ತಾಮ್ರದ ದುಡ್ಡು ತಾಯಿ ಮಕ್ಕಳನ್ನೂ ಕೂಡ ಬೇರೆ ಮಾಡುತ್ತೆ ಅನ್ನೋ ಮಾತಿದೆ. ಸಂಪತ್ತು ಎನ್ನೋದು ಎಂಥವರನ್ನ ಬೇಕಾದರೂ ವಾಮ ಮಾರ್ಗಕ್ಕೆ ಎಳೆದು ಬಿಡತ್ತೆ ಅನ್ನೋದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಫೆ.15): ತಾಮ್ರದ ದುಡ್ಡು ತಾಯಿ ಮಕ್ಕಳನ್ನೂ ಕೂಡ ಬೇರೆ ಮಾಡುತ್ತೆ ಅನ್ನೋ ಮಾತಿದೆ. ಸಂಪತ್ತು ಎನ್ನೋದು ಎಂಥವರನ್ನ ಬೇಕಾದರೂ ವಾಮ ಮಾರ್ಗಕ್ಕೆ ಎಳೆದು ಬಿಡತ್ತೆ ಅನ್ನೋದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಈಗ ಇಲ್ಲಿ ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ಮಕ್ಕಳು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹೊಡೆದಾಡಿಕೊಂಡು ಆಸ್ಪತ್ರೆಗೆ ಸೇರಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ.
ಮೈ ಮೇಲೆ ಮಾರಕಾಸ್ತ್ರಗಳಿಂದ ಉಂಟಾದ ಗಂಭೀರ ಗಾಯಗಳು .ಗಾಯಕ್ಕೆ ಸ್ಟಿಚ್ ಹಾಕಿ, ಬ್ಯಾಂಡೇಜ್ ಕಟ್ಟಿ ಮಲಗಿಸಿರುವ ವೈದ್ಯರು. ನೋವು ತಾಳಲಾರದೇ ಗೋಳಾಡುತ್ತಿರುವ ಗಾಯಾಳುಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ. ಇವರೆಲ್ಲ ಚಿತ್ರದುರ್ಗ ತಾಲೂಕಿನ ಉಪ್ಪನಾಯಕನಹಳ್ಳಿಯ ನಿವಾಸಿಗಳು. ಮೂಲತಃ ಸಹೋದರರ ಮಕ್ಕಳಾದ ಇವರು ಪಿತ್ರಾರ್ಜಿತ ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಹೊಡೆ ದಾಡಿಕೊಂಡು ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೀತಿದ್ದಾರೆ. ಉಪ್ಪನಾಯಕನಹಳ್ಳಿಯ ಸಿದ್ದಪ್ಪ ಎಂಬವರದ್ದು 10ಎಕರೆ ಜಮೀನಿತ್ತು.
ಅವರ ಒಟ್ಟು ಜಮೀನಿನಲ್ಲಿ ಇಬ್ಬರು ಮಕ್ಕಳಾದ ಗಂಗಾಧರಪ್ಪ ಹಾಗೂ ಮಹಾಂತೇಶಪ್ಪ ಎಂಬವರಿಗೆ ಸಮನಾಗಿ ಹಂಚಿಕೆ ಮಾಡಿಕೊಟ್ಟು, ತಂದೆ ತಾಯಿಗಳನ್ನು ಜೋಪಾನ ಮಾಡುವವರಿಗೆ ಅಂತಾ ಒಂದು ಎಕರೆ ಜಮೀನನ್ನು ಹಿರಿಯರು ಇಟ್ಟಿದ್ರು. ಸಿದ್ದಪ್ಪ ತೀರಿದ ನಂತರ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಈಗ ಆ ಒಂದು ಎಕರೆ ಜಮೀನಲ್ಲೂ ಕೂಡ ಸಮಪಾಲು ಬರಬೇಕು ಅಂತಾ ವಾಗ್ವಾದಕ್ಕೆ ಇಳಿದಿದ್ರು. ಎರಡೂ ಕುಟುಂಬಸ್ಥರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇನ್ನೂ ಜಮೀನು ಹಂಚಿಕೆ ವಿಚಾರ ಅಷ್ಟೇ ಅಲ್ಲ. ಮನೆಯ ಪಕ್ಕದಲ್ಲಿ ಇರುವ ಜಾಗದ ವಿಚಾರವಾಗಿ ಎರಡೂ ಕುಟುಂಬಗಳ ಮಧ್ಯೆ ಜಗಳ ನಡೀತಿತ್ತು.
Chikkamagaluru: ಫೆ.20ರಂದು ಶೃಂಗೇರಿ ಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ
ಇದೇ ವಿಚಾರವಾಗಿ ನಿನ್ನೆ ಬೆಳಿಗ್ಗೆ ಸಣ್ಣದಾಗಿ ಜಗಳ ನಡೆದಿತ್ತು. ಈ ವೇಳೆ ಗಂಗಾಧರಪ್ಪ ಮಕ್ಕಳು ತಮ್ಮ ಚಿಕ್ಕಪ್ಪ ಮಹಾಂತೇಶಪ್ಪ ಮನೆಗೆ ಬಂದು ಹೆಂಚುಗಳನ್ನು ಒಡೆದುಹಾಕಿ, ಗಲಾಟೆ ಮಾಡಿದ್ರು. ಇನ್ನು ಸಾಯಂಕಾಲದ ವೇಳೆ ಮತ್ತೆ ಈ ಜಗಳಾ ಶುರುವಾಗಿ ಎರಡೂ ಕುಟುಂಬಗಳು ಮಾರಣಾಂತಿಕ ಹೊಡೆದಾಡಿಕೊಂಡಿದ್ದಾರೆ. ಹಣ ಮತ್ತು ಆಸ್ತಿ ಎಂಥವರನ್ನೂ ಬೇಕಾದ್ರೂ ಬದಲಾಯಿಸಿಬಿಡುತ್ತೆ ಬಿಡಿ. ಬರಬೇಕಾದ ಆಸ್ತಿಯ ವ್ಯಾಜ್ಯ ಬಗೆಹರಿಸಿಕೊಳ್ಳೋಕೆ ಈಗ ಅನೇಕ ಮಾರ್ಗಗಳಿವೆ. ಆದ್ರೆ ಈ ಕುಟುಂಬಗಳು ಪರಸ್ಪರ ಹಿಂಸಾಚಾರಕ್ಕೆ ಇಳಿಸದಿದ್ದು ಮಾತ್ರ ವಿಪರ್ಯಾಸವೇ ಸರಿ.