ಬೆಳಗಾವಿ: ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ 2.73 ಕೋಟಿ ಹಣ ಜಪ್ತಿ!

By Girish Goudar  |  First Published Oct 19, 2024, 12:33 PM IST

ಮಹಾರಾಷ್ಟ್ರದ ಸಾಂಗಲಿ ಪಟ್ಟಣದ ಸಚೀನ ಮೇನಕುದುಳೆ, ಮಾರುತಿ ಮಾರಗುಡೆ ಎಂಬುವರನ್ನ ಬಂಧಿಸಲಾಗಿದೆ. ಹಣ ಸಾಗಾಟ ಮಾಡೋದಕ್ಕೆ ಖದೀಮರು ವಾಹನದಲ್ಲೇ ಕ್ಯಾಬಿನ್ ಮಾಡಿಫೈ ಮಾಡಿದ್ದರು. ಜಪ್ತಿಯಾದ ಹಣ ಮೂಲ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ 


ಬೆಳಗಾವಿ(ಅ.19):  ಬೆಳಗಾವಿ ಸಿಸಿಬಿ ಪೊಲೀಸರಿ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ 2.73 ಕೋಟಿ ಹಣವನ್ನ ಜಪ್ತಿ ಮಾಡಿಕೊಂಡಿದ್ದಾರೆ. ಸೂಕ್ತ ದಾಖಲೆಗಳಿಲ್ಲದೇ 2.73 ಕೋಟಿ ರೂ. ಹಣ ಸಾಗಿಸುತ್ತಿದ್ದ ವಾಹನವನ್ನ ಜಪ್ತಿ ಮಾಡಿಕೊಳ್ಳಲಾಗಿದೆ. 

ಮಹಾರಾಷ್ಟ್ರದ ಸಾಂಗಲಿ‌ಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ವಾಹನದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ವಾಹನ ಚಾಲಕ ಹಾಗೂ ಹಣವನ್ನ ಜಪ್ತಿ ಮಾಡಿಕೊಂಡಿದ್ದಾರೆ.  

Latest Videos

undefined

ರಾಮನಗರ: ಹಳೆ ವೈಷಮ್ಯ, ತಲೆ ಮೇಲೆ ಕಲ್ಲು ಹಾಕಿ ಸ್ನೇಹಿತರಿಂದಲೇ ಹತ್ಯೆ!

ಮಹಾರಾಷ್ಟ್ರದ ಸಾಂಗಲಿ ಪಟ್ಟಣದ ಸಚೀನ ಮೇನಕುದುಳೆ, ಮಾರುತಿ ಮಾರಗುಡೆ ಎಂಬುವರನ್ನ ಬಂಧಿಸಲಾಗಿದೆ. ಹಣ ಸಾಗಾಟ ಮಾಡೋದಕ್ಕೆ ಖದೀಮರು ವಾಹನದಲ್ಲೇ ಕ್ಯಾಬಿನ್ ಮಾಡಿಫೈ ಮಾಡಿದ್ದರು. ಜಪ್ತಿಯಾದ ಹಣ ಮೂಲ ತನಿಖೆ ನಡೆಸುತ್ತಿರುವುದಾಗಿ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!