ಚಿಕ್ಕಮಗಳೂರು ಜಿಲ್ಲೆಯ ಹೆಡದಾಳು ಗ್ರಾಮದಲ್ಲಿ ಭಯಂಕರ ವಾಮಾಚಾರ ನಡೆದಿದ್ದು, ಮಡಿಕೆಗೆ ಕಾಳಿ ರೂಪ ನೀಡಿ ಪ್ರಾಣಿ ಬಲಿ ಕೊಟ್ಟು ಪೂಜೆ ಸಲ್ಲಿಸಲಾಗಿದೆ. ಮೂರು ದಾರಿ ಕೂಡಿರುವ ಜಾಗದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಚಿಕ್ಕಮಗಳೂರು (ಅ.19): ತಂತ್ರಜ್ಞಾನ ಚಂದ್ರನ ಮೇಲೆ ಕಾಲಿಡುವ ಮಟ್ಟಕ್ಕೆ ಬೆಳೆದಿದ್ದರೂ ಕೂಡ ಜನ ಮಾತ್ರ ಇನ್ನೂ ಮಾಟ ಮಂತ್ರಗಳ ಮೂಲಕ ಜನರ ಜನರನ್ನ ಹೆದರಿಸುತ್ತಲೇ ಕಾಲ ಕಳೆಯುತ್ತಿದ್ದಾರೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಭಯಂಕರ ವಾಮಾಚಾರವೇ ಇದಕ್ಕೆ ಸಾಕ್ಷಿ ಎನ್ನುವಂತಿದೆ. ಮಡಿಕೆಗೆ ಕಾಳಿ ರೂಪ ನೀಡಿ , ಪ್ರಾಣಿ ಬಲಿ ಕೊಟ್ಟು ಪೂಜೆ ನಡೆಸಲಾಗಿದೆ. ಬೆಳ್ಳಂಬೆಳಗ್ಗೆ ಭಯಂಕರ ವಾಮಾಚಾರವನ್ನು ನೋಡಿ ಮಲೆನಾಡಿನ ಜನರು ಬೆಚ್ಚಿಬಿದ್ದಾರೆ.
ಮೂರು ದಾರಿಯಲ್ಲಿ ನಡೆದಿರುವ ವಾಮಾಚಾರ : ಕಾಫಿನಾಡಿನ ಮಲೆನಾಡು ಭಾಗದ ಜನರು ಇಂದು ಬೆಳಿಗ್ಗೆ ಎದ್ದ ತಕ್ಷಣ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಮೂರು ದಾರಿ ಕೂಡಿರುವ ಕಡೆ ಕಿಡಿಗೇಡಿಗಳು ಮಡಕೆಗೆ ಕಾಳಿ ರೂಪ ನೀಡಿ ಭಯಂಕರ ವಾಮಾಚಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಗೆರೆ ತಾಲೂಕಿನ ಹೆಡದಾಳು ಗ್ರಾಮದ ಚೇತನ್ ಎಂಬುವರ ಮನೆ ಹಾಗೂ ಚೇತನ್ ಮನೆಯ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ಮಾಡಿದ್ದಾರೆ.
undefined
ಪ್ರಾಣಿ ಬಲಿ ಕೊಟ್ಟು ಪೂಜೆ : ಒಂದು ಗುಚ್ಚು ಹಸಿರು ಬಳೆಯ ಮೇಲೆ ಮಣ್ಣಿನ ಮಡಕೆ ಕೂರಿಸಿ, ಆ ಮಡಕೆಗೆ ಗೊಂಬೆ ರೂಪ ನೀಡಿ ಕಾಳಿಯ ಮುಖದಂತೆ ಮಾಡಿ ಮಾಟ ಮಾಡಿದ್ದಾರೆ. ಬೆಳಗಿನ ಜಾವ 4 ರಿಂದ 5 ಗಂಟೆ ಸುಮಾರಿಗೆ ಐವರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಮನೆಯ ಹೊರಗಡೆಯಿಂದ ಏನೋ ಶಬ್ದ ಬರುತ್ತಿರುವುದು ಗೊತ್ತಾಗಿದೆ. ಈ ವೇಳೆ ಕಿಟಿಕಿಯಿಂದ ನೋಡಿದ್ದಾರೆ. ಆದರೆ, ಯಾರೋ.. ಏನೋ... ಎಂದು ಹೋಗಲು ಭಯಗೊಂಡು ಮನೆಯಲ್ಲೇ ಇದ್ದಾರೆ.
ಶಾಲೆಯ ಯಶಸ್ಸಿಗಾಗಿ 7 ವರ್ಷದ ಬಾಲಕನನ್ನು ವಾಮಾಚಾರಕ್ಕೆ ಬಲಿಕೊಟ್ಟ ಆಡಳಿತ ಮಂಡಳಿ!
ಬೆಳಗ್ಗೆ ನೋಡಿದಾಗ ಮಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮಾಟದ ಜಾಗದಲ್ಲಿ ಅರಿಶಿನ-ಕುಂಕುಮ, ಹಣ್ಣು-ಕಾಯಿ ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ.ಇದರ ಜೊತೆಗೆ ಪ್ರಾಣಿಯನ್ನು ಬಲಿಕೊಟ್ಟು ಪೂಜೆ ಮಾಡಿರುವ ಶಂಕೆಯೂ ಕೂಡ ವ್ಯಕ್ತವಾಗಿದೆ. ಸಾಮಾನ್ಯವಾಗಿ ಮಾಟ ವಾಮಾಚಾರ ಕೃತ್ಯ ನಡೆಸುವ ವೇಳೆ ಪ್ರಾಣಿಯನ್ನು ಬಲಿಕೊಡುವ ಪದ್ದತಿ ಇದ್ದು ಇಲ್ಲಿಯೂ ಪ್ರಾಣಿ ಬಲಿ ಕೊಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಆದರೆ, ಹಸಿರು ಬಳೆ ಮೇಲೆ ಮಟಕೆಗೆ ಮಣ್ಣಿನ ರೂಪದಲ್ಲಿ ಕಾಳಿಯಂತೆ ಮಾಡಿ ವಾಮಾಚಾರ ಮಾಡಿರುವುದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ವಾಮಾಚಾರ: ರಸ್ತೆಯಲ್ಲಿ ಈ ವಸ್ತು ಕಂಡ್ರೆ ದೂರ ಓಡಿ, ಮುಟ್ಟೋ ಸಾಹಸ ಮಾಡಿದ್ರೆ ಜೀವನ ನರಕ!