ಲಂಚ ಪಡೆದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಅರೆಸ್ಟ್‌: ಸುದೀರ್ಘ ಲೋಕಾಯುಕ್ತ ದಾಳಿ ಅಂತ್ಯ

By Girish Goudar  |  First Published Mar 3, 2023, 8:38 AM IST

9 ಗಂಟೆ -30 ನಿಮಿಷಗಳವರೆಗೆ ನಡೆದ ಸುದೀರ್ಘ ಪರಿಶೀಲನೆ ಅಂತ್ಯಗೊಳಿಸಲಾಗಿದೆ. ನಿನ್ನೆ(ಗುರುವಾರ) ಸಂಜೆ 6-30 ಕ್ಕೆ ಲೋಕಾಯುಕ್ತ ದಾಳಿ ನಡೆದಿತ್ತು, ಇಂದು(ಶುಕ್ರವಾರ) ಬೆಳಗಿನ ಜಾವ 4 ಗಂಟೆಗೆ ಪರಿಶೀಲನೆ ಅಂತ್ಯವಾಗಿದೆ. 


ಬೆಂಗಳೂರು(ಮಾ.03):  ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚೀಫ್ ಅಕೌಂಟೆಂಟ್ ಪ್ರಶಾಂತ್ ಮಾಡಾಳ್‌ ಲಂಚ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಪ್ರಶಾಂತ್ ಕಚೇರಿ ಮೇಲೆ ನಡೆಸಿದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. 9 ಗಂಟೆ -30 ನಿಮಿಷಗಳವರೆಗೆ ನಡೆದ ಸುದೀರ್ಘ ಪರಿಶೀಲನೆ ಅಂತ್ಯಗೊಳಿಸಲಾಗಿದೆ. ನಿನ್ನೆ(ಗುರುವಾರ) ಸಂಜೆ 6-30 ಕ್ಕೆ ಲೋಕಾಯುಕ್ತ ದಾಳಿ ನಡೆದಿತ್ತು, ಇಂದು(ಶುಕ್ರವಾರ) ಬೆಳಗಿನ ಜಾವ 4 ಗಂಟೆಗೆ ಪರಿಶೀಲನೆ ಅಂತ್ಯವಾಗಿದೆ ಅಂತ ತಿಳಿದು ಬಂದಿದೆ. ಶಾಸಕನ ಪುತ್ರ ಸೇರಿ ನಾಲ್ಕು ಜನರನ್ನ  ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.  

Tap to resize

Latest Videos

ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಗ ಪ್ರಶಾಂತ್‌ 40 ಲಕ್ಷ ಸಮೇತ ಲೋಕಾ ಬಲೆಗೆ: BWSSB ಚೀಫ್‌ ಅಕೌಂಟೆಂಟ್‌ ಆಗಿ ಸೇವೆ

ಪ್ರಶಾಂತ್  ಮಾಡಾಳ್, ಸಿದ್ದೇಶ್, (ಸಂಬಂಧಿ), ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್(ದುಡ್ಡು ಕೊಡಲು ಬಂದವನು) ಅವರನ್ನ ಬಂಧಿಸಿಸಲಾಗಿದೆ.  M ಸ್ಟುಡಿಯೋದಲ್ಲಿರುವ ದಾಖಲಾತಿಗಳು, ನಗದನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನ ಬಂಧಿಸಿ ಕರೆದೊಯ್ದಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. ಇದುವರೆಗೆ ಒಟ್ಟು ಒಂದು ಮುಕ್ಕಾಲು ಕೋಟಿ ನಗದನ್ನ ವಶಕ್ಕೆ ಪಡೆಯಲಾಗಿದೆ. 
ಇಂದು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರು ಪಡೆಸಿ ಅರೋಪಿಗಳ ವಶಕ್ಕೆ ಪಡೆಯಲಿದ್ದಾರೆ ಅಧಿಕಾರಿಗಳು. ಹಣದ ಮೂಲ ಮತ್ತು ಯಾವ ಯಾವ ಟೆಂಡರ್ ಗಾಗಿ ಹಣ ಪಡೆಯಲಾಗಿತ್ತು ಎಂದು ತನಿಖೆಯನ್ನ ಮುಂದುವರಿಸಿದ್ದಾರೆ. 

ಶಾಸಕರ ಮನೆಯಲ್ಲಿ ಮುಂದುವರಿದ ಪರಿಶೀಲನೆ 

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಒಡೆತನದ  ಮಾನ್ಷಿಯನ್ ಮೇಲೆ ದಾಳಿ ಮುಂದುವರೆದಿದೆ. ಡಿವೈ ಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ಮುಂದುವರೆಸಲಾಗಿದೆ. 

ಇನ್ನು ಕೆಎಸ್‌ಡಿಎಲ್ ಎಂಡಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಕೆಎಸ್‌ಡಿಎಲ್ ಎಂಡಿ ಮಹೇಶ್ ಮನೆಯನ್ನ ಅಧಿಕಾರಿಗಳು ಸರ್ಚ್ ಮಾಡಿದ್ದಾರೆ. ತಡರಾತ್ರಿ ಬನಶಂಕರಿ ಬಳಿ ಇರೋ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದ್ರೆ ಮಹೇಶ್ ಅವರ ಮನೆಯಲ್ಲಿ ಅಂತಹ ಯಾವುದೇ ದಾಖಲೆಗಳು, ಹಣಗಳು ಪತ್ತೆಯಾಗಿಲ್ಲ ಅಂತ ತಿಳಿದು ಬಂದಿದೆ. 

click me!