ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಧಾರವಾಡ ಮೂಲದ ಯೋಧ!

By Ravi Janekal  |  First Published Jun 18, 2024, 7:34 PM IST

ಸಿಆರ್‌ಪಿಎಫ್ ಯೋಧನೋರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಬ್ಬಿನಹೊಳೆ ಬಳಿ ನಡೆದಿದೆ. ರೇಖಾ(ಹೆಸರು ಬದಲಿಸಿದೆ) (40), ದೂರು ನೀಡಿದ ಮಹಿಳೆ, ಧಾರವಾಡದ ಅಣ್ಣಿಗೇರಿ ಮೂಲದ ಕೊಟ್ರೇಶ್ (46 ವರ್ಷ) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ.


ಕಾರವಾರ, ಉತ್ತರಕನ್ನಡ (ಜೂ.18): ಸಿಆರ್‌ಪಿಎಫ್ ಯೋಧನೋರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಬ್ಬಿನಹೊಳೆ ಬಳಿ ನಡೆದಿದೆ.

ರೇಖಾ (40), ದೂರು ನೀಡಿದ ಮಹಿಳೆ, ಧಾರವಾಡದ ಅಣ್ಣಿಗೇರಿ ಮೂಲದ ಕೊಟ್ರೇಶ್ (46 ವರ್ಷ) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ.

Tap to resize

Latest Videos

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲು ನಾಲಾಯಕ್: ಶಾಸಕ ಜನಾರ್ದನ ರೆಡ್ಡಿ

ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಟ್ರೇಶ್. ಸಂತ್ರಸ್ತ ಮಹಿಳೆ ಸಂಬಂಧಿಯಾಗಿದ್ದಾರೆ. ಕೊಟ್ರೇಶ್ ಮಹಿಳೆಯ ಅಕ್ಕನ ಗಂಡನ ತಮ್ಮ ಎಂದು ಹೇಳಾಗಿದೆ. ಅಕ್ಕನ ಬಳಿ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಕರೆದುಕೊಂಡು ಹೋಗಿರುವ ಆರೋಪಿ ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಅತ್ಯಾಚಾರಕ್ಕೆ ಮುಂದಾಗಿ ಶಾಕ್ ಆಗಿರುವ ಮಹಿಳೆ. ಯೋಧನ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ.. ವಿರೋಧ ವ್ಯಕ್ತಪಡಿಸಿದ್ದಕ್ಕೆ ಕುಪಿತಗೊಂಡು ಸಂತ್ರಸ್ತೆ ಮೇಲೆ ಕಾರು ಹತ್ತಿಸಿ ಕೊಲೆ ಯತ್ನಿಸಿರುವ ಆರೋಪಿ.  ಸದ್ಯ ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಮಹಿಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.

click me!