ಮದುವೆಯಾದ ಮೊದಲ ರಾತ್ರಿಯಿಂದ್ಲೇ ನವವಧು ಮೋಸಹೋದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸತತ ಎರಡು ತಿಂಗಳು ಪತಿ ನೀಡಿದ ಸಿಹಿ ತಿಂದು ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದಾಳೆ. ಮೈದುನ ಹಾಗೂ ಪತಿ ವಿರುದ್ಧ ಈಗ ದೂರು ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ ಪತಿಯೊಬ್ಬ ಹೇಸಿಗೆ ಕೆಲಸ ಮಾಡಿದ್ದಾನೆ. ತನ್ನ ಪತ್ನಿಯನ್ನು ತಮ್ಮನ ಕೈಗಿಟ್ಟಿದ್ದಾನೆ. ಎರಡು ತಿಂಗಳಿಂದ ಅಮ್ಮನ ಸ್ಥಾನದಲ್ಲಿರುವ ಅತ್ತಿಗೆ ಮೇಲೆ ಮೈದುನ ಅತ್ಯಾಚಾರವೆಸಗಿದ್ದಾನೆ. ಇದಕ್ಕೆ ಪತಿಯ ಸಂಪೂರ್ಣ ಬೆಂಬಲವಿತ್ತು ಎಂದು ಪೀಡಿತೆ ಆರೋಪಿಸಿದ್ದಾಳೆ. ಪ್ರತಿ ದಿನ ರಾತ್ರಿ ಅಮಲಿನ ಸಿಹಿ ನೀಡ್ತಿದ್ದ ಪತಿ, ಎರಡು ತಿಂಗಳಿಂದ ಮೋಸ ಮಾಡಿಕೊಂಡು ಬರ್ತಿದ್ದ.
ಘಟನೆ ಉತ್ತರ ಪ್ರದೇಶ (Uttar Pradesh)ದ ಪಿಲಿಭಿತ್‌ನಲ್ಲಿ ನಡೆದಿದೆ. ಮದುವೆಯಾದಾಗಿನಿಂದ ಪ್ರತಿದಿನ ರಾತ್ರಿ ಸಿಹಿತಿಂಡಿ (Dessert)ಗೆ ಅಮಲಿನ ಪದಾರ್ಥ ಬೆರೆಸಿ ಪತ್ನಿಗೆ ನೀಡುತ್ತಿದ್ದ ಪತಿ. ಅನುಮಾನಗೊಂಡ ಪೀಡಿತೆ ಒಂದು ದಿನ ಸಿಹಿ ತಿನ್ನದೆ ಮಲಗಿದ್ದಾಳೆ. ಆಗ ಸತ್ಯಗೊತ್ತಾಗಿದೆ. ಈ ವಿಷ್ಯವನ್ನು ಅತ್ತೆಗೆ ಹೇಳಿದ್ರೆ ಆಕೆ ಹಲ್ಲೆ ಯತ್ನ ಮಾಡಿದ್ದಾಳೆ. ಇನ್ನು ಪತಿ (Husband) ಮಾತನಾಡದೆ ಮೌನಿಯಾಗಿದ್ದಾನೆ. ನೊಂದ ಮಹಿಳೆ, ಪಾಲಕರಿಗೆ ವಿಷ್ಯ ತಿಳಿಸಿದ್ದಲ್ಲದೆ, ಮೈದುನ ಮತ್ತು ಪತಿ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
undefined
ಸರ್ಕಾರಿ ದಾಖಲೆಗಳಲ್ಲಿ ಮೃತ, ಬದುಕಿದ್ದೇನೆಂದು ಸಾಬೀತುಪಡಿಸಲು ಈತ ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್
ಶಕ್ತಿ ಫಾರ್ಮ್ ಪ್ರದೇಶದ ನಿವಾಸಿ ಪೀಡಿತೆಗೆ ಏಪ್ರಿಲ್‌ನಲ್ಲಿ ಮದುವೆ ಆಗಿತ್ತು. ಪಿಲಿಭಿತ್‌ನ ಯುವಕನನ್ನು ಆಕೆ ಮದುವೆ ಆಗಿದ್ದಳು. ನವವಧು ಅತ್ತೆ ಮನೆಯವರ ಮೇಲೆ ಹಾಗೂ ಪತಿ ಮೇಲೆ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಮೊದಲ ರಾತ್ರಿಯೇ ಪತಿ ನನಗೆ ಮೋಸ ಮಾಡಿದ್ದಾನೆ. ಅಮಲೇರುವ ಕೇಕ್ ತಿನ್ನಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಕೇಕ್ ತಿಂದ ನಂತ್ರ ಆಕೆ ಪ್ರಜ್ಞಾಹೀನಳಾಗಿದ್ದಳು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಕೆಯ ಮೈದುನ ಅತ್ಯಾಚಾರವೆಸಗಿದ್ದಾನೆ. ಬೆಳಿಗ್ಗೆ ಎದ್ದಾಗ ಶಾರೀರಿಕ ಸಂಬಂಧ ಬೆಳೆಸಿದ ಭಾವನೆ ಆಕೆಗೆ ಬಂದಿತ್ತು. ಆದ್ರೆ ಅದನ್ನು ಪೀಡಿತೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದಾದ ಬಳಿಕ ಪ್ರತಿ ದಿನ ರಾತ್ರಿ ಪತಿ ಸಿಹಿಯನ್ನು ನೀಡುತ್ತಿದ್ದ. ಮೈದುನನ ಹೇಯ ಕೃತ್ಯ ಮುಂದುವರೆದಿತ್ತು. ಪತಿ ಕೊಡ್ತಿದ್ದ ಸಿಹಿ ತಿಂದ್ಮೇಲೆ ಆಕೆಗೆ ಏನಾಗ್ತಿದೆ ಎಂಬುದು ತಿಳಿಯುತ್ತಿರಲಿಲ್ಲ. ರಾತ್ರಿ ನಡೆದ ಯಾವುದೇ ಘಟನೆ ನೆನಪಿಗೆ ಬರ್ತಿರಲಿಲ್ಲ. ಅನೇಕ ಬಾರಿ ಬೆಳಿಗ್ಗೆ ಬೆಡ್ ಬಳಿ ಮೈದುನನ್ನು ನೋಡಿದ್ದಳು. ಆರಂಭದಲ್ಲಿ ಅದನ್ನು ಮಹಿಳೆ ನಿರ್ಲಕ್ಷ್ಯಿಸಿದ್ದಳು. ಎರಡು ತಿಂಗಳ ನಂತರ ಆಕೆಗೆ ಅನುಮಾನ ಬರಲು ಶುರುವಾಗಿತ್ತು. ಮನೆಯಲ್ಲಿ ಏನೋ ಆಗ್ತಿದೆ, ರಾತ್ರಿ ನನಗೆ ಅರಿವಿಲ್ಲದೆ ಏನೋ ನಡೆಯುತ್ತಿದೆ ಎಂಬ ಅನುಮಾನ ಬರ್ತಿದ್ದಂತೆ ಆಕೆ ಪರೀಕ್ಷೆಗೆ ಮುಂದಾದಳು. ಜೂನ್ ತಿಂಗಳ ಒಂದು ರಾತ್ರಿ ಅವಳು ತನ್ನ ಗಂಡ ನೀಡಿದ್ದ ಸಿಹಿತಿಂಡಿಯನ್ನು ತಿಂದಿರಲಿಲ್ಲ.
ಪತ್ನಿ ಸಿಹಿ ತಿಂಡಿ ತಿಂದಿಲ್ಲ ಎಂಬುದು ಪತಿಗೆ ತಿಳಿದಿರಲಿಲ್ಲ. ಪತ್ನಿ ನಿದ್ರೆ ಮಾಡ್ತಿದ್ದಂತೆ ಪತಿ ಕೋಣೆಯಿಂದ ಹೊರಗೆ ಹೋಗಿದ್ದ. ನಂತ್ರ ಮೈದುನ ರೂಮಿಗೆ ಬಂದ. ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ಭಾವಿಸಿ ತನ್ನ ಕೆಲಸ ಶುರು ಮಾಡಿದ್ದ. ಆತನ ವರ್ತನೆಯಿಂದ ದಂಗಾದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಗ ಮನೆಯವರೆಲ್ಲ ಅಲ್ಲಿಗೆ ಬಂದಿದ್ದಾರೆ. ಮಹಿಳೆ ಎಲ್ಲ ವಿಷ್ಯವನ್ನು ವಿವರವಾಗಿ ಹೇಳಿದ್ರೂ ಪತಿ ಮನೆಯವರು ಅದನ್ನು ನಂಬಲಿಲ್ಲ. ಬದಲಾಗಿ ಮಹಿಳೆಗೆ ಬೈದಿದ್ದಾರೆ. ಆಕೆಯ ಮೇಲೆ ತಪ್ಪು ಹೊರಿಸಲು ಶುರು ಮಾಡಿದ್ದಾರೆ. ಪತಿ ಕೂಡ ಒಂದು ಮಾತನಾಡದೆ ನಿಂತಿದ್ದ.
ಬೆಂಗಳೂರು: ಕೋರಮಂಗಲ ಪಿಜಿಯಲ್ಲಿದ್ದ ಬಿಹಾರ ಯುವತಿ ಕೃತಿ ಕುಮಾರಿ ಕೊಲೆ ಕೇಸ್‌ಗೆ ಮೇಜರ್ ಟ್ವಿಸ್ಟ್!
ಘಟನೆಯಿಂದ ನೊಂದ ಮಹಿಳೆ ಮರುದಿನ ತವರು ಸೇರಿದ್ದಾಳೆ. ಪಾಲಕರಿಗೆ ವಿಷ್ಯ ತಿಳಿಸಿದ್ದಲ್ಲದೆ, ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮೈದುನ, ಪತಿ ಹಾಗೂ ಅತ್ತೆ ಮನೆಯವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.