ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರ ಪೋಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯುವಕ ಕೆರೆಯಲ್ಲಿ ಮುಳುಗಿ ಕೊನೆಯುಸಿರೆಳೆದ ದಾರುಣ ಘಟನೆ ನಡೆದಿದೆ. ಹೊಸನಗರ ತಾಲೂಕು ಹನಿಯದ ಪ್ರಸನ್ನ ಎಂಬ ಯುವಕ ಕೆರೆಯಲ್ಲಿ ಮುಳುಗಿ ಅಸುನೀಗಿದ ಛಾಯಗ್ರಾಹಕ.
ರಾಮನಗರ (ಜ.1): ಶಿವಮೊಗ್ಗ ಸಂಸದ ರಾಘವೇಂದ್ರರವರ ಫೋಟೋಗ್ರಾಫರ್ ಪ್ರಸನ್ನ ಭಟ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ತಾಲೂಕಿನ ಮಾವತ್ತೂರು ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸಂಸದ ರಾಘವೇಂದ್ರ ದೆಹಲಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಪ್ರಸನ್ನ ಭಟ್ ರಜೆಯಲ್ಲಿದ್ದರು. ಭಾನುವಾರ ಸಂಜೆ ರಾಮೇಶ್ವರಕ್ಕೆ ತೆರಳಬೇಕಿದ್ದ ಅವರು ಸಮಯವಿದ್ದ ಕಾರಣ ಆರು ಮಂದಿ ಸ್ನೇಹಿತರೊಂದಿಗೆ ಬೆಳಗ್ಗೆ ಕನಕಪುರದಲ್ಲಿರುವ ಸ್ನೇಹಿತ ಕೌಶಿಕ್ ರವರ ಮನೆಗೆ ಬಂದಿದ್ದರು. ಮಾವತ್ತೂರು ಕೆರೆಯಲ್ಲಿ ಈಜಲು ಪ್ರಸನ್ನ ಮತ್ತು ಸ್ನೇಹಿತರು ನೀರಿಗೆ ಇಳಿದಿದ್ದಾರೆ. ಈಜಲು ಬಾದ ಕಾರಣ ಕೌಶಿಕ್ ನೀರಿಗೆ ಇಳಿದಿರಲಿಲ್ಲ. ಈಜಲು ಹೋದ ಪ್ರಸನ್ನ ಭಟ್ ನೀರಿನಿಂದ ಮೇಲಕ್ಕೆ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಕೌಶಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಸನ್ನ ಭಟ್‌ಗಾಗಿ ಶೋಧ ಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ. ಆನಂತರ ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರಸನ್ನ ಭಟ್‌ಗಾಗಿ ಶೋಧ ಕಾರ್ಯ ಮುಂದುವರೆಸಿ ಶವ ಹೊರಕ್ಕೆ ತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಸ್ಥಾನದಲ್ಲಿ ಟ್ರಕ್ - ಕಾರು ಮುಖಾಮುಖಿ ಡಿಕ್ಕಿ: ಐವರು ಬಲಿ; ಟ್ರಕ್ ಚಾಲಕ ನಾಪತ್ತೆ..!
ಸಂಸದ ಬಿವೈ ರಾಘವೇಂದ್ರ ಅವರು ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಇಲ್ಲದ ಕಾರಣ ಪ್ರಸನ್ನ ಅವರು ರಾಮನಗರಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ರಾಮೇಶ್ವರಕ್ಕೆ ಪ್ರವಾಸ ಹೊರಟಿದ್ದ ಅವರು ಇದರ ಮಧ್ಯೆ ಸಹೋದರನ ಮನೆ ರಾಮನಗರದ ಕನಕಗಿರಿಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ.