ಬೆಂಗಳೂರಿನಲ್ಲಿ ಆರ್‌ಟಿಐ ಕಾರ್ಯಕರ್ತನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಇದರಲ್ಲಿ ಓರ್ವ ರೌಡಿಶೀಟರ್ ಆಗಿದ್ದಾನೆ.
ಬೆಂಗಳೂರು (ಮಾ.10): ಬೆಂಗಳೂರಿನಲ್ಲಿ ಆರ್‌ಟಿಐ ಕಾರ್ಯಕರ್ತನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಇದರಲ್ಲಿ ಓರ್ವ ರೌಡಿಶೀಟರ್ ಆಗಿದ್ದಾನೆ. ಆರ್‌ಟಿಐ ಕಾರ್ಯಕರ್ತನ ಕೊಲೆಗೆ ಬಿಜೆಪಿ ಮುಖಂಡ ಗೋವಿಂದರಾಜು ಹಾಗು ಬಿಲ್ ಕಲೆಕ್ಟರ್ ಸತೀಶ್ ಎಂಬಿಬ್ಬರು ರೌಡಿ ಶೀಟರ್ ಗ್ಯಾಂಗ್ ಜೊತೆಗೆ ಡೀಲ್ ಮಾಡಿದ್ದರು.
ಒಟ್ಟು ಆರು ಜನರ ಗ್ಯಾಂಗ್ ಆರ್ ಟಿ ಐ ಕಾರ್ಯಕರ್ತ ನಾಗರಾಜ್ ಕೊಲೆಗೆ ಸ್ಕೆಚ್ ಹಾಕಿತ್ತು. ಕೆಂಗೇರಿ ರೈಲ್ವೆ ಅಂಡರ್ ಪಾಸ್ ಬಳಿ ಹೋಗುವಾಗ ಆರೋಪಿಗಳು ಲಾಂಗ್ ಹಿಡಿದು ಕೊಲೆಗೆ ಯತ್ನಿಸಿದ್ದರು. ಅಲ್ಲಿ ನಾಗರಾಜ್ ತಪ್ಪಿಸಿಕೊಂಡಿದ್ದರು.
undefined
ಫ್ಲೆಕ್ಸ್ ವಿಚಾರಕ್ಕೆ ಗಲಾಟೆ, ಮೈಸೂರಿನಲ್ಲಿ ಮುಸ್ಲಿಂ ಧರ್ಮಗುರು ಬರ್ಬರ ಹತ್ಯೆ!
ಬಂಧಿತರನ್ನು ಮನಿಷ್ ಮೋಹನ್ ಪೂಜಾರಿ, ಶಶಿಕುಮಾರ್ ರೆಡ್ಡಿ , ಕೃಷ್ಣ , ಸತೀಶ್ , ವೇಣುಗೋಪಾಲ್ ಯಾನೆ ಕುಮಾರಸ್ವಾಮಿ, ಗೋವಿಂದ್ ರಾಜ್ ಎಂದು ಗುರುತಿಸಲಾಗಿದ್ದು, ಇದರಲ್ಲಿ ಕೃಷ್ಣ , ಚಂದ್ರಾಲೇಔಟ್ ರೌಡಿಶೀಟರ್ ಆಗಿದ್ದಾನೆ.
ಸರ್ಕಾರಿ ಜಮೀನು ಕಬಳಿಕೆ ವಿಚಾರವಾಗಿ ಆರ್ ಟಿ ಐ ನಲ್ಲಿ ನಾಗರಾಜ್ ಅರ್ಜಿ ಹಾಕಿದ್ದರು. ಈ ಹಿನ್ನೆಲೆ ಬಿಜೆಪಿ ಮುಖಂಡ ಗೋವಿಂದರಾಜು ಹಾಗು ಕುಂಬಳಗೋಡು ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಆಗಿರೊ ಸತೀಶ್ ನಿಂದ ಆರ್‌ಟಿಐ ಕಾರ್ಯಕರ್ತ ನಾಗರಾಜ್ ಕೊಲೆಗೆ ಹುನ್ನಾರ ಹಾಕಿ ಚಂದ್ರಲೇಔಟ್ ರೌಡಿಶೀಟರ್ ಕೃಷ್ಣ ಅಂಡ್ ಟೀಂ ಗೆ ಸುಪಾರಿ ನೀಡಿದ್ದರು. ಸದ್ಯ ಆರೋಪಿಗಳನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.