Kidnap Case: ಆಶ್ರಯ ನೀಡುವ ನೆಪದಲ್ಲಿ ನವಜಾತು ಶಿಶು ಅಪಹರಿಸಿದ ಸ್ವಾಮೀಜಿ: ಮೂವರ ವಿರುದ್ಧ ಪ್ರಕರಣ

Kannadaprabha News   | Asianet News
Published : Feb 22, 2022, 10:15 AM ISTUpdated : Feb 22, 2022, 10:20 AM IST
Kidnap Case: ಆಶ್ರಯ ನೀಡುವ ನೆಪದಲ್ಲಿ ನವಜಾತು ಶಿಶು ಅಪಹರಿಸಿದ ಸ್ವಾಮೀಜಿ: ಮೂವರ ವಿರುದ್ಧ ಪ್ರಕರಣ

ಸಾರಾಂಶ

*  ಬಾಣಂತಿಗೆ ಸುಳ್ಳು ಹೇಳಿ ನವಜಾತು ಶಿಶು ಅಪಹರಣ *  ಮಗುವಿಗೆ ಅನಾರೋಗ್ಯವಾಗಿ ಆಸ್ಪತ್ರೆಗೆ ತೆರಳಿದಾಗ ನಿಜಾಂಶ ಬಯಲು *  ಈ ಸಂಬಂಧ ಹರಪನಹಳ್ಳಿ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು   

ಹರಪನಹಳ್ಳಿ(ಫೆ.22):  ಮಗು ಸಾವನ್ನಪ್ಪಿದೆ ಎಂದು ಬಾಣಂತಿಗೆ ಸುಳ್ಳು ಹೇಳಿ ನವಜಾತು ಶಿಶುವನ್ನು(Infant) ಅಪಹರಣ(Kidnap) ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಸ್ವಾಮೀಜಿ(Swamiji) ಸೇರಿದಂತೆ ಮೂವರ ವಿರುದ್ಧ ಹರಪನಹಳ್ಳಿ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಚ್ಚವನಹಳ್ಳಿ ಹಾಲಸ್ವಾಮಿ ಮಠದ ಹಾಲಸ್ವಾಮಿ(Halaswamy), ಕಂಚಿಕೇರಿಯ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಸಿ. ಪ್ರಕಾಶ ತನಿಖೆ ಆರಂಭಿಸಿದ್ದಾರೆ.

Crime News ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪCrime News 

ಆಗಿದ್ದೇನು?:

ಬೆಳಗಾವಿ(Belagavi) ಮೂಲದ ವಸಂತಾ ಬೆಂಗಳೂರಿನಲ್ಲಿ(Bengaluru) ವಾಸವಿದ್ದು ಪಿಜಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರು ಗರ್ಭಿಣಿಯಾಗಿ, ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರು. ಪರಿಚಯಸ್ಥರ ಮೂಲಕ ಆರೋಪಿತರು ಮಹಿಳೆಯನ್ನು(Women) ಭೇಟಿಯಾಗಿದ್ದಾರೆ. ಅವರಿಗೆ ಆಶ್ರಯ ನೀಡುವ ಭರವಸೆ ನೀಡಿ ಹಾಲಸ್ವಾಮಿ ಮಠಕ್ಕೆ(Halaswamy Matha) ಕರೆತಂದಿದ್ದಾರೆ. ಕೆಲಕಾಲ ಮಠದಲ್ಲೇ ಆಶ್ರಯ ನೀಡಿದ್ದರು. ಹೆರಿಗೆಗಾಗಿ ಹರಪನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಡಿ. 31ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಜ. 3ರಂದು ಮಗು ತೀರಿಕೊಂಡಿದೆ ಎಂದು ಹೇಳಿ ವಸಂತಾ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದರು. ಆ ಮಗುವನ್ನು ಆರೋಪಿತರಾದ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿಗೆ ಹಸ್ತಾಂತರಿಸಲಾಗಿತ್ತು. ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಈಚೆಗೆ ಮಗುವಿಗೆ ಅನಾರೋಗ್ಯವಾಗಿದ್ದರಿಂದ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗುವಿಗೆ ಚಿಕಿತ್ಸೆ(Treatment) ನೀಡಿದ, ಹೆರಿಗೆ ಮಾಡಿಸಿದ ವರದಿ ನೀಡುವಂತೆ ಕೇಳಿದ್ದಾರೆ. ಆಗ ದಂಪತಿ ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಅಲ್ಲಿನ ವೈದ್ಯರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಆಗ ಆರೋಪಿತರು(Accused) ಬೆಂಗಳೂರಿನಿಂದ ವಸಂತಾ ಅವರನ್ನು ಕರೆಯಿಸಿ, ಈ ಮಗು ನಿನ್ನದೆಂದು ಒಪ್ಪಿಕೊಂಡರೆ ನೀನೇ ಜೈಲಿಗೆ ಹೋಗುತ್ತೀಯಾ ಎಂದು ಬೆದರಿಸಿದ್ದಾರೆ ಎಂದು ಪಿಎಸ್‌ಐ ಸಿ. ಪ್ರಕಾಶ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ರಕ್ಷಣಾ ಘಟಕದ ಅಸಾಂಸ್ಥಿಕ ಮಕ್ಕಳ ರಕ್ಷಣಾಧಿಕಾರಿ ಎನ್‌.ಕೆ. ಚಂದ್ರಶೇಖರ ಅವರ ದೂರಿನ ಮೇರೆಗೆ ಹರಪನಹಳ್ಳಿ ಪೊಲೀಸ್‌(Police) ಠಾಣೆಯಲ್ಲಿ ನಿಚ್ಚವನಹಳ್ಳಿ ಹಾಲಸ್ವಾಮಿ ಮಠದ ಹಾಲಸ್ವಾಮಿ, ಗುರುರಾಜ ಹಾಗೂ ಪ್ರಿಯಾಂಕಾ ದಂಪತಿ ವಿರುದ್ಧ ಅಪಹರಣ, ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಹೆಂಡತಿಯ ತಂಗಿಯನ್ನೇ ಪ್ರೇಮದ ಬಲೆಗೆ ಬೀಳಿಸಿದ್ದ ಭಾವ: ಮದುವೆಗೆ ಒಪ್ಪದಿದ್ದಕ್ಕೆ ಕಿಡ್ನಾಪ್‌!

