ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ: ಬಾಯ್ಸ್ ಹಾಸ್ಟೆಲ್ ವಾರ್ಡನ್ ಬಂಧನ

By Suvarna NewsFirst Published Sep 12, 2022, 3:54 PM IST
Highlights

Crime News:  ಅಪ್ರಾಪ್ತ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ  ಹೈದರಾಬಾದ್‌ನ ಖಾಸಗಿ ಶಾಲೆಯೊಂದರ ಬಾಯ್ಸ್ ಹಾಸ್ಟೆಲ್ ವಾರ್ಡನ್‌ನನ್ನು ಬಂಧಿಸಲಾಗಿದೆ

ಹೈದರಾಬಾದ್‌ (ಸೆ. 12): ಅಪ್ರಾಪ್ತ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ  ಹೈದರಾಬಾದ್‌ನ ಹಯತ್‌ನಗರ ಪ್ರದೇಶದ ಖಾಸಗಿ ಶಾಲೆಯೊಂದರ ಬಾಯ್ಸ್ ಹಾಸ್ಟೆಲ್ ವಾರ್ಡನ್‌ನನ್ನು (Hostel Warden) ಪೊಲೀಸರು ಬಂಧಿಸಿದ್ದಾರೆ. ಹಾಸ್ಟೆಲ್‌ನ ಏಳು ವಿದ್ಯಾರ್ಥಿಗಳು ಇಲ್ಲಿಯವರೆಗೆ ವಾರ್ಡನ್ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ಹಯಾತ್‌ನಗರ ಪೊಲೀಸರು ತಿಳಿಸಿದ್ದಾರೆ.  ಆರೋಪಿಯನ್ನು 35 ವರ್ಷದ ಮುರ್ರಂ ಕೃಷ್ಣ ಎಂದು ಗುರುತಿಸಲಾಗಿದೆ.

ಆರೋಪಿ ವಾರ್ಡನ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂತೂರು ಮಂಡಲದ ಹಳ್ಳಿಗುಡೆಮ್ ಮೂಲದವ ಎಂದು ತಿಳಿದುಬಂದಿದೆ. ಅವಿವಾಹಿತನಾಗಿರುವ ಈತ ಖಾಸಗಿ ಶಾಲೆಯೊಂದರ ಬಾಲಕರ ಹಾಸ್ಟೆಲ್‌ನಲ್ಲಿ ತಿಂಗಳ ಹಿಂದೆ ವಾರ್ಡನ್ ಆಗಿ ಸೇರಿಕೊಂಡಿದ್ದ. 

ಆರೋಪಿ ವಾರ್ಡನ್‌ನ ಕಿರುಕುಳ ಸಹಿಸಲಾಗದೆ ಕೆಲವು ಅಪ್ರಾಪ್ತ ಬಾಲಕರು ಹಾಸ್ಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಹಯತ್‌ನಗರ ಪೊಲೀಸರ ಗಮನಕ್ಕೆ ತಂದಿದ್ದಾರೆ. 

ಕುಡಿದು ವಿದ್ಯಾರ್ಥಿನಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ: ಭಯಾನಕ ದೃಶ್ಯ ಸಿಸಿಯಲ್ಲಿ ಸೆರೆ

ಸ್ನಾನ ಮಾಡುವಾಗ ವಾಶ್‌ರೂಮ್‌ಗೆ ನುಗ್ಗಿ ಕಿರುಕುಳ: ಹಾಸ್ಟೆಲ್‌ನಲ್ಲಿದ್ದಾಗ ಆರೋಪಿ ಅಪ್ರಾಪ್ತ ಬಾಲಕರನ್ನು ಅನುಚಿತವಾಗಿ ಸ್ಪರ್ಶಿಸುವ ಮೂಲಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿ ಒಂಟಿಯಾಗಿ ಮಲಗಿದ್ದ ವಿದ್ಯಾರ್ಥಿಗಳ ಕೊಠಡಿಗೆ ನುಗ್ಗಿ ಅವರನ್ನು ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡುತ್ತಿದ್ದ. ಅಲ್ಲದೇ ಆರೋಪಿ ಹಲವಾರು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಸ್ನಾನ ಮಾಡುವಾಗ ವಾಶ್‌ರೂಮ್‌ಗೆ ನುಗ್ಗಿ ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. 

"ವಾರ್ಡನ್ 35 ವರ್ಷದ ಅವಿವಾಹಿತ ವ್ಯಕ್ತಿ. ಹತಾಶೆಯಿಂದ ಮತ್ತು ತನ್ನ ಲೈಂಗಿಕ ಆಸೆಗಳನ್ನು ಪೂರೈಸಲು ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಾನೆ. ಕೆಲವು ವಿದ್ಯಾರ್ಥಿಗಳನ್ನು ಬೆದರಿಸಿ ಬಲವಂತವಾಗಿ ಗ್ಯಾಜೆಟ್‌ಗಳಲ್ಲಿ ಪೋರ್ನ್‌ (Porn) ವೀಕ್ಷಿಸುವಂತೆ ಮಾಡಿದ್ದಾನೆ. ಹಾಸ್ಟೆಲಿನ ಏಳು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಹೆದರಿಸಿ, ಕಿರುಕುಳ ನೀಡಿದ್ದಾನೆ. ಅಲ್ಲದೇ ಯಾರಿಗೂ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ. 

ಬೀಫ್ ತಿನ್ನಿಸಿ ಪತ್ನಿ ಹಾಗೂ ಆಕೆಯ ಸೋದರನ ಕಿರುಕುಳ, ಪತಿ ಆತ್ಮಹತ್ಯೆ!

ಆರೋಪಿ ಮುರ್ರಂ ಕೃಷ್ಣ ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ.

ವಿದ್ಯಾರ್ಥಿಗಳ ಪೋಷಕರ ಆರೋಪದ ಮೇರೆಗೆ ಪೊಲೀಸರು ಎರಡು ದಿನಗಳ ಕಾಲ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ನಂತರ, ಹಾಸ್ಟೆಲ್ ವಾರ್ಡನ್ ಅನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

click me!