
ಬೆಂಗಳೂರು(ಜೂ.25): ಮದ್ವೆ, ರಿಸೆಪ್ಷನ್‌ಗೆ ಬರೋ ಮಕ್ಕಳನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳನನ್ನ ಸುದ್ದಗುಂಟೆಪಾಳ್ಯ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ. ಮಕ್ಕಳನ್ನ ನೈಸಾಗಿ ಮಾತನಾಡಿಸಿ ಮೈಮೇಲಿರೋ ಚಿನ್ನಾಭರಣವನ್ನ ಎಗರಿಸ್ತಿದ್ದ ಈ ಖದೀಮ. ಬಂಧಿತ ಆರೋಪಿಯನ್ನ ಬಾಬು ಅಂತ ಗುರುತಿಸಲಾಗಿದೆ.
ಬಾಬು ತನ್ನ ಸಹಚರನ ಜೊತೆ ಡೀಸೆಂಟಾಗಿ ಮದ್ವೆ ಮನೆಗೆ ಎಂಟ್ರಿ ಕೊಟ್ಟು ಅಕ್ಕಪಕ್ಕದಲ್ಲಿ ಮಕ್ಕಳು ಓಡಾಡ್ತಿದ್ರೆ ಆ ಮಕ್ಕಳಿಗೆ ಚಾಕಲೇಟ್ ಕೊಡ್ತಾನೆ. ಎಷ್ಟು ಮುದ್ದಾಗಿದ್ಯಾ ಅಂತ ಪುಸಲಾಯಿಸಿ ಮಕ್ಕಳ ಸಂಬಂಧಿಯಂತೆ ಮುದ್ದಿಸಿ ಮೈಮೇಲಿನ ಚಿನ್ನವನ್ನ ಎಗರಿಸುತ್ತಿದ್ದನಂತೆ ಈ ಕಳ್ಳ.
ಒಂಟಿ ಮಹಿಳಾ ವ್ಯಾಪಾರಿಗಳ ಸರ ಪಡೆದು ಪರಾರಿಯಾಗ್ತಿದ್ದ ಖತರ್ನಾಕ್ ಕಳ್ಳರ ಬಂಧನ
ಕಳ್ಳ ಬಾಬು ಹಿಂದೆ ನಗರದ ಕೆಲ ಪೊಲೀಸ್ರು ಕೂಡ ಬಿದ್ದಿದ್ರು. ಸದ್ಯ ಸುದ್ದಗುಂಟೆ ಪೊಲೀಸರ ಕೈಗೆ ಲಾಕ್ ಆಗಿದ್ದು ಬಂಧಿತನಿಂದ 500 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಾಬು ಈ ಹಿಂದೆ ಅರಮನೆ ಮೈದಾನ, ಗೋವಿಂದರಾಜನಗರ, ಸದಾಶಿವನಗರ, ಮಾಗಡಿ ರಸ್ತೆ ಭಾಗದ ಚೌಟ್ರಿಯಲ್ಲಿ ಕೈಚಳಕ ತೋರಿದ್ದ ಅಂತ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