
ವರದಿ: ಟಿ.ಮಂಜುನಾಥ, ಆನೇಕಲ್
ಹೊಸಕೋಟೆ (ಏ.04): ಆತ ಜೆಡಿಎಸ್ ಮಾಜಿ ಕಾರ್ಪೊರೇಟರ್ (JDS Ex Corporator) ಪತಿಯಾಗಿದ್ದು, ಕಳೆದ ಒಂದು ವಾರದ ಹಿಂದೆ ಕಾರು ರಿಪೇರಿ ಮಾಡಿಸಿಕೊಂಡು ಜಮೀನಿನ ಬಳಿ ಹೋಗಿ ಬರುತ್ತೇನೆ ಅಂತಾ ತೆರಳಿದ್ದ. ಜಮೀನು ಬಳಿ ಹೋದವನು ವಾಪಸ್ ಬರಲೇ ಇಲ್ಲ. ಹೀಗಾಗಿ ಆತನ ಹುಡುಕಿಕೊಂಡು ಹೋದ ಪತ್ನಿಯ ಕಡೆಯವರಿಗೆ ಕಾರು ಮಾತ್ರ ಪತ್ತೆಯಾಗಿದ್ದು, ಕಾರಿನಲ್ಲಿ ರಕ್ತದ ಕಲೆಗಳಾಗಿವೆ. ಆದರೆ ಮಾಜಿ ಕಾರ್ಪೊರೇಟರ್ ಪತಿ ಇದೀಗ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ರಸ್ತೆ ಪಕ್ಕದಲ್ಲೆ ಕಾರು ಪಂಚರ್ ಆಗಿದ್ದು, ಕಾರನ್ನು ಪೊಲೀಸರು (Police) ತೀವ್ರ ತಪಾಸಣೆ ಮಾಡುತ್ತಿದ್ದಾರೆ ಮಾತ್ರವಲ್ಲದೇ ಸ್ಥಳದಲ್ಲಿ ಶ್ವಾನದಳದ ಮೂಲಕ ಪರಿಶೀಲನೆಯನ್ನು ನಡೆಸಲಾಗಿದೆ.
ಹೌದು! ಮಾಜಿ ಕಾರ್ಪೋರೇಟರ್ ಪತಿಯೊಬ್ಬ ನಿಗೂಡವಾಗಿ ನಾಪತ್ತೆಯಾಗಿರೋ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಚಿಂತಾಮಣಿ ರಸ್ತೆಯ ನಂದಗುಡಿ ಸಮೀಪ ನಡೆದಿದೆ. ಅಂದಹಾಗೆ ಬೆಂಗಳೂರಿನ ಬಿನ್ನಿಪೇಟೆಯ ಜೆಡಿಎಸ್ ಮಾಜಿ ಕಾರ್ಪೊರೇಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ (Lohith) ಎಂಬಾತನ ನಾಪತ್ತೆಯಾಗಿದ್ದಾನೆ. ಇನ್ನೂ ಲೋಹಿತ್ ಕಳೆದ ಮಾರ್ಚ್ 29 ರಂದು ಮನೆಯಲ್ಲಿ ಕಾರು ರಿಪೇರಿ ಮಾಡಿಸಿಕೊಂಡು ನಂದಗುಡಿಯ ಜಮೀನಿನ ಬಳಿ ಹೋಗಿ ಬರುತ್ತೇನೆ ಅಂತಾ ತಿಳಿಸಿ ತೆರಳಿದ್ದಾನೆ. ಆದರೆ ರಾತ್ರಿಯಾದರೂ ಮನೆಗೆ ಬಾರದ ಪತಿಯನ್ನ ನೆನೆದು ಗಾಬರಿಗೊಂಡ ಪತ್ನಿ ಐಶ್ವರ್ಯ ತಮ್ಮ ಅಭಿಗೆ ಹುಡುಕಲು ತಿಳಿಸಿದ್ದು, ಅಭಿ ಭಾವನನ್ನ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಲೋಹಿತ್ ತೆಗೆದುಕೊಂಡು ಬಂದಿದ್ದ ಕೆಎ 03, ಎನ್ಎಪ್1467 ಕಾರು ನಂದಗುಡಿ ಸಮೀಪ ಚಿಂತಾಮಣಿ ರಸ್ತೆಯ ಪಕ್ಕದಲ್ಲಿ ಪತ್ತೆಯಾಗಿದೆ.
ತನ್ನ ಹೆಂಡ್ತಿ ಸುಖಕ್ಕಾಗಿ ಈತ ಹೀಗಾ ಮಾಡೋದು....ಈತನ ಸ್ಟೋರಿ ಕೇಳಿದ್ರೆ ಅಬ್ಬಬ್ಬಾ....
ಕಾರು ಪಂಚರ್ ಆಗಿದ್ದ ರೀತಿಯಲ್ಲಿ ಪತ್ತೆ, ಕಾರಿನಲ್ಲಿ ರಕ್ತದ ಕಲೆಗಳು: ಮನೆಗೆ ಬಾರದ ಲೋಹಿತ್ ಕಾರು ಪಂಚರ್ ಆಗಿದ್ದು, ರಸ್ತೆ ಬದಿಯಲ್ಲಿ ಟೈರ್ ಸ್ಟೆಪ್ನಿ ಹಾಕಲು ಬಿಚ್ಚಲಾಗಿದೆ. ಆದರೆ ಲೋಹಿತ್ ಅಲ್ಲಿಂದ ನಿಗೂಡವಾಗಿ ನಾಪತ್ತೆಯಾಗಿದ್ದು, ಕಾರಿನ ಡೋರ್‌ಗಳಲ್ಲಿ ರಕ್ತದ ಕಲೆಗಳು ಕೂಡ ಪತ್ತೆಯಾಗಿವೆ. ತಕ್ಷಣ ಲೋಹಿತ್ ಕುಟುಂಬಸ್ಥರು ನಂದಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸರು, ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದ್ದು, ಕಾರಿನ ಸಮೀಪದ ದೇವಸ್ಥಾನದ ಬಳಿ ಲೋಹಿತ್ ಚಪ್ಪಲಿ ಹಾಗೂ ಬೆಲ್ಟ್ ಪತ್ತೆಯಾಗಿದೆ. ಇನ್ನೂ ಕಾರು ರೀಪೆರಿ ಮಾಡಿಸಿಕೊಂಡು ಕೆ.ಆರ್ ಪುರಂನಲ್ಲಿ ಸ್ನೇಹಿತನ ಬಳಿ ಹಣ ಪಡೆದು ಬರುತ್ತೇನೆ ಎಂದು ಮನೆಯಲ್ಲಿ ಲೋಹಿತ್ ತಿಳಿಸಿದ್ದಾನೆ.
ಆದರೆ ರಸ್ತೆಯ ಪಕ್ಕದಲ್ಲಿ ಕಾರು ಮಾತ್ರ ರಕ್ತದ ಕಲೆಗಳಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ನಂದಗುಡಿ ಪೊಲೀಸರಿಂದ ನಾಪತ್ತೆಯಾದ ಲೋಹಿತ್ ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕಾರು ರೀಪೆರಿ ಮಾಡಿಸಿಕೊಂಡು ಸ್ನೇಹಿತ ಬಳಿ ಹಣ ಪಡೆದು ಜಮೀನು ಬಳಿ ಹೋಗಿ ಬರುತ್ತೇನೆ ಎಂದು ಹೋಗಿದ್ದ ಲೋಹಿತ್ ನಿಗೂಢ ನಾಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಲೋಹಿತ್‌ಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಲೋಹಿತ್ ಸಿಕ್ಕ ನಂತರವೇ ಪ್ರಕರಣ ಅಸಲಿಯತ್ತು ಗೊತ್ತಾಗಲಿದೆ.
ಅತಿಯಾದ ಪ್ರೀತಿ ಎಂತೆಂತಾ ಕೃತ್ಯ ಮಾಡ್ಸತ್ತೆ: ಅಕ್ಕನಿಗೆ ಡಿವೋರ್ಸ್ ಕೇಳಿದ ಬಾವನ ಮೇಲೆ ಬಾಮೈದ ಹಲ್ಲೆ
ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂತಾಮಣಿ ರಸ್ತೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ರಕ್ತದ ಕಲೆಗಳು ಅದರಲ್ಲಿ ಬಿದ್ದಿತ್ತು. ಇನ್ನೂ ಕಾರಿನಲ್ಲಿದ್ದ ಲೋಹಿತ್ ನಾಪತ್ತೆಯಾಗಿರೋ ಪ್ರಕರಣ ಅಭಿ ಎನ್ನುವವರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದು, ಲೋಹಿತ್ ಪತ್ತೆಗಾಗಿ ವಿಶೇಷ ಎರಡು ತಂಡಗಳನ್ನ ರಚನೆ ಮಾಡಿದ್ದೇವೆ. ಆದಷ್ಟು ಬೇಗ ಲೋಹಿತ್ ನನ್ನ ಪತ್ತೆ ಹಚ್ಚುತ್ತೇವೆ
-ವಂಶಿಕೃಷ್ಣ, ಎಸ್ಪಿ ಬೆಂಗಳೂರು ಗ್ರಾಮಾಂತರ ಎಸ್ಪಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