ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳ ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿ, 2.80 ಲಕ್ಷ ರು. ಮೌಲ್ಯದ 6 ಬೈಕ್‌ಗಳ ಜಪ್ತಿ ಮಾಡಿದ್ದಾರೆ.
ದಾವಣಗೆರೆ (ಜು.31) : ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳ ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿ, 2.80 ಲಕ್ಷ ರು. ಮೌಲ್ಯದ 6 ಬೈಕ್‌ಗಳ ಜಪ್ತಿ ಮಾಡಿದ್ದಾರೆ.
ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಆಟೋ ಚಾಲಕ ಎಸ್.ರಾಘವೇಂದ್ರ ಅಲಿಯಾಸ್ ರಾಜಾ ಹುಲಿ ಅಲಿಯಾಸ್ ರಘು(29 ವರ್ಷ), ನಾಗನೂರು ಗ್ರಾಮದ ಕೂಲಿ ಕೆಲಸಗಾರ ವಿ.ಪ್ರಮೋದ್(23) ಬಂಧಿತ ಆರೋಪಿಗಳು. ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
undefined
ಹೊಸ ಟ್ರ್ಯಾಕ್ಟರ್ ಪಲ್ಟಿ; ಮನೆಯವರಿಗೆ ಹೆದರಿ ಮಾಲೀಕ ನೇಣಿಗೆ ಶರಣು!
ಶಾಬನೂರು ಗ್ರಾಮದ ಅನಿಲ್‌ಕುಮಾರ ತಮ್ಮ ಸ್ಪೆ$್ಲಂಡರ್ ಪ್ಲಸ್ ಬೈಕ್ ಕಳುವಾದ ಬಗ್ಗೆ ಜು.18ರಂದು ದೂರು ನೀಡಿದ್ದರು. ಮನೆ ಮುಂದೆ ರಾತ್ರಿ ನಿಲ್ಲಿಸಿದ್ದ ಬೈಕ್ ಮಾರನೆಯ ದಿನ ಬೆಳಿಗ್ಗೆ ಇರಲಿಲ್ಲ. ಯಾರೋ ಕಳ್ಳರು ಅವುಗಳನ್ನು ಕಳವು ಮಾಡಿ ಹೋಗಿರುವ ಬಗ್ಗೆ ದೂರು ನೀಡಿದ್ದರು. ಎಎಸ್ಪಿ ಆರ್.ಬಿ.ಬಸರಗಿ, ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ಪ್ರೊಬೇಷನರಿ ಡಿವೈಎಸ್ಪಿ ಯಶವಂತಕುಮಾರ, ಇನ್ಸಪೆಕ್ಟರ್ ಪ್ರಭಾವತಿ ಸಿ.ಶೇತಸನದಿ, ಎಸ್‌ಐಜಿ.ಎಂ.ರೇಣುಕಾ ನೇತೃತ್ವದ ತಂಡ ಆರೋಪಿಗಳ ಬಂಧಿಸಿದೆ. ಸಿಬ್ಬಂದಿಯಾದ ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಯೋಗೀಶ ನಾಯ್ಕ, ಟಿ.ಮಂಜಪ್ಪ, ಸೋಮಪ್ಪ, ದೇವರಾಜ, ಗುರುಸಿದ್ದನಗೌಡ, ಎಆರ್‌ಎಸ್‌ಐ ಅಜಯ್ ಕಾರ್ಯಕ್ಕೆ ಎಸ್ಪಿ ಡಾ.ಕೆ.ಅರುಣ್ ಶ್ಲಾಘಿಸಿದ್ದಾರೆ.
ಹಸು, ಕರು, ಟಗರು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ
ಎಚ್‌ಡಿ ಕೋಟೆ: ಅಕ್ರಮವಾಗಿ ಎರಡು ತಿಂಗಳಿಂದ ಎರಡು ಹಸು, ಒಂದು ಕರು, ಎರಡು ಟಗರನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಎಚ್.ಡಿ. ಕೋಟೆ ಪೊಲೀಸರು ಯಶಸ್ವಿ ಆಗಿದ್ದಾರೆ.
ತಾಲೂಕಿನ ರಾಜೇಗೌಡನಹುಂಡಿಯ ಕುಮಾರಿ ಎಂಬವರಿಗೆ ಸೇರಿದ ಎರಡು ಹಸು, ಒಂದು ಕರು, ಎರಡು ಟಗರು ಕದ್ದು ಎರಡು ತಿಂಗಳ ಹಿಂದೆ ಪರಾರಿ ಆಗಿದ್ದರು. ದೂರು ಸ್ವೀಕರಿಸಿದ ಎಚ್.ಡಿ. ಕೋಟೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಬೀರ್ ಹುಸೇನ್ ಅವರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳ ಫೋನ್ ಸಂಪರ್ಕದ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳತನವಾಗಿದ್ದ ಹಸು, ಕರು ಮತ್ತು ಟಗರನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ . 43,700 ನಗದನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಇಬ್ಬರು ಕೇರಳ ಮೂಲದವರು, ಒಬ್ಬರು ವಿರಾಜಪೇಟೆ, ಮತ್ತೊಬ್ಬ ಆರೋಪಿ ಹುಣಸೂರಿನವರು.
Bengaluru crime: ರೌಡಿ ಕಪಿಲ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ
ಈ ಕಾರ್ಯಚರಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಹುಸೇನಾ, ಎಎಸ್‌ಐ ರಾಮು ಸಿಬ್ಬಂದಿ ಸೈಯದ್ ಕಬೀರ್, ಸುನಿಲ…, ಎಚ್.ಎಸ್. ಮೋಹನ್, ರಿತೀಶ್‌ಕುಮಾರ್ ಪಾಲ್ಗೊಂಡಿದ್ದರು.