ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ; ಶಾಸಕ ಅರವಿಂದ್ ಬೆಲ್ಲದ್ ಸಹೋದರ ಸ್ಥಿತಿ ಗಂಭೀರ

By Ravi JanekalFirst Published Oct 6, 2022, 8:59 AM IST
Highlights

ರಾಜ್ಯದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಹಲವರು ಜನರ ಗಾಯಗೊಂಡಿದ್ದಾರೆ. ಧಾರವಾಡದಲ್ಲಿ ಡಿವೈಡರ್ ಡಿಕ್ಕಿಯಾಗಿ ಸಂಭವಿಸಿದ ಕಾರು ಅಪಘಾತದಲ್ಲಿ ಶಾಸಕ ಅರವಿಂದ್ ಬೆಲ್ಲದ್‌ರ ಸಹೋದರನ ಸ್ಥಿತಿ ಗಂಭಿರವಾಗಿದೆ.

 ಧಾರವಾಡ (ಅ.6):  ಜಿಲ್ಲೆಯಲ್ಲಿ ಮತ್ತೊಮ್ಮೆ ಅಪಘಾತ ಸಂಭವಿಸಿದೆ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು.ಅಪಘಾತ ನಡೆದ ಕಾರಿನಲ್ಲಿ ಶಾಸಕ ಅರವಿಂದ ಬೆಲ್ಲದ್ ಸಹೋದರ ಶಿವಣ್ಣ ಬೆಲ್ಲದ್ ಇದ್ದರು. ನಿನ್ನೆ ತಡರಾತ್ರಿ. ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ನಡೆದಿರುವ ಘಟನೆ. ಅಪಘಾತದಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಸಹೋದರ ಶಿವಣ್ಣ ಬೆಲ್ಲದ ಸ್ಥಿತಿ ಗಂಭೀರ. ಅಪಘಾತ ಸಂಭವಿಸುತ್ತಿದ್ದಂತೆ ಸಹಾಯಕ್ಕೆ ದಾವಿಸಿ ಬಂದ ಸ್ಥಳೀಯರು. ಈ ಗಂಭೀರ ಸ್ಥಿತಿಯಲ್ಲಿದ್ದ ಶಿವಣ್ಣ ಬೆಲ್ಲದ್. ತಕ್ಷಣ ನಗರದ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲು. ಉಪನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ಐಮಂಗಲ ಬಳಿ ಮತ್ತೆ ಅಪಘಾತ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ಮತ್ತೊಂದು ಅಪಘಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿ ಹೊಡಿದಿದೆ. ಈ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, 10ಕ್ಕೂ ಹೆಚ್ಚು ಮಂದಿಗೆ ಸಣ್ಣ ಪುಟ್ಟ ಗಾಯ.

ಬೆಂಗಳೂರಿಂದ ಗೋವಾಗೆ ಪ್ರವಾಸ ತೆರಳುತ್ತಿದ್ದ ಯಲಹಂಕ ಮೂಲದ ನಿವಾಸಿಗಳು. ಐಮಂಗಲದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್. ಅಪಘಾತಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಐಮಂಗಲ ಪಿಎಸ್‌ಐ ಮಂಜುನಾಥ ಭೇಟಿ ನೀಡಿದ್ದು, ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ವೇಗದ ಚಾಲನೆ ಕಾರಣವಾಗಿದೆಯೇ ಅಥವಾ ಚಾಲಕ ಮದ್ಯಪಾನ ಮಾಡಿದ್ದನೇ ಎಂಬ ತನಿಖೆ ಮುಂದುವರಿದಿದೆ.

