ಡೇ ಟೈಂನಲ್ಲಿ ಸ್ಕೆಚ್ ಹಾಕಿ ರಾತ್ರಿ ಹೊತ್ತಲ್ಲಿ ಬೈಕ್‌ ಕ್ಯಾಚ್, ಬೆಂಗ್ಳೂರಲ್ಲಿ ಗ್ಯಾಂಗ್ ಆಕ್ಟೀವ್

By Suvarna NewsFirst Published Jun 25, 2022, 2:55 PM IST
Highlights

* ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ 
*  ಡೇ ಟೈಂನಲ್ಲಿ ಸ್ಕೆಚ್ ಹಾಕಿ ರಾತ್ರಿ ಹೊತ್ತಲ್ಲಿ ಬೈಕ್‌ ಕ್ಯಾಚ್
* ಬೆಳಿಗ್ಗೆ ಬೈಕ್ ವಾಚಿಂಗ್ ಮಾಡಿ ಸಂಜೆ ಬೈಕ್ ಕ್ಯಾಚಿಂಗ್ ಮಾಡೋ‌ ಖತರ್ನಾಕ್ ಗ್ಯಾಂಗ್ ಆಕ್ಟೀವ್

ಬೆಂಗಳೂರು, (ಜೂನ್.25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು,  ಬೆಳಿಗ್ಗೆ ಬೈಕ್ ವಾಚಿಂಗ್ ಮಾಡಿ ಸಂಜೆ ಬೈಕ್ ಕ್ಯಾಚಿಂಗ್ ಮಾಡೋ‌ ಖತರ್ನಾಕ್ ಗ್ಯಾಂಗ್ ಆಕ್ಟೀವ್ ಆಗಿದೆ.ಬೆಂಗಳೂರಿನ ಪೂರ್ವ ವಿಭಾಗದ ಈ ಗ್ಯಾಂಗ್ ಹೆಚ್ಚು ಆಕ್ಟೀವ್ ಆಗಿದ್ದು. ಮನೆ ಪಕ್ಕದಲ್ಲಿ ಇರುವ ಪಾರ್ಕಿಂಗ್ ನಲ್ಲಿ ನಿಲ್ಲಿಸೋ ಬೈಕ್ ಗಳನ್ನ ಕ್ಷಣ ಮಾತ್ರದಲ್ಲಿ  ಲಾಕ್ ಕಟ್ ಮಾಡಿ ಹೊತ್ತೊಯ್ತಾರೆ.

ಬೆಂಗಳೂರಿನ ಪುಲಿಕೇಶಿನಗರದಲ್ಲಿ ಬೈಕ್ ಹೊತ್ತೊಯ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಸೈಲೆಂಟಾಗಿ ಹೆಲ್ಮೆಟ್ ಹಾಕಿ ಬರೋ ಕಳ್ಳರು ಕ್ಷಣಮಾತ್ರದಲ್ಲಿ ಬೈಕ್ ಕದ್ದು ಎಸ್ಕೇಪ್ ಆಗ್ತಾರೆ. ನೀವೆರನಾದ್ರು ಬೈಕ್ ಗೆ ಸೈಡ್ ಲಾಕು, ಚೈನು ಏನೇ ಹಾಕಿದ್ರೂ ಅದನ್ನ ಬ್ರೇಕ್ ಮಾಡಿ ಬೈಕ್ ಕದ್ದೊಯ್ತಾರೆ. ಸದ್ಯ ಪೂರ್ವ ವಿಭಾಗದ ಪೊಲೀಸರು ಈ‌ ಹಲ್ಮೆಟ್ ಬೈಕ್ ಕಳ್ಳರ ಹಿಂದೆ ಬಿದ್ದಿದ್ದಾರೆ.

ಬೆಂಗಳೂರು: ಮದುವೆ ಮನೆಯಲ್ಲಿ ಮಕ್ಕಳ ಒಡವೆ ಕದಿಯುತ್ತಿದ್ದ ಐನಾತಿ ಕಳ್ಳ ಅರೆಸ್ಟ್..!

ಹಣದ ಜೊತೆಗೆ  ಕ್ರಿಕೆಟ್ ಪರಿಕರ ಕದ್ದು ಎಸ್ಕೇಪ್
ಬೆಂಗಳೂರು: ಗಲ್ಲಾ ಪೆಟ್ಟಿಗೆ ದೋಚಲು ಬಂದವನು ಹಣದ ಜೊತೆಗೆ  ಕ್ರಿಕೆಟ್ ಪರಿಕರಗಳನ್ನ ದೋಚಿ ಎಸ್ಕೇಪ್ ಆಗಿದ್ದಾನೆ. ಕ್ರಿಕೆಟ್ ಇಕ್ವಿಪ್ಮೆಂಟ್ ಶೋರೂಂಗೆ ನುಗ್ಗಿದ ಕಳ್ಳರು 1.40 ಲಕ್ಷ ನಗದು ಹಾಗೂ ಕ್ರಿಕೆಟ್ ಪರಿಕರಗಳನ್ನ ಕದ್ದು ಎಸ್ಕೇಪ್ ಅಸಗಿದ್ದಾರೆ. ಕಳ್ಳರು ಕೈಚಳಕ ತೋರಿರುವ ಘಟನೆ  ಜೂನ್ 22ರ ಮಧ್ಯರಾತ್ರಿ ನಗರದ ಕಲ್ಯಾಣನಗರದಲ್ಲಿ  ನಡೆದಿದೆ.

