ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್

By Govindaraj S  |  First Published Jul 15, 2023, 9:23 AM IST

ಚುನಾವಣಾ ಸಂದರ್ಭದಲ್ಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್  ಆಗಿದ್ದಾರೆ


ಕಲಬುರಗಿ (ಜು.15): ಚುನಾವಣಾ ಸಂದರ್ಭದಲ್ಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್  ಆಗಿದ್ದಾರೆ. ಮಣಿಕಂಠ ರಾಠೋಡ್, ಪ್ರಿಯಾಂಕ್ ಖರ್ಗೆ ವಿರುದ್ದ ಪರಾಜಿತ ಬಿಜೆಪಿ ಅಭ್ಯರ್ಥಿಯಾಗಿದ್ದು, ಚುನಾವಣಾ ಸಂದರ್ಭದಲ್ಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಮುಖ್ಯವಾಗಿ  ರಾತ್ರಿಯೇ ಸ್ಟೇಷನ್ ಬೇಲ್ ಮೇಲೆ ಮಣಿಕಂಠ ರಾಠೋಡ್ ಹೊರ ಬಂದಿದ್ದಾನೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. 

ಖರ್ಗೆ ಕುಟುಂಬ ಸಾಫ್ ಮಾಡುವುದಾಗಿ ಮಣಿಕಂಠ ಹೇಳಿದ್ದ ಆಡಿಯೋ ಚುನಾವಣೆ ಸಂದರ್ಭದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಚಿತ್ತಾಪುರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ರಾಠೋಡಗೆ ನೋಟಿಸ್ ನೀಡಿದ್ದು, ಪ್ರಿಯಾಂಕ್ ಖರ್ಗೆ ವಿರುದ್ಧ ತೊಡೆತಟ್ಟಿದ್ದ ಮಣಿಕಂಠ ರಾಠೋಡಗೆ ಇದೀಗ ಸಂಕಷ್ಟ ಎದುರಾಗಿದೆ. ಚಿತ್ತಾಪುರದಲ್ಲಿ ಪ್ರಿಯಾಂಕ್ ವರ್ಸಸ್ ಮಣಿಕಂಠ ಪೊಲಿಟಿಕಲ್‌ ಫೈಟ್ ವಾರ್ ಶುರುವಾಗಿದೆ.

Latest Videos

undefined

ಸರ್ಕಾರ ಸಂಘರ್ಷಕ್ಕಿಳಿದರೆ ಎದುರಿಸಲು ಸಿದ್ಧ: ಕೆಂಪಣ್ಣ ಎಚ್ಚರಿಕೆ

ಪ್ರಿಯಾಂಕ್‌ ಕುಮ್ಮಕ್ಕಿನಿಂದ ತಮ್ಮ ವಿರುದ್ಧ ಸರಣಿ ಕೇಸ್‌: ರಾಜಕೀಯ ದ್ವೇಷದ ಕಾರಣಕ್ಕಾಗಿ ತಮ್ಮ ವಿರುದ್ಧ ಅನಗತ್ಯವಾಗಿ ಕಿರುಕುಳ ನೀಡುತ್ತಾ ಬೇರೆ ಬೇರೆ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲಾಗುತ್ತಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಪೊಲೀಸ್‌ ಅಧಿಕಾರಿಗಳೂ ಶಾಮೀಲಾಗಿದ್ದಾರೆ, ಇವರೆಲ್ಲರ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ತಾವು ನೀತಿ-ಸಂಹಿತೆ ಉಲ್ಲಂಘಿಸಿರುವುದಾಗಿ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ತಮ್ಮ ವಿರುದ್ಧ ದೂರುಗಳನ್ನು ದಾಖಲಿಸಲಾಗುತ್ತಿದೆ. ಈ ಕುರಿತು ಕಲಬುರಗಿಯ ಚೌಕ್‌ ಪೊಲೀಸ್‌ ಠಾಣೆ, ಮಾಡಬೂಳ ಮತ್ತು ಚಿತ್ತಾಪುರ ಪೊಲೀಸ್‌ ಠಾಣೆಗಳಿಂದ ಈಗಾಗಲೇ ತಮಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಆ ಮೂಲಕ ತಮ್ಮನ್ನು ಹಾಗೂ ತಮ್ಮ ಬೆಂಬಲಿಗರನ್ನು ಬೆದರಿಸುವ ಕೆಲಸ ನಡೆದಿದೆ ಎಂದರು.

ಸಚಿವ ಪ್ರಿಯಾಂಕ್‌ ಅವರು ಆರ್‌ಡಿಪಿಆರ್‌ ಸಚಿವರಾಗಿದ್ದರೂ ಸಹ ಖಾತೆಯಲ್ಲಿ ಪ್ರಗತಿಗೆ ಮುಂದಾಗದೆ ತಮ್ಮ ವಿರುದ್ಧ ರಾಜಕೀಯ ದ್ವೇಷ ಸಾಧನೆಗೆ ಏನೆಲ್ಲಾ ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಮಣಿಕಂಠ ಗಂಭೀರ ಆರೋಪ ಮಾಡಿದರು. ಈ ಹಿಂದೆ ಚುನಾವಣೆಗೂ ಮುಂಚೆ ಸಚಿವ ಪ್ರಿಯಾಂಕ್‌ ಅವರ ಬೆಂಬಲಿಗ ರಾಜು ಜಾನೆ ವಿರುದ್ಧ ತಾವು ಆರೋಪ ಮಾಡಿದ್ದಕ್ಕೆ ಪ್ರತೀಕಾರವಾಗಿ ತಮ್ಮ ವಿರುದ್ಧ ಚೌಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆರ್‌ಎಸ್‌ಎಸ್‌ ಸಂಸ್ಥೆಗೆ ಜಮೀನು ಮಂಜೂರಿಗೆ ತಡೆ: ಬೊಮ್ಮಾಯಿ ಆಕ್ರೋಶ

ಚಿತ್ತಾಪುರದಲ್ಲಿ ಡಿ.ಜೆ. ಬಳಸಿದ ಕಾರಣಕ್ಕಾಗಿ ತಮ್ಮ ಬೆಂಬಲಿಗ ಹಾಗೂ ಬಿಜೆಪಿ ಮುಖಂಡ ಅಶ್ವತ್ಥರಾಂ ರಾಠೋಡ್ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚುನಾವಣೆಗೆಸ್ಪರ್ಧಿಸಿದ್ದ ವೇಳೆ ಪ್ರಿಯಾಂಕ್‌ ಅವರ ನಾಮಪತ್ರ ಅನೂರ್ಜಿತಗೊಳಿಸಬೇಕೆಂದು ಒತ್ತಾಯಿಸಿ ಅಶ್ವತ್ಥರಾಂ ರಾಠೋಡ್‌ ಕಲಬುರಗಿ ಹೈಕೋರ್ಚ್‌ ಪೀಠದಲ್ಲಿ ಮನವಿ ಸಲ್ಲಿಸಿದ್ದಕ್ಕೆ ಪ್ರತೀಕಾರವಾಗಿ ಅಶ್ವತ್ಥರಾಂ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ಡಿ.ಜೆ. ಬಳಕೆ ನೆಪದಲ್ಲಿ ದೂರು ದಾಖಲಾಗಿದೆ ಎಂದು ದೂರಿದರು.

click me!