ರೈಲಿಗೆ ತಲೆಕೊಟ್ಟು ಬಿ-ಟೆಕ್‌ ಪದವೀಧರ ಆತ್ಮಹತ್ಯೆ

Kannadaprabha News   | Asianet News
Published : Mar 07, 2021, 07:51 AM IST
ರೈಲಿಗೆ ತಲೆಕೊಟ್ಟು ಬಿ-ಟೆಕ್‌ ಪದವೀಧರ ಆತ್ಮಹತ್ಯೆ

ಸಾರಾಂಶ

ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸಮೀಪ ನಡೆದ ಘಟನೆ| ಕೆಲ ತಿಂಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಮೃತ ಸುನೀಲ್‌ ಕುಮಾರ್‌| ಖಿನ್ನತೆಗೊಳಗಾಗಿದ್ದ ಸುನಿಲ್‌, ಯಾರೊಂದಿಗೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ| 

ಬೆಂಗಳೂರು(ಮಾ.07): ಬಿ-ಟೆಕ್‌ ಪದವೀಧರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೈಯ್ಯಪ್ಪನಹಳ್ಳಿ ಸಮೀಪ ನಡೆದಿದೆ. ಆನೇಕಲ್‌ನ ಅರವಂತಿಕೆ ಪಾಳ್ಯ ನಿವಾಸಿ ಸುನಿಲ್‌ ಕುಮಾರ್‌ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಸುನೀಲ್‌ ಕುಮಾರ್‌ ಬಿ.ಟೆಕ್‌ ಪದವೀಧರನಾಗಿದ್ದು, ಎಂ.ಟೆಕ್‌ ಮಾಡಲು ಸಿದ್ಧತೆ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ಆದರೆ ಖಿನ್ನತೆಗೊಳಗಾಗಿದ್ದ ಸುನಿಲ್‌, ಯಾರೊಂದಿಗೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ. 

ಬೆಂಗಳೂರು;  ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ಸ್ಟುಡೆಂಟ್ ಸುಸೈಡ್

ಶುಕ್ರವಾರ ಸಂಜೆ 6 ಗಂಟೆಗೆ ವಾಕಿಂಗ್‌ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದ. ನಂತರ ಮನೆಯ ಸಮೀಪದಲ್ಲಿದ್ದ ಅರವಂತಿಕೆಪಾಳ್ಯದ ಬಳಿ ಬಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್