ಬೆಂಗಳೂರು: ಮದುವೆ ಮಾಡಿಕೊಳ್ಳಲು ತನ್ನ 20 ವರ್ಷದ ನಾದಿನಿಯನ್ನು(ಪತ್ನಿ ತಂಗಿ) ಅಪಹರಿಸಿದ್ದ ಭಾವ ಹಾಗೂ ಆತನ ಇಬ್ಬರು ಸಂಬಂಧಿಕರನ್ನು ಕೊಡಿಗೇಹಳ್ಳಿ (Kodigehalli) ಠಾಣೆ ಪೊಲೀಸರು ಬಂಧಿಸಿದ ಘಟನೆ ಜ. 24 ರಂದು ನಡೆದಿತ್ತು.

ತುಮಕೂರು (Tumkur) ಜಿಲ್ಲೆ ಕುಣಿಗಲ್‌ ತಾಲೂಕಿನ ಹೆಬ್ಬೂರು ಹೋಬಳಿಯ ದೇವರಾಜ್‌, ಆತನ ಸಂಬಂಧಿಕರಾದ ನವೀನ್‌ ಹಾಗೂ ಕುಮಾರ್‌ ಬಂಧಿತರು. ಆರೋಪಿಗಳಿಂದ ಕಾರು ಜಪ್ತಿ ಮಾಡಲಾಗಿತ್ತು. ಅಪಹೃತಳನ್ನು ರಕ್ಷಿಸಿ ಆಕೆಯ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು.

ಮತ್ತೊಬ್ಬ ನಿತ್ಯಾನಂದ: 'ಹಾಫ್ ನೇಕೆಡ್' ಸ್ವಾಮೀಜಿ ಮೋಡಿಗೆ ಮರುಳಾದ 16ರ ಬಾಲೆ!

ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಶನಿವಾರ ತನ್ನ ನಾದಿನಿಯನ್ನು ದೇವರಾಜ್‌ ಅಪಹರಿಸಿದ್ದ. ಬಳಿಕ ಸಕಲೇಶಪುರಕ್ಕೆ ಕರೆದೊಯ್ದಿದ್ದ ಆತ, ಅಲ್ಲಿಂದ ಮರಳುವಾಗ ಅರಸಿಕೆರೆಯ ಗಡಸಿ ಸಮೀಪ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದರು. 

ಪ್ರೇಮಕ್ಕೆ ಪೋಷಕರ ವಿರೋಧ: 

ಎಂಟು ವರ್ಷಗಳ ಹಿಂದೆ ತನ್ನೂರಿನ ನೆರೆ ಗ್ರಾಮದ ಸಂತ್ರಸ್ತೆಯ ಸೋದರಿ ಜತೆ ದೇವರಾಜ್‌ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹೆಬ್ಬೂರು ಹೋಬಳಿಯಲ್ಲಿ ಕೋಳಿ ಅಂಗಡಿಗಳಿಗೆ ಕೋಳಿ ಪೂರೈಸುವ ಕೆಲಸವನ್ನು ದೇವರಾಜ್‌ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ನಾದಿನಿ ಜತೆ ಆತನಿಗೆ ಪ್ರೇಮಾಂಕುರವಾಗಿತ್ತು. ಕೊನೆಗೆ ಮದುವೆ ಮಾಡಿಕೊಳ್ಳಲು ಇಬ್ಬರು ಮುಂದಾಗಿದ್ದರು. ಆದರೆ, ಸಂತ್ರಸ್ತೆಯ ಪೋಷಕರು ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?