್ ನಿದ್ರೆಯಲ್ಲಿದ್ದ ಕಾರಣಕ್ಕೆ ಅವರನ್ನು ವಿಚಾರಣೆ ನಡೆಸಲಿಲ್ಲ. ಸೆಲ್‌ನಲ್ಲಿ ನಿಯಮ ಬಾಹಿರ ವ್ಯವಸ್ಥೆ ಅಥವಾ ವಸ್ತು ಗಳು ಪತ್ತೆಯಾಗಲಿಲ್ಲ. ಹೀಗಾಗಿ ನಿದ್ರೆಯಲ್ಲಿದ್ದ ದರ್ಶನ್‌ಗೆ ಅನಗತ್ಯ ತೊಂದರೆ ಕೊಡುವುದು ಬೇಡವೆಂದು ಸಿಬ್ಬಂದಿಗೆ ಅಧಿಕಾರಿಗಳು ಸೂಚಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