Bengaluru crime: ರೌಡಿ ಕಪಿಲ್‌ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ

By Kannadaprabha News  |  First Published Jul 31, 2023, 5:04 AM IST

ಇತ್ತೀಚೆಗೆ ದ್ವೇಷದ ಹಿನ್ನೆಲೆಯಲ್ಲಿ ನಡೆದಿದ್ದ ರೌಡಿ ಕಪಿಲ್‌(35) ಕೊಲೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಐವರು ಆರೋಪಿಗಳ ವಿರುದ್ಧ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಕೋಕಾ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಜಾರಿ ಮಾಡಿದ್ದಾರೆ.


ಬೆಂಗಳೂರು (ಜು.31) :  ಇತ್ತೀಚೆಗೆ ದ್ವೇಷದ ಹಿನ್ನೆಲೆಯಲ್ಲಿ ನಡೆದಿದ್ದ ರೌಡಿ ಕಪಿಲ್‌(35) ಕೊಲೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಐವರು ಆರೋಪಿಗಳ ವಿರುದ್ಧ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಕೋಕಾ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಜಾರಿ ಮಾಡಿದ್ದಾರೆ.

ಆರೋಪಿಗಳಾದ ಮನೋರಾಯನಪಾಳ್ಯದ ನವೀನ್‌ಕುಮಾರ್‌, ಪವನ್‌ಕುಮಾರ್‌, ಮಂಜುನಾಥ ಲೇಔಟ್‌ನ ರಾಹುಲ್‌, ಶಾಂಪುರದ ಪುನೀತ್‌ಕುಮಾರ್‌ ಹಾಗೂ ಆರ್‌.ಟಿ.ನಗರದ ಶಂಕರ್‌ ವಿರುದ್ಧ ಕೋಕಾ ಕಾಯ್ದೆ ಜಾರಿ ಮಾಡಲಾಗಿದೆ. ಆರೋಪಿಗಳು ಜು.11ರಂದು ರಾತ್ರಿ 8ರ ಸುಮಾರಿಗೆ ಡಿ.ಜೆ.ಹಳ್ಳಿಯ ಕೆಎಚ್‌ಬಿ ಮುಖ್ಯರಸ್ತೆಯಲ್ಲಿ ರೌಡಿ ಕಪಿಲ್‌ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದರು.

Tap to resize

Latest Videos

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿಶೀಟರ್ ಕೊಲೆ, 5 ಆರೋಪಿಗಳು ಅರೆಸ್ಟ್, ಹತ್ಯೆಯ ಮಾಸ್ಟರ್‌ ಮೈಂಡ