ಬಾಣಸವಾಡಿಯ ಕ್ರಿಕೆಟ್ ಸೆಂಟ್ರಲ್ ಶೋಂ ರೂಮಿಗೆ ಜೂನ್ 22ರ ರಾತ್ರಿ 10:30ರ ಸುಮಾರಿಗೆ ಕಿಟಕಿ ಮುರಿದು ನುಗ್ಗಿರುವ ಕಳ್ಳರ ತಂಡ ಹಣದ. ಜೊತೆಗೆ ಸುಮಾರು 1 ಲಕ್ಷದ 50 ಸಾವಿರ ಮೌಲ್ಯದ ಸ್ಪೋರ್ಟ್ಸ್ ಪರಿಕರಗಳನ್ನು ದೋಚಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೋರೂಮ್ ಮಾಲೀಕ ಮಹೇಶ್ ರೆಡ್ಡಿ ನೀಡಿರುವ ದೂರಿನನ್ವಯ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರೆ.

ಮದ್ವೆ ಮನೆಯಲ್ಲಿ ಮಕ್ಕಳ ಒಡವೆ ಕದಿಯುತ್ತಿದ್ದ ಕಳ್ಳ ಅರೆಸ್ಟ್..!
ಬೆಂಗಳೂರು(ಜೂ.25):  ಮದ್ವೆ, ರಿಸೆಪ್ಷನ್‌ಗೆ ಬರೋ ಮಕ್ಕಳನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳನನ್ನ ಸುದ್ದಗುಂಟೆಪಾಳ್ಯ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ. ಮಕ್ಕಳನ್ನ ನೈಸಾಗಿ ಮಾತನಾಡಿಸಿ ಮೈಮೇಲಿರೋ ಚಿನ್ನಾಭರಣವನ್ನ ಎಗರಿಸ್ತಿದ್ದ ಈ ಖದೀಮ. ಬಂಧಿತ ಆರೋಪಿಯನ್ನ ಬಾಬು ಅಂತ ಗುರುತಿಸಲಾಗಿದೆ. 

ಬಾಬು ತನ್ನ ಸಹಚರನ ಜೊತೆ ಡೀಸೆಂಟಾಗಿ ಮದ್ವೆ ಮನೆಗೆ ಎಂಟ್ರಿ ಕೊಟ್ಟು ಅಕ್ಕಪಕ್ಕದಲ್ಲಿ ಮಕ್ಕಳು ಓಡಾಡ್ತಿದ್ರೆ ಆ ಮಕ್ಕಳಿಗೆ ಚಾಕಲೇಟ್ ಕೊಡ್ತಾನೆ. ಎಷ್ಟು ಮುದ್ದಾಗಿದ್ಯಾ ಅಂತ ಪುಸಲಾಯಿಸಿ ಮಕ್ಕಳ ಸಂಬಂಧಿಯಂತೆ ಮುದ್ದಿಸಿ  ಮೈಮೇಲಿನ ಚಿನ್ನವನ್ನ ಎಗರಿಸುತ್ತಿದ್ದನಂತೆ ಈ ಕಳ್ಳ. 

ಕಳ್ಳ ಬಾಬು‌ ಹಿಂದೆ ನಗರದ ಕೆಲ ಪೊಲೀಸ್ರು ಕೂಡ ಬಿದ್ದಿದ್ರು. ಸದ್ಯ ಸುದ್ದಗುಂಟೆ ಪೊಲೀಸರ ಕೈಗೆ ಲಾಕ್ ಆಗಿದ್ದು ಬಂಧಿತನಿಂದ 500 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಾಬು ಈ ಹಿಂದೆ ಅರಮನೆ ಮೈದಾನ, ಗೋವಿಂದರಾಜನಗರ, ಸದಾಶಿವನಗರ, ಮಾಗಡಿ ರಸ್ತೆ ಭಾಗದ ಚೌಟ್ರಿಯಲ್ಲಿ ಕೈಚಳಕ ತೋರಿದ್ದ ಅಂತ ತಿಳಿದು ಬಂದಿದೆ. 

click me!