ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಪ್ರೇಮಿಗಳಿಬ್ಬೂರು ಆತ್ಮಹತ್ಯೆಗೆ ಶರಣು..!

By Girish Goudar  |  First Published Jul 25, 2024, 5:08 PM IST

ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದಿದೆ. ಇಬ್ಬರ ನಡುವೆ ಸಣ್ಣ ಗಲಾಟೆ ಆಗಿದೆ.ಇದರಿಂದ ಬೇಸತ್ತ ಮೋನಿಕಾ ದಟ್ಟಗಳ್ಳಿಯ ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನ ಆಸ್ಪತ್ರೆಗೆ ಕರೆತಂದಿದ್ದಾನೆ. ಆದ್ರೆ ಮೋನಿಕಾ ಮೃತಪಟ್ಟಿದ್ದಾಳೆ. ಮೋನಿಕಾ ಸಾವಿಗೆ ಮನನೊಂದ ಮನು ತಾನೂ ಸಹ ಜ್ಯೋತಿನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.  


ಮೈಸೂರು(ಜು.25): ಕ್ಷುಲ್ಲಕ ಕಾರಣಕ್ಕೆ ಪ್ರೇಮಿಗಳ ನಡುವೆ ಗಲಾಟೆ ನಡೆದು ಪ್ರಿಯತಮೆ ಆತ್ಮಹತ್ಯೆಗೆ ಶರಣಾದ ಹಿನ್ನಲೆಯಲ್ಲಿ ಪ್ರಿಯತಮನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ದಟ್ಟಗಳ್ಳಿ ಹಾಗೂ ಜ್ಯೋತಿ ನಗರದಲ್ಲಿ ಇಂದು(ಗುರುವಾರ) ನಡೆದಿದೆ. 

ಮೋನಿಕಾ(20) ಹಾಗೂ ಮನು(22) ಮೃತ ಪ್ರೇಮಿಗಳು. ಮಂಡಕಳ್ಳಿ ಗ್ರಾಮದ ನಿವಾಸಿ ಮೋನಿಕಾ ಹಾಗೂ ಮೈಸೂರಿನ ಜ್ಯೋತಿನಗರದ ಮನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದಿದೆ. ಇಬ್ಬರ ನಡುವೆ ಸಣ್ಣ ಗಲಾಟೆ ಆಗಿದೆ.ಇದರಿಂದ ಬೇಸತ್ತ ಮೋನಿಕಾ ದಟ್ಟಗಳ್ಳಿಯ ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ.

Tap to resize

Latest Videos

ಅಮ್ಮಾ ಕ್ಷಮಿಸಿ ಬಿಡು, ಅಳುತ್ತಾ ಕೊನೆಯ ವಿಡಿಯೋ ಪೋಸ್ಟ್ ಮಾಡಿ ರೈಲಿಗೆ ತಲೆ ಕೊಟ್ಟ ಪತ್ರಕರ್ತೆ!

ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನ ಆಸ್ಪತ್ರೆಗೆ ಕರೆತಂದಿದ್ದಾನೆ. ಆದ್ರೆ ಮೋನಿಕಾ ಮೃತಪಟ್ಟಿದ್ದಾಳೆ. ಮೋನಿಕಾ ಸಾವಿಗೆ ಮನನೊಂದ ಮನು ತಾನೂ ಸಹ ಜ್ಯೋತಿನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಸದ್ಯ ಯಾವುದೇ ದೂರು ದಾಖಲಾಗಿಲ್ಲ.

click me!