ಕತ್ತಲು ಸರಿಯುವ ಮೊದಲೇ ರಸ್ತೆಯಲ್ಲಿ ಹರಿದ ರಕ್ತ : ಒಂದೇ ಕುಟುಂಬದ ನಾಲ್ವರು ಸಾವು

By Sathish Kumar KHFirst Published Feb 26, 2023, 1:12 PM IST
Highlights

ಕೆರೆಹಳ್ಳಿ ಗ್ರಾಮದ ರಸ್ತೆಯಲ್ಲಿ ಬೆಳಕು ಹಾರಿಯುವ ಮುನ್ನವೇ ಒಂದೇ ಕುಟುಂಬ ನಾಲ್ವರ ದೇಹದಿಂದ ರಕ್ತ ಹರಿದಿತ್ತು. ಭೀಕರ ಅಪಘಾತ ಘಟನೆಗೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಹಾಸನ (ಫೆ.26): ಇಂದು ಬೆಳಗಿನ ಜಾವದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಹೆ ಬೈಕ್‌ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕೆರೆಹಳ್ಳಿ‌ಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಕತ್ತಲು ಹರಿಯುವ ಮುನ್ನವೇ ಕೆರೆಹಳ್ಳಿ ಗ್ರಾಮದ (Kerehalli Village) ರಸ್ತೆಯಲ್ಲಿ ರಕ್ತವು ಹರಿದಿತ್ತು. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ (Tractor)  ಹಿಂಭಾಗದಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಸೇರಿ ಒಟ್ಟು ನಾಲ್ವರ ಶವಗಳು ರಕ್ತದ (Blood) ಮಡುವಿನಲ್ಲಿ ಬಿದ್ದಿದ್ದವು. ಇನ್ನು ಟ್ರ್ಯಾಕ್ಟರ್‌ ಪಕ್ಕದಲ್ಲಿಯೇ ಬಹುಭಾಗ ನಜ್ಜುಗುಜ್ಜಾದ ಬೈಕ್‌ (Scraped Bike) ಬಿದ್ದಿತ್ತು. ಇನ್ನು ಯಾರಾದರೂ ಬದುಕಿದ್ದರೆ ಆಸ್ಪತ್ರೆಗೆ ಸೇರಿಸೋಣ ಎಂದು ಗ್ರಾಮಸ್ಥರು ಅವರನ್ನು ನೋಡಿದರೂ ಯಾರೊಬ್ಬರೂ ಜೀವಂತವಾಗಿ ಇರಲಿಲ್ಲ.

Latest Videos

ಉಪವಾಸ ಸತ್ಯಾಗ್ರಹನಿರತ ಅಜೀಂ ಪ್ರೇಮ್‌ಜಿ ವಿವಿ ವಿದ್ಯಾರ್ಥಿ ಸಾವು: ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಒಂದೇ ಕುಟುಂಬದ ಪತಿ- ಪತ್ನಿ, ಇಬ್ಬರು ಮಕ್ಕಳು ಸಾವು: ಚನ್ನರಾಯಪಟ್ಟಣ ತಾಲೂಕು ಕೆರೆಹಳ್ಳಿ‌ ಬಳಿ ದುರಂತದಲ್ಲಿ ಪತಿ- ಪತ್ನಿ (Husband- Wife) ಹಾಗೂ ಇಬ್ಬರು ಮಕ್ಕಳು (children) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಲೋಕೇಶ್‌, ಪತ್ನಿ ಲಕ್ಷ್ಮಿ ಹಾಗೂ ಇಬ್ಬರು ಮಕ್ಕಳು ಮೃತರೆಂದು (Death)  ಗುರುತಿಸಲಾಗಿದೆ. ಈ ಘಟನೆಯು ನುಗ್ಗೇಹಳ್ಳಿ- ತಿಪಟೂರು ರಸ್ತೆಯಲ್ಲಿ (Nuggenahalli- Thipaturu Road) ನಡೆದಿದ್ದು, ಡಿಕ್ಕಿ ರಭಸಕ್ಕೆ ಬೈಕ್‌ ಸಂಪೂರ್ಣ ‌ನಜ್ಜುಗುಜ್ಜಾಗಿತ್ತು. ಸ್ಥಳಕ್ಕೆ ಆಗಮಿಸಿದ ನುಗ್ಗೇಹಳ್ಳಿ ಪೊಲೀಸರು (Nuggenahalli Police)  ಸ್ಥಳ ಪರಿಶೀಲನೆ ಮಾಡಿದ್ದಾರೆ. ಇನ್ನು ಘಟನೆಗೆ ಯಾವುದಾದರೂ ಸಾಕ್ಷಿ ಸಿಗಬಹುದೇ ಎಂದು ಸಿಸಿಟಿವಿ ಹಾಗೂ ಇತರೆ ಕಾರಣಗಳು ಸಿಗಬಹುದೇ ಎಂದು ಶೋಧನೆ ಮಾಡುತ್ತಿದ್ದಾರೆ.

