Hassan: ಹಾವು ಕಡಿತ, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ ಸಿಗದೆ ಬಾಲಕ ಸಾವು

By Govindaraj S  |  First Published Dec 24, 2022, 9:34 AM IST

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಶವಂತ್- ಗೌರಿ ಎಂಬವರ ಮಗ, ನಾಲ್ಕುವರೆ ವರ್ಷದ ರೋಷನ್ ಮೃತಪಟ್ಟ ಬಾಲಕ.


ಹಾಸನ (ಡಿ.24): ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಶವಂತ್- ಗೌರಿ ಎಂಬವರ ಮಗ, ನಾಲ್ಕುವರೆ ವರ್ಷದ ರೋಷನ್ ಮೃತಪಟ್ಟ ಬಾಲಕ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆತರಲು ಮನೆಗಳಿಗೆ ಹೋದಾಗ ನಿನ್ನೆ (ಶುಕ್ರವಾರ) ಘಟನೆ ನಡೆದಿದೆ. 

ಹಾವು ಕಚ್ಚಿದ ತಕ್ಷಣ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೆ ಹೋದುದರಿಂದ, ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ತಂದೆ ಬೈಕ್‌ನಲ್ಲೇ ಕರೆತಂದಿದ್ದಾರೆ. ಹೆತ್ತೂರಿನಿಂದಲೂ ಸಕಲೇಶಪುರಕ್ಕೆ ಆಂಬ್ಯುಲೆನ್ಸ್ ಸಿಕ್ಕಿಲ್ಲ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಬಾಲಕ ಸಾವನ್ನಪ್ಪಿದ್ದಾನೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕಲೇಶಪುರಕ್ಕೆ ಬೈಕ್‌ನಲ್ಲಿ ಬಾಲಕನನ್ನು ಕೊಂಡೊಯ್ಯುತ್ತಿದ್ದಾಗ ಅರ್ಧ ದಾರಿಯಲ್ಲಿ ಆಂಬ್ಯುಲೆನ್ಸ್ ಎದುರಾಗಿದೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tap to resize

Latest Videos

ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸರ್‌ಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ

ಆಕ​ಸ್ಮಿ​ಕ​ ಗುಂಡು ಹಾರಿ ಬಾಲಕ ಸಾವು: ತೋಟದ ಮನೆಯೊಂದರಲ್ಲಿ ಸುರಕ್ಷಿತೆಗಾಗಿ ಇಟ್ಟುಕೊಂಡಿದ್ದ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಓರ್ವ ಬಾಲಕ ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಗಡಿಭಾಗ ಕಾಡ​ಶಿ​ವ​ನ​ಹಳ್ಳಿಯಲ್ಲಿ ನಡೆದಿದೆ. ಅಮಿ​ನುಲ್ಲಾ ಮತ್ತು ಸಮ್‌ ಸೂನ್‌ ದಂಪತಿ ಪುತ್ರ ಶಮಾ ಮೃತ ಬಾಲಕ. ಮತ್ತೊಬ್ಬ ಪುತ್ರ ಸಾಜೀದ್‌(16) ಕೈಯ​ಲ್ಲಿದ್ದ ನಾಡ ಬಂದೂ​ಕಿ​ನಿಂದ ಆಕ​ಸ್ಮಿ​ಕ​ವಾಗಿ ಗುಂಡು ಹಾರಿ ದುರ್ಘ​ಟನೆ ಸಂಭ​ವಿ​ಸಿದೆ.

ಘಟನೆ ವಿವ​ರ: ಕಾಡ​ಶಿ​ವ​ನ​ಹಳ್ಳಿ ಗ್ರಾಮದ ಮಲ್ಲೇಶ್‌ ಎಂಬುವರ ಜಮೀನಿನಲ್ಲಿ ಮೂರು ದಿನಗಳ ಹಿಂದೆಯಷ್ಟೇ ಕೂಲಿ ಕೆಲಸಕ್ಕೆಂದು ಉತ್ತರ ಪ್ರದೇಶದಿಂದ ಅಮಿನುಲ್ಲಾ ಹಾಗೂ ಸಮ… ಸೂನ್‌ ದಂಪತಿ ಸಾಜೀದ್‌ ಮತ್ತು ಶಮಾ ಅವ​ರೊಂದಿಗೆ ಬಂದಿ​ದ್ದರು. ಪೋಷ​ಕರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ ತೋಟದ ಮಾಲೀಕ ಮಲ್ಲೇಶ್‌ ಅವರಿಗೆ ಸೇರಿದ ನಾಡ ಬಂದೂಕನ್ನು ಆಟ ವಾಡಲು ತೆಗೆದುಕೊಂಡ ಸಮಯದಲ್ಲಿ ಮಕ್ಕಳು ಕೈಗೆ​ತ್ತಿ​ಕೊಂಡಿ​ದ್ದಾರೆ.

ಚನ್ನಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ: ಸ್ಥಳದಲ್ಲೇ 3 ಜನರ ಸಾವು

ಆಟ ಆಡುವಾಗ ಸಾಜೀದ್‌ ನಾಡ​ಬಂದೂ​ಕಿನ ಟ್ರಿಗರ್‌ ಒತ್ತಿದ ಹಿನ್ನೆ​ಲೆ​ಯಲ್ಲಿ ಗುಂಡು ಹಾರಿ ಬಾಲಕ ಶಮಾಗೆ ತಗುಲಿ ಸ್ಥಳ​ದ​ಲ್ಲಿಯೇ ಮೃತ​ಪ​ಟ್ಟಿ​ದ್ದಾನೆ. ತೋಟದ ಮನೆಯಲ್ಲಿ ಯಾವುದೇ ಸುರಕ್ಷತಾ ನಿಯಮ ಪಾಲಿಸದೇ ಬಂದೂಕು ಇಟ್ಟಿದ್ದ ಮಾಲೀಕ ಮಲ್ಲೇಶ್‌ ಮೇಲೆ ನಿರ್ಲಕ್ಷ್ಯ ಪ್ರಕರಣದಡಿ ದೂರು ದಾಖಲಿಸಿಕೊಂಡ ಕೋಡಿಹಳ್ಳಿ ಠಾಣೆ ಪೊಲೀ​ಸರು ಆತ​ನನ್ನು ಬಂಧಿ​ಸಿ​ದ್ದಾರೆ. ಗುಂಡು ಹಾರಿಸಿದ ಬಾಲಕ ಸಾದಿಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

click me!