ಮಾಗಡಿ ಪಟ್ಟಣದ ನಿರ್ಮಲಾ ಟಾಕೀಸ್ ಮುಂದೆ ಪಾನಮತ್ತನಾಗಿದ್ದ ಪ್ರವೀಣ್ ಮೇಲೆ ಸ್ನೇಹಿತರು ಬಂದು ಗಲಾಟೆ ಮಾಡಿ ಕಲ್ಲು ಹಾಕಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ತರಕಾರಿ ಮಾರಾಟ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ ಪ್ರವೀಣ್ ಹಾಗೂ ಸ್ನೇಹಿತರು ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ ವೇಳೆ ಪ್ರವೀಣ ನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ.
ಮಾಗಡಿ(ಅ.19): ಹದಿನೈದು ದಿನಗಳ ಹಿಂದೆ ಸ್ನೇಹಿತರ ನಡುವೆ ಕ್ಷುಲ್ಲಕ ವಿಷಯಕ್ಕೆ ನಡೆದಿದ್ದ ಜಗಳ ದ್ವೇಷಕ್ಕೆ ತಿರುಗಿ ಸ್ನೇಹಿತರಿಂದಲೇ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಮಾಗಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ತರಕಾರಿ ವ್ಯಾಪಾರಿ ಪ್ರವೀಣ್ (32) ಕೊಲೆ ಗೀಡಾಗಿರುವ ಯುವಕ.
ಗುರುವಾರ ರಾತ್ರಿ 11 ಗಂಟೆಯಲ್ಲಿ ಪಟ್ಟಣದ ನಿರ್ಮಲಾ ಟಾಕೀಸ್ ಮುಂದೆ ಪಾನಮತ್ತನಾಗಿದ್ದ ಪ್ರವೀಣ್ ಮೇಲೆ ಸ್ನೇಹಿತರು ಬಂದು ಗಲಾಟೆ ಮಾಡಿ ಕಲ್ಲು ಹಾಕಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ತರಕಾರಿ ಮಾರಾಟ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ ಪ್ರವೀಣ್ ಹಾಗೂ ಸ್ನೇಹಿತರು ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ ವೇಳೆ ಪ್ರವೀಣ ನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ.
ಬೆಂಗಳೂರು: ಶೀಲ ಶಂಕಿಸಿ ಕುಡಿದ ನಶೆಯಲ್ಲಿ ಹೆಂಡ್ತಿ ಕೊಂದ ಪಾಪಿ ಗಂಡ!
ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ ಈ ಪರೀಶೀಲಿಸಿತು. ಮಾಗಡಿ ಪೊಲೀಸರು ನಡೆಸುತ್ತಿದ್ದಾರೆ. ಮೃತರಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದು ಕಳೆದ 15 ದಿನದ ಹಿಂದೆ ಮೃತ ಪ್ರವೀಣನ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು.