Love Triangle: ತನ್ನೆದುರೇ ಸೆಕ್ಸ್‌ ಮಾಡುವಂತೆ ಹೇಳಿ ಅವರ ಮೇಲೆ ಫೆವಿಕ್ವಿಕ್‌ ಸುರಿದು ಕೊಂದ ಮಂತ್ರವಾದಿ!

By Santosh Naik  |  First Published Nov 23, 2022, 4:40 PM IST

ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಪ್ರೇಮಿಗಳನ್ನು ಅತ್ಯಂತ ಅಮಾನುಷವಾಗಿ ಕೊಂದ ಪ್ರಕರಣದಲ್ಲಿ ರಾಜಸ್ಥಾನದ ಉದಯಪುರದಲ್ಲಿ ಪೊಲೀಸರು ಮಂತ್ರಿವಾದಿಯನ್ನು ಬಂದಿಸಿದ್ದಾರೆ. ಕೊಲೆಯಾದ ಮೂರು ದಿನಗಳ ಬಳಿಕ ಪೊಲೀಸರು ನಗ್ನದೇಹಗಳನ್ನು ಪತ್ತೆ ಮಾಡಿದ್ದರು.


ಉದಯಪುರ (ನ.23): ಪ್ರೇಮಿಗಳಿಬ್ಬರನ್ನು ದಾರುಣವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ರಾಜಸ್ಥಾನದ ಪೊಲೀಸರು 55 ವರ್ಷದ ಮಂತ್ರವಾದಿಯನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್‌ 18 ರಂದು ರಾಜಸ್ಥಾನದ ಪೊಲೀಸರು ಕೆಲಬಾವಡಿಯ ಅರಣ್ಯ ಪ್ರದೇಶದಲ್ಲಿ ಎರಡು ದೇಹಗಳನ್ನು ನಗ್ನ ಸ್ಥಿತಿಯಲ್ಲಿ ಪತ್ತೆ ಮಾಡಿದ್ದರು. ಇವರಿಬ್ಬರು ಕೊಲೆಯಾದ ಮೂರು ದಿನಗಳ ಬಳಿಕ ಈ ದೇಹಗಳು ಪತ್ತೆಯಾಗಿದ್ದವು. ತನಿಖೆಯ ಆರಂಭದಲ್ಲಿ ಇದೊಂದುಸ ಮರ್ಯಾದಾ ಹತ್ಯೆ ಆಗಿರಬಹುದು ಎಂದು ಪೊಲೀಸರು ಶಂಕೆ ಮಾಡಿದ್ದರು. ಅದಕ್ಕೆ ಕಾರಣ ಇಬ್ಬರು ವ್ಯಕ್ತಿಗಳ ಜಾತಿ ಬೇರೆ ಬೇರೆಯಾಗಿರುವುದು ಹಾಗೂ ಹತ್ಯೆ ಮಾಡಿದ್ದ ರೀತಿಯನ್ನು ಗಮನಿಸಿ ಪೊಲೀಸರು ಈ ಅನುಮಾನಕ್ಕೆ ಬಂದಿದ್ದರು. ಆದರೆ, ಈ ಪ್ರಕರಣದಲ್ಲಿ ಪೊಲೀಸರು ಮಂತ್ರವಾದಿಯೊಬ್ಬನನ್ನು ಬಂಧ ಮಾಡಿದ ಬಳಿಕ ಇದರ ಒಂದೊಂದೇ ವಿವರಗಳು ಹೊರಬಂದಿದೆ. ಪೊಲೀಸರ ವಿಚಾರಣೆಯ ವೇಳೆ ಮಂತ್ರವಾದಿಯು ತಾನೇ ಅವರಿಬ್ಬರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. 30 ವರ್ಷದ ಶಿಕ್ಷಕ ರಾಹುಲ್‌ ಮೀನಾ ಮತ್ತು 28 ವರ್ಷ ಸೋನು ಕುನ್ವರ್‌ ಅವರನ್ನು ಮೃತರು ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ರಾಹುಲ್‌ ಹಾಗೂ ಸೋನು ಇಬ್ಬರೂ ಪ್ರತ್ಯೇಕ ವ್ಯಕ್ತಿಗಳನ್ನು ಮದುವೆಯಾಗಿದ್ದರು. ಇಬ್ಬರ ಕುಟುಂಬಗಳೂ ಕೂಡ ಭಡವಿ ಗುಡಾದಲ್ಲಿರುವ ಇಚ್ಛಾಪೂರ್ಣ ಶೇಷನಾಗ್‌ ಭಾವಜಿ ಮಂದಿರದಲ್ಲಿ ತಾಂತ್ರಿಕರನ್ನು ಭೇಟಿ ಮಾಡುತ್ತಿದ್ದರು ಅಲ್ಲಿಯೇ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು.