ಸಾವಿಗೆ ಕಾರಣ ಏನಿರಬಹುದು.?: ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬೈಕ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಲು ಕಾರಣ ಏನಿರಬಹುದು ಎಂದು ಎಲ್ಲರನ್ನು ಕಾಡುತ್ತಿರುವ ಅನುಮಾನವಾಗಿದೆ. ರಸ್ತೆಯ ಬದಿ ಯಾವುದೇ ರೇಡಿಯಂ ಸ್ಟಿಕ್ಕರ್‌ ಅಂಟಿಸದೇ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಮಾಲೀಕನ ತಪ್ಪು ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಬೇರೊಂದು ವಾಹನ ಎದುರಿಗೆ ಬಂದಾಗ ರಸ್ತೆ ಬದಿಯಲ್ಲಿ ಹೋಗಲು ಮುಂದಾಗಿ ಈ ಘಟನೆ ನಡೆದಿರಬೇಕು. ಇಲ್ಲ ಬೆಳಗಿನ ಜಾವ ನಿದ್ದೆಯ ಮಂಪರು ಇರಬೇಕು. ಇಲ್ಲವೇ ಮೊಬೈಲ್‌ನಲ್ಲಿ ಮಾತನಾಡಿಕೊಮಡು ಹೋಗುವಾಗ ಬೈಕ್‌ ನಿಯಂತ್ರಣಕ್ಕೆ ಸಿಗದೇ ಈ ಘಟನೆ ನಡೆದಿರಬೇಕು ಎಂದು ಊಹೆ ಮಾಡಿದ್ದಾರೆ. ಆದರೆ, ನೈಜ ಘಟನೆಯ ಬಗ್ಗೆ ಯಾರಿಗೂ ತಿಳಿದಿಲ್ಲ. 

Bengaluru Crime: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ: ಪೊಲೀಸ್‌ ಠಾಣೆ ಶವವಿಟ್ಟು ಪ್ರತಿಭಟನೆ

ರಸ್ತೆ ಬದಿ ವಾಹನ ನಿಲುಗಡೆ ನಿಷೇಧಿಸಿ: ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯ ಅರ್ಧ ಭಾಗ ಆವರಿಸಿಕೊಳ್ಳುವಂತೆ ಟ್ರ್ಯಾಕ್ಟರ್‌(Tractor), ಎತ್ತಿನ ಗಾಡಿ  (Bullcart) ಇತ್ಯಾದಿ ವಾಹನಗಳನ್ನು ನಿಲ್ಲಿಸುವುದನ್ನು ಬಿಡಬೇಕು. ಜೊತೆಗೆ, ರಸ್ತೆಯಲ್ಲಿ ಕೃಷಿ ಬೆಳೆಗಳ ಒಕ್ಕಲು ಮಾಡುವುದನ್ನು ಬಿಡಬೇಕು. ರಸ್ತೆಯಲ್ಲಿ ರಾಗಿ, ಜೋಳ, ಸಜ್ಜೆ, ತೊಗರಿ, ನವಣೆ ಸೇರಿ ಬಹುತೇಕ ಬೆಳೆಗಳನ್ನು ರಸ್ತೆಯಲ್ಲಿ ಹಾಕುತ್ತಿದ್ದು, ಇದಕ್ಕೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು. ಇನ್ನು ರಸ್ತೆಯಲ್ಲಿಯೇ ಜಾನುವಾರುಗಳನ್ನು ಕಟ್ಟಲಾಗುತ್ತಿದ್ದು, ಇದನ್ನೂ ಕೂಡ ನಿಷೇಧಿಸಬೇಕು ಎಂಬುದು ಅಪಘಾತ ನಡೆದ ಗ್ರಾಮಸ್ಥರ ಆಗ್ರಹವಾಗಿದೆ.

click me!