ಚಿತ್ರದುರ್ಗದ ಹಿರಿಯೂರು ಹೆದ್ದಾರಿ ಅಪಘಾತ ವಲಯವಾಗಿದ್ದು ಅತಿ ಹೆಚ್ಚು ಅಪಘಾತಗಳು ಸಂಭವಿಸುವುದು ಇದೇ ಸ್ಥಳದಲ್ಲಿ ಎನ್ನಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಟ್ರಕ್ ಲಾರಿ ನಡುವೆ ಡಿಕ್ಕಿ ಆಗಿ ಸಂಭವಿಸಿದ ಅಪಘಾತದಲ್ಲಿ  ತಮಿಳುನಾಡು ಮೂಲದವರು ಸಾವನ್ನಪ್ಪಿದ್ದರು.

ಮಾಜಿ ಸಚಿವ ಬೆಳ್ಳುಬ್ಬಿ ಸಹೋದರನ ಪುತ್ರ ಬೈಕ್‌ ಅಪಘಾತದಲ್ಲಿ ಸಾವು

ಕೊಲ್ಹಾರ: ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯವರ ಸಹೋದರ ಮಲ್ಲಿಕಾರ್ಜುನ ಬೆಳ್ಳುಬ್ಬಿಯವರ ಪುತ್ರ ಸಚಿನ್‌ ಬೆಳ್ಳುಬ್ಬಿ (29) ಬುಧವಾರ ಸಂಜೆ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಚಿನ್‌ ತಮ್ಮ ಸ್ನೇಹಿತ ಕೂಬಕಡ್ಡಿ ನಿವಾಸಿ ಪರಸಪ್ಪ ಉಗ್ರಾಣ ಜೊತೆಗೂಡಿ ಬೈಕ್‌ ಮೇಲೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಹೋಗಿ, ಮರಳಿ ಬರುವಾಗ ಬಾಗಲಕೋಟೆ ಜಿಲ್ಲೆ ಕಲಾದಗಿ ಸಮೀಪದ ಯಡಹಳ್ಳಿ ಕ್ರಾಸ್‌ ಬಳಿ ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ಗೆ ಬೈಕ್‌ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಕುರಿತು ಕಲಾದಗಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಂತರ ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರಿಸಲಾಗಿದ್ದು, ಬುಧವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಬನ್ನಿ ವಿನಿಮಯ, ಸ್ಪರ್ಧಾ ಕಾರ್ಯಕ್ರಮ ರದ್ದು:

ಸಚಿನ್‌ ಬೆಳ್ಳುಬ್ಬಿ ನಿಧನದ ಹಿನ್ನೆಲೆಯಲ್ಲಿ ಅ.6 ಗುರುವಾರದಂದು ಕೊಲ್ಹಾರ ಪಟ್ಡಣದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯವರ ಮನೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಬನ್ನಿ ವಿನಿಮಯ ಹಾಗೂ ಸ್ನೇಹಮಿಲನ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ

ಮರಕ್ಕೆ ಬೈಕ್‌ ಡಿಕ್ಕಿ: ಸವಾರ ಸಾವು

ನಾರಾವಿಯ ಅರಸಿಕಟ್ಟೆಎಂಬಲ್ಲಿ ಬೈಕ್‌ ಮರಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ನಾರಾವಿಯ ಅರಸಿಕಟ್ಟೆನಿವಾಸಿ ಯೋಗೀಶ್‌ (23) ಮೃತರು. ಮನೆಯಿಂದ ಅಲ್ಲೆ ಹತ್ತಿರವಿದ್ದ ಅಂಗಡಿಗೆ ಸಾಗುತ್ತಿದ್ದ ವೇಳೆ ಅವರು ಚಲಾಯಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದರು. ಅಪಘಾತ ಆದ ವಿವರ ಲಭಿಸಿದ ತಕ್ಷಣ ಸ್ಥಳೀಯರು ಆಂಬುಲೆನ್ಸ್‌ಗೆ ಕರೆ ಮಾಡಿ ಯೋಗೀಶ್‌ ಅವರನ್ನು ಚಿಕಿತ್ಸೆಗೆಂದು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರೂ ತೀವ್ರ ರಕ್ತಸ್ರಾವದಿಂದಾಗಿ ಅವರು ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಅವರ ಮೃತದೇಹವನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!