ಸೋನಾಲಿ ಪೋಗಟ್ ನಿಗೂಢ ಸಾವು: ಕೊನೆಕ್ಷಣದ ವಿಡಿಯೋ ವೈರಲ್

By Anusha Kb  |  First Published Aug 26, 2022, 8:14 PM IST

ಬಿಜೆಪಿ ನಾಯಕಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್‌ ಅವರ ಸಾವಿನ ಸುತ್ತ ಹಬ್ಬಿರುವ ನಿಗೂಢತೆಯ ನಡುವೆ ಅವರ ಸಾವಿಗೂ ಮೊದಲು ಅವರಿದ್ದ ಗೋವಾದ ರೆಸಾರ್ಟ್‌ನ ವಿಡಿಯೋವೊಂದನ್ನು ಗೋವಾ ಪೊಲೀಸರು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಂಚಲನ ಮೂಡಿಸಿದೆ


ನವದೆಹಲಿ: ಬಿಜೆಪಿ ನಾಯಕಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್‌ ಅವರ ಸಾವಿನ ಸುತ್ತ ಹಬ್ಬಿರುವ ನಿಗೂಢತೆಯ ನಡುವೆ ಅವರ ಸಾವಿಗೂ ಮೊದಲು ಅವರಿದ್ದ ಗೋವಾದ ರೆಸಾರ್ಟ್‌ನ ವಿಡಿಯೋವೊಂದನ್ನು ಗೋವಾ ಪೊಲೀಸರು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಂಚಲನ ಮೂಡಿಸಿದೆ. ಜೊತೆಗೆ ಪೋಗಟ್ ಸಹಜ ಸಾವಲ್ಲ ಕೊಲೆ ಎಂದು ಹೇಳುತ್ತಿರುವ ಸೋನಾಲಿ ಪೋಗಟ್ ಕುಟುಂಬದ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಸೋನಾಲಿ ಜೀನ್ಸ್ ಚಡ್ಡಿ ಹಾಗೂ ರವಿಕೆ ಧರಿಸಿದ್ದು, ಓರ್ವ ವ್ಯಕ್ತಿ ಬಂದು ಆಕೆಯ ಹೆಗಲಿಗೆ ಕೈ ಹಾಕಿ ಆಕೆಯನ್ನು ಎಳೆದುಕೊಂಡು ಹೋಗುತ್ತಿರುವುದು ಈ ವಿಡಿಯೋದಲ್ಲಿದೆ. ಅಲ್ಲದೇ ಪೋಗಾಟ್‌ ಅವರು ಬಹಳ ಕಷ್ಟಪಟ್ಟುಕೊಂಡು ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.

ಗೋವಾದ ಪಬ್ ಒಂದರ ಹೊರಭಾಗದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದೆ. ಪಬ್‌ನಿಂದ ಮುಂಜಾನೆ 4.30 ರ ಸುಮಾರಿಗೆ ಇವರು ಹೊರಬಿದ್ದಿದ್ದಾರೆ. ಆಗಸ್ಟ್ 23 ರಂದು ಫೋಗಟ್ ಅವರನ್ನು ಗೋವಾದ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ಕರೆತರುತ್ತಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಪೊಲೀಸರು ಆರಂಭದಲ್ಲಿ ಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಆಕೆಯ ಸಹೋದರ ರಿಂಕು ಧಾಕಾ ಸೇರಿದಂತೆ ಫೋಗಟ್ ಅವರ ಕುಟುಂಬ ಸದಸ್ಯರು ಆಕೆಯ ಸಾವು ಸಹಜ ಸಾವಲ್ಲ, ಆಕೆಯ ಸಹಚರರೇ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.



