ನಮ್ಮ ಮೆಟ್ರೋ ಬೆನ್ನಿಗಾನಹಳ್ಳಿ ನಿಲ್ದಾಣದ ಸ್ಕೈವಾಕ್‌ನಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿ ಕಾಲೇಜು ಯುವತಿ ಜೊತೆಗೆ ಅನುಚಿತ ವರ್ತನೆ ತೋರಿದ ಘಟನೆ ನಡೆದಿದೆ. ವಿದ್ಯಾರ್ಥಿನಿ ಹೇಳಿಕೆ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಳಿಕ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಬೆಂಗಳೂರು (ಏ.15): ನಮ್ಮ ಮೆಟ್ರೋ ಬೆನ್ನಿಗಾನಹಳ್ಳಿ ನಿಲ್ದಾಣದ ಸ್ಕೈವಾಕ್‌ನಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿ ಕಾಲೇಜು ಯುವತಿ ಜೊತೆಗೆ ಅನುಚಿತ ವರ್ತನೆ ತೋರಿದ ಘಟನೆ ನಡೆದಿದೆ. ವಿದ್ಯಾರ್ಥಿನಿ ಹೇಳಿಕೆ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಳಿಕ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಹಳೇ ಮದ್ರಾಸ್ ರಸ್ತೆ ದಾಟಲು ಫುಟ್ ಓವರ್ ಬ್ರಿಡ್ಜ್ ನಲ್ಲಿ ನಡೆದು ಹೋಗುತ್ತಿದ್ದಾಗ ಘಟನೆ ನಡೆದಿದೆ. ಎಸ್ಕಲೇಟರ್ ಬಳಿ ವಿದ್ಯಾರ್ಥಿನಿ ಬಂದಾಗ ಎದುರು ಬಂದಾತ ಅನುಚಿತವಾಗಿ ವರ್ತಿಸಿ ಹಿಂಬಾಲಿಸಿದ್ದಾನೆ ಎಂದು ಭದ್ರತಾ ಸಿಬ್ಬಂದಿ ಬಳಿ ಬಂದು ದೂರಿದ್ದಾರೆ. ಸಿಬ್ಬಂದಿ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿದ್ದಾರೆ. ಆದರೆ ಪ್ರಕರಣ ದಾಖಲಿಸಲು ಯುವತಿ ಹಿಂದೇಟು ಹಾಕಿದ್ದಾರೆ. ಆಕೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರಲಿಲ್ಲ. ಕೇವಲ ರಸ್ತೆ ದಾಟಲು ಸ್ಕೈ ವಾಕ್ ಬಳಸಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
undefined
ಮೆಟ್ರೋದಲ್ಲಿ ಯುವಕನ ಅಸಭ್ಯ ವರ್ತನೆ, ಮಹಿಳೆಯಿಂದ ಕಪಾಳಮೋಕ್ಷ, ಸುರಕ್ಷತೆ ಬಗ್ಗೆ ಧ್ವನಿ ಎತ್ತಿದ ನಾರಿಯರು
ಮೆಟ್ರೋದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ಘಟನೆ ನಿಯಂತ್ರಣಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆಗೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಮೆಟ್ರೋ ನಿಲ್ದಾಣ, ರೈಲು ಹತ್ತಿಳಿಯುವಾಗ ಇಂತಹ ಘಟನೆ ನಡೆಯುತ್ತಿದ್ದು, ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಹೆಚ್ಚಿನ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.