ಅದಾದ ಕೆಲವೇ ದಿನಗಳಲ್ಲಿ ಇಬ್ಬರು ಮತ್ತಷ್ಟು ಆತ್ಮೀಯರಾಗಿದ್ದರು. ಸೋನು ಕಾರಣಕ್ಕಾಗಿಯೇ ರಾಹುಲ್‌ ತನ್ನ ಪತ್ನಿಯೊಂದಿಗೆ ಪ್ರತಿ ದಿನ ಗಲಾಟೆ ಮಾಡುತ್ತಿದ್ದಾರೆ. ಇದಕ್ಕಾಗಿ ರಾಹುಲ್‌ನ ಪತ್ನಿ ಬಂಧಿತನಾಗಿರುವ ಮಂತ್ರವಾದಿ ಭಲೇಶ್‌ ಕುಮಾರ್‌ನ ಸಹಾಯ ಕೇಳಿದ್ದರು. ಪೊಲೀಸರ ಪ್ರಕಾರ, ಭಲೇಶ್‌ ಕಲೆದ 7-8 ವರ್ಷಗಳಿಂದ ಇಲ್ಲಿಯೇ ವಾಸವಿದ್ದ ಹಾಗೂ ಜನರ ಸಮಸ್ಯೆಗಳಿಗೆ ತಾಯತ ನೀಡಿ ಪರಿಹಾರ ಮಾಡುವ ಕೆಲಸ ಮಾಡುತ್ತಿದ್ದ. ಇನ್ನು ಸೋನು ಬಗ್ಗೆ ಸ್ವತಃ ಮಂತ್ರವಾದಿ ಭಲೇಶ್‌ ಕೂಡ ಆಕರ್ಷಿತನಾಗಿದ್ದ ಎನ್ನುವುದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ರಾಹುಲ್‌, ಸೋನು ಜೊತೆ ಸಂಬಂಧ ಹೊಂದಿರುವ ವಿಷಯವನ್ನು ಆತನ ಹೆಂಡತಿಗೆ ತಿಳಿಸಿದ್ದ.

ತನ್ನ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ತಿಳಿಸಿದ್ದು ಮಂತ್ರವಾದಿಯೇ ಎನ್ನುವುದು ರಾಹುಲ್‌ಗೂ ಗೊತ್ತಾಗಿತ್ತು. ಇದನ್ನೂ ಸೋನುಗೂ ತಿಳಿಸಿದ್ದ. ಹೀಗೆ ಮುಂದುವರಿದರೆ, ಲೈಂಗಿಕ ದೌರ್ಜನ್ಯದ ಕೇಸ್‌ ಹಾಕುವುದಾಗಿ ಇಬ್ಬರೂ ಮಂತ್ರವಾದಿಗೆ ಬೆದರಿಸಿದ್ದರು. ಇಷ್ಟು ವರ್ಷಗಳ ಕಾಲ ಸಂಪಾದಿಸಿದ್ದ ಹೆಸರು ಹಾಳಾಗಿ ಹೋಗುತ್ತದೆ ಎನ್ನುವ ಭಯದಲ್ಲಿ ಸ್ವತಃ ಮಂತ್ರವಾದಿ ಇವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ಮಂತ್ರವಾದಿ ಇದಕ್ಕಾಗಿ 50 ಟ್ಯೂಬ್‌ ಫೆವಿಕ್ವಿಕ್‌ಅನ್ನು ತಂದು ಒಂದು ಬಾಟಲ್‌ಗೆ ಹಾಕಿ ಇರಿಸಿಕೊಂಡಿದ್ದ.

ಅಫ್ತಾಬ್‌ ನನ್ನನ್ನು ಕೊಲ್ಲುತ್ತಾನೆ, ತುಂಡಾಗಿ ಕತ್ತರಿಸುತ್ತಾನೆಂದು 2 ವರ್ಷಗಳ ಹಿಂದೆಯೇ ದೂರು ನೀಡಿದ್ದ ಶ್ರದ್ಧಾ..!

