ಮತ್ತೊಬ್ಬ ನಿತ್ಯಾನಂದ: 'ಹಾಫ್ ನೇಕೆಡ್' ಸ್ವಾಮೀಜಿ ಮೋಡಿಗೆ ಮರುಳಾದ 16ರ ಬಾಲೆ!
2019ರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ವಿಚಾರ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಈತನ ಮೋಡಿಗೆ ಮರುಳಾಗಿ ಅನೇಕ ಹೆಣ್ಣುಮಕ್ಕಳು ಆತನ ಆಶ್ರಮ ಸೇರಿದ್ದಾರೆ. ತಂದೆ ತಾಯಿ ಮಕ್ಕಳಿಂದ ದೂರವಾಗಿ ಕಣ್ನೀರಿಟ್ಟಿದ್ದಾರೆ. ಇದೀಗ ನಿತ್ಯಾನಂದನಂತಹ ಮತ್ತೊಬ್ಬ 'ಹಾಫ್ ನೇಕೆಡ್' ಸ್ವಾಮೀಜಿ ಕುಕೃತ್ಯ ಬೆಳಕಿಗೆ ಬಂದಿದ್ದು, ಈತನ ಮೋಡಿಗೆ ಮರುಳಾದ ಹದಿನಾರು ವರ್ಷದ ಬಾಲಕಿ ಹೆತ್ತ ತಂದೆ, ತಾಯಿಯಿಂದಲೂ ದೂರ ಸರಿಯಲು ಮುಂದಾಗಿದ್ದಾಳೆ.
'ಹಾಫ್ ನೇಕೆಡ್' ಸ್ವಾಮೀಜಿಯ ಮೋಡಿಗೊಳಗಾದ 16ರ ಬಾಲೆ. ಹೊತ್ತು ಹೆತ್ತು ಸಾಕಿದ ತಂದೆ ತಾಯಿಗೂ ಕ್ಯಾರೆ ಅನ್ನದ ಮಗಳು. ತಾಯಿ ಮನೆಗೆ ಬಾ ಎಂದರೂ ಬಾರದ 16ರ ಬಾಲಕಿ. ಸ್ವಾಮೀಜಿ ವಿರುದ್ಧ ಕಿಡ್ನ್ಯಾಪ್ ಮಾಡಿರೋ ಬಗ್ಗೆ ದೂರು ದಾಖಲು.
'ಹಾಫ್ ನೇಕೆಡ್' ಸ್ವಾಮೀಜಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ದೂರು. ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ ಹುಡುಗಿಯ ಮಾವ. ಗೃಹ ಸಚಿವರಿಂದ ಪೊಲೀಸ್ ಇಲಾಖೆಗೆ ಕ್ರಮ ಕೊಳ್ಳದಂತೆ ಹೇಳಿಸಿದ್ದಾನೆಂದೂ ಆರೋಪ.
ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಕೂಡ ಉಳಿದ ಸ್ವಾಮೀಜಿಗಳ ಜೊತೆ ಮೀಟಿಂಗ್ ಮಾಡಿದ್ದ ಆತ್ಮಾನಂದ. ಮಗಳ ಜೊತೆ ತಂದೆಯೂ ಸ್ವಾಮೀಜಿ ಮೋಡಿಯಲ್ಲಿ.
ಸ್ವಾಮೀಜಿ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಸಂಧರ್ಭದಲ್ಲಿ ಬಾಲಕಿಯನ್ನು ಚೈಲ್ಡ್ ವೆಲ್ಫೇರ್ ಗೆ ಒಪ್ಪಿಸಿದ್ದ ಪೊಲೀಸರು. ಬಳಿಕ ತಂದೆ ತಾಯಿ ಮಡಿಲಿಗೆ ಬಂದಿದ್ದ ಮಗಳು.
ಆದರೆ ಕಳೆದ 1 ನೇ ತಾರೀಕು ಮನೆಯವರನ್ನು ಯಾಮಾರಿಸಿ ಟಿವಿಎಸ್ ಸ್ಕೂಟರ್ನಲ್ಲಿ ಮತ್ತೆ ಸ್ವಾಮೀಜಿ ಮನೆಗೆ ಹೋಗಿದ್ದಾಳೆಂದು ಮನೆಯವರ ಆರೋಪ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಬೆಂಗಳೂರು ಸಮೀಪದ ಬಿಡದಿ ಸಮೀಪ ಆಶ್ರಮ ಹೊಂದಿದ್ದ ನಿತ್ಯಾನಂದ, ಅತ್ಯಾಚಾರ ಆರೋಪದ ಕುರಿತು ದೂರು ದಾಖಲಾದ ಕೂಡಲೇ 2019ರಲ್ಲಿ ರಾತ್ರೋರಾತ್ರಿ ವಿದೇಶಕ್ಕೆ ಪರಾರಿ ಆಗಿದ್ದ. ಈತನ ಪ್ರಕರಣ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು.
nithyananda
ಸದ್ಯ ಅಮೆರಿಕ ಸಮೀಪ ಖಾಸಗಿ ದ್ವೀಪವೊಂದನ್ನು ಖರೀದಿಸಿ ಕೈಲಾಸ ಎಂಬ ಹೆಸರಿಟ್ಟು ಬದುಕುತ್ತಿರುವ ಸ್ವಯಂಘೋಷಿತ ದೇವಮಾನವ. ಅಲ್ಲದೇ ತನ್ನ ವಿಚಿತ್ರ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ.