
ನವದೆಹಲಿ(ಜ. 11) ಕದ್ದ ಹಣದಲ್ಲಿ ದಾನ ಮಾಡಿ ಪೊಲೀಸರ ಅಥಿತಿಯಾದ!.. ಹೌದು ಈತನ ಕತೆ ಅಂಥದ್ದೆ..
ಕೆಲವರಿಗೆ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಕೈಯಲ್ಲಿ ಹಣವಿರುವುದಿಲ್ಲ. ಆದರೆ ಕದ್ದ ಹಣದಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದ ಹಾಗೂ ಐಷಾರಾಮಿ ಕಾರು ಖರೀದಿಸುತ್ತಿದ್ದ ವ್ಯಕ್ತಿಯೊಬ್ಬ ಇದೀಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ. ಮಹಮ್ಮದ್ ಇರ್ಫಾನ್ (30) ಎಂಬಾತನೇ ಈ ಘನಕಾರ್ಯ ಮಾಡಿದ ಭೂಪ.
ಮದ್ಯಪಾನ ಮಾಡಿ ಬಂದು ಸೆಕ್ಸ್ ಬೇಕೆಂದು ಸ್ನೇಹಿತನ ಬಟ್ಟೆ ಕಳಚಿದ 'ಕಾಮ ಕಿರಾತಕ'
ಇರ್ಫಾನ್ ಮತ್ತು ಈತನ ಗ್ಯಾಂಗ್ ದೆಹಲಿ, ಪಂಜಾಬ್ ಮತ್ತಿತರ ಕಡೆಗಳಲ್ಲಿ ಯಾರೂ ಇರದ ಮನೆಗಳನ್ನೇ ಟಾರ್ಗೆಟ್ ಮಾಡಿ ಚಿನ್ನಭಾರಣ ಮತ್ತು ನಗದನ್ನು ಕಳ್ಳತನ ಮಾಡುತ್ತಿದ್ದ. ಇರ್ಫಾನ್ ಈ ಹಣದಿಂದ ಐಷಾರಾಮಿ ಕಾರು ಖರೀದಿಸುವ ಜೊತೆಗೆ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುತ್ತಿದ್ದ, ಆರೋಗ್ಯ ಶಿಬಿರಗಳನ್ನೂ ಆಯೋಜಿಸುತ್ತಿದ್ದ.
ಆದರೆ ಸದ್ಯ ದೆಹಲಿ ಪೊಲೀಸರು ಜ.7ರಂದು ಈತನನ್ನು ಬಂಧಿಸಿದ್ದು, ಈತನ ಜಾಗ್ವಾರ್ ಮತ್ತು 2 ನಿಸಾನ್ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಈತನ ಮೇಲೆ ಡೆಲ್ಲಿ, ಪಂಜಾಬ್, ಹರಿಯಾಣದಲ್ಲಿ ಪ್ರಕರಣಗಳಿವೆ. ಈತ ರಾಬಿನ್ ಹುಡ್ ಎಂಬಂತೆ ತನ್ನನ್ನು ತಾನು ಭಾವಿಸಿಕೊಂಡಿದ್ದ. ಬಿಹಾರದ ಸಿತಾಮಾಹ್ರಿಯಿಂದ ಮುಂದಿನ ಸಾರಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ.
ಕಾರು ಕಳ್ಳತನವೊಂದರಲ್ಲಿ ಸಿಕ್ಕಿಬಿದ್ದ ಮೇಲೆ ಒಂದೊಂದೆ ಪ್ರಕರಣಗಳನ್ನು ಬಾಯಿ ಬಿಟ್ಟಿದ್ದಾನೆ. ಇಡೀ ದೇಶಾದ್ಯಂತ ತನ್ನ ನೆಟ್ ವರ್ಕ್ ಇದೆ ಎಂದು ಪೊಲೀಸರ ಬಳಿಯೇ ಬಾಂಬ್ ಇಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