ನವೆಂಬರ್‌ 15 ರಂದು ರಾಹುಲ್‌ ಹಾಗೂ ಸೋನು ಇಬ್ಬರನ್ನೂ  ಅಜ್ಞಾತ ಸ್ಥಳವೊಂದಕ್ಕೆ ಕರೆದಿದ್ದ ಮಂತ್ರವಾದಿ, ಇಬ್ಬರಿಗೂ ತನ್ನ ಎದುರಲ್ಲೇ ಸೆಕ್ಸ್ ಮಾಡುವಂತೆ ಹೇಳಿದ್ದ. ರಾಹುಲ್‌ ಹಾಗೂ ಸೋನು ಇಬ್ಬರೂ ಸೆಕ್ಸ್‌ನಲ್ಲಿ ತೊಡಗಿದ್ದಾಗ ಮಂತ್ರವಾದಿ ಅವರ ಮೇಲೆ ಫೆವಿಕ್ವಿಕ್‌ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸೆಕ್ಸ್‌ನಲ್ಲಿ ತೊಡಗಿದ್ದಾಗಲೇ ಇಬ್ಬರನ್ನು ಕೊಲ್ಲುವುದು ಮಥ್ರವಾದಿಯ ಉದ್ದೇಶವಾಗಿದ್ದರು. ಹಾಗೇನಾದರೂ ಇವರ ಮೃತದೇಹವನ್ನು ಜನರು ಕಂಡಲ್ಲಿ, ಅನೈತಿಕ ಸಂಬಂಧಕ್ಕಾಗಿಯೇ ಕೊಲೆಯಾಗಿದೆ ಎಂದು ಅಂದುಕೊಳ್ಳುತ್ತಾರೆ, ಪೊಲೀಸರು ಕೂಡ ನಂಬುತ್ತಾರೆ ಎಂದುಕೊಂಡಿದ್ದ.

Tap to resize

Latest Videos

Shraddha murder Case: ಪಾಲಿಗ್ರಾಫ್‌ ಪರೀಕ್ಷೆಗೆ ಒಳಗಾದ ಅಫ್ತಾಬ್ ಪೂನಾವಾಲಾ

ಮಂತ್ರವಾದಿಯು ರಾಹುಲ್‌ ಹಾಗೂ ಸೋನು ಮೇಲೆ ಫೆವಿಕ್ವಿಕ್‌ ಸುರಿದ ಬಳಿಕ, ಕೆಲವೇ ಕ್ಷಣದಲ್ಲಿ ಇಬ್ಬರೂ ಪರಸ್ಪರ ಅಂಟಿಕೊಂಡಿದ್ದರು. ಬೇರೆಬೇರೆಯಾಗಲು ಅವರು ಪ್ರಯತ್ನವನ್ನು ಮಾಡಿದ್ದರು. ಅವರ ಚರ್ಮ ಕೂಡ ಕಿತ್ತು ಹೋಗಗಿದ್ದವು. ರಾಹುಲ್‌ನ ಮರ್ಮಾಂಗ ಕೂಡ ಕಿತ್ತು ಬಂದಿದಿತ್ತು. ಸೋನು ಕನ್ವರ್‌ಳ ಖಾಸಗಿ ಭಾಗ ಕೂಡ ಬೇರೆಯಾಗಿತ್ತು. ಈ ಹಂತದಲ್ಲಿ ರಾಹುಲ್‌ ಹಾಗೂ ಸೋನು ಮೇಲೆ ಮಂತ್ರವಾದಿ ದಾಳಿ ಮಾಡಿದ್ದಾರೆ. ರಾಹುಲ್‌ನ ಕುತ್ತಿಗೆಯನ್ನು ಮಂತ್ರವಾದಿ ಸೀಳಿದಿದ್ದರೆ, ಸೋನುಗೆ ಚೂರಿ ಇರಿದಿದ್ದಾರೆ. ಆ ಬಳಿಕ, ಸ್ಥಳದಿಂದ ಪರಾರಿಯಾಗಿದ್ದಾರೆ. 

ಪೊಲೀಸರು ಶವಗಳನ್ನು ಪತ್ತೆ ಮಾಡಿದ ನಂತರ, ಅವರು ಪ್ರದೇಶದ ಸುತ್ತಮುತ್ತಲಿನ 50 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಲ್ಲದೆ, 200 ಜನರ ವಿಚಾರಣೆ ಮಾಡಿದ್ದಾರೆ. ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ವಿಕಾಸ್ ಕುಮಾರ್ ತಿಳಿಸಿದ್ದಾರೆ. ತನಿಖೆಯ ವೇಳೆ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ, ದಂಪತಿಯ ಸಾವಿನಲ್ಲಿ ಭಲೇಶ್‌ ಕುಮಾರ್ ಅವರ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮಹಿಳೆಯೊಂದಿಗೆ ಫಲೇಶ್‌  ಕುಮಾರ್‌ ಫೋನ್‌ನಲ್ಲಿ ಮಾತನಾಡಿರುವ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದ್ದು, ಈ ಸಂಬಂಧ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಪ್ರಕರಣದಲ್ಲಿ ತ್ರಿಕೋನ ಪ್ರೇಮದ ಕೋನದಲ್ಲೂ ಪೊಲೀಸರು ತನಿಖೆ ನಡೆಸಲಿದ್ದಾರೆ.

click me!