Goa police identifies the drug peddler who provided drugs to the accused who later on gave the drugs to Sonali Phogat. A special team has been sent by the Goa police for the raids as well. & with more details. pic.twitter.com/iO5kpym6j6

— TIMES NOW (@TimesNow)

| Sonali Phogat death: Goa IGP says,"...Video establishes that one of the accused forcefully made her consume a substance. When confronted, accused Sukhwinder Singh & Sudhir Sangwan confessed they intentionally mixed obnoxious chemical into a liquid & made her drink it..." pic.twitter.com/85aPyjuGy4

— ANI (@ANI)

Tap to resize

Latest Videos

ನಟಿ ಮತ್ತು ರಾಜಕಾರಣಿ ಸೋನಾಲಿ ಪೋಗಟ್‌ ಸಾವಿನ ಸುತ್ತ ಹಲವು ಅನುಮಾನಗಳು ಸೃಷ್ಟಿಯಾಗಿದ್ದು ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋನಾಲಿ ಪೋಗಟ್‌ ಸಾಯುವ ಹಿಂದಿನ ದಿನ ರಾತ್ರಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಬಲವಂತದಿಂದ ಮಾದಕ ವಸ್ತು ನೀಡಲಾಗಿದೆ, ಇದೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಗೋವಾ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ. ಬಿಜೆಪಿ ನಾಯಕಿಗೆ ಪಾರ್ಟಿಯಲ್ಲಿ ಡ್ರಗ್ಸ್‌ ನೀಡಲಾಗಿದೆ, ಅದಾದ ನಂತರ ಆಕೆಯನ್ನು ಆರೋಪಿಗಳು ಟಾಯ್ಲೆಟ್‌ಗೆ ಕರೆದೊಯ್ದಿದ್ದಾರೆ. ಎರಡು ಗಂಟೆಗಳ ಕಾಲ ಟಾಯ್ಲೆಟ್‌ನಲ್ಲಿ ಏನು ನಡೆದಿರಬಹುದು ಊಹಿಸಿ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗೋವಾದ ಇನ್ಸ್‌ಪೆಕ್ಟರ್‌ ಜನರಲ್‌ ಓಮ್ವಿರ್‌ ಸಿಂಗ್ ಬಿಷ್ನೋಯಿ ಮಾಧ್ಯಮಕ್ಕೆ ಮಾಹಿತಿ ನೀಡಿ, "ಪಾರ್ಟಿಯಲ್ಲಿ ಸೋನಾಲಿ ಪೋಗಟ್‌ರಿಗೆ ಒಬ್ಬ ಆರೋಪಿ ಬಲವಂತದಿಂದ ಡ್ರಗ್ಸ್‌ ನೀಡಿರುವುದು ಕಂಡು ಬಂದಿದೆ. ಯಾವುದೋ ಒಂದು ರಾಸಾಯನಿಕವನ್ನು ಅವರಿಗೆ ನೀಡಲಾಗಿದೆ. ಅದಾದ ನಂತರ ಅವರು ಅವರ ಮೇಲಿನ ಕಂಟ್ರೋಲ್‌ ಕಳೆದುಕೊಂಡಿದ್ದಾರೆ," ಎಂದರು. 

ಬೆಳಗ್ಗೆ 4.30ಕ್ಕೆ ಅವರು ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರು. ನಂತರ ಆರೋಪಿ ಅವರನ್ನು ಟಾಯ್ಲೆಟ್‌ಗೆ ಕರೆದೊಯ್ದಿದ್ದಾನೆ. ಎರಡು ಗಂಟೆಗಳ ಕಾಲ ಟಾಯ್ಲೆಟ್‌ನಲ್ಲಿದ್ದರು ಅಂದರೆ ಅಲ್ಲಿ ಏನು ನಡೆದಿರಬಹುದು ಎಂಬುದನ್ನು ನೀವೇ ಊಹಿಸಿ. ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದ ಜೊತೆ ಅವರನ್ನು ಘಟನಾ ಸ್ಥಳಗಳಿಗೆ ಕರೆದೊಯ್ಯುತ್ತೇವೆ. ನ್ಯಾಯಾಲಯಕ್ಕೂ ಇಬ್ಬರೂ ಆರೋಪಿಗಳನ್ನು ಶೀಘ್ರವಾಗಿ ಹಾಜರುಪಡಿಸುತ್ತೇವೆ. ಆರೋಪಿಗಳು ನೀಡಿದ್ದ ಮಾದಕ ವಸ್ತುವಿನ ಪ್ರಭಾವದಿಂದಲೇ ಸೋನಾಲಿ ಪೋಗಟ್‌ ಮೃತಪಟ್ಟಿರುವ ಸಾಧ್ಯತೆಯಿದೆ," ಎಂದು ಐಜಿಪಿ ಹೇಳಿದ್ದಾರೆ. 

click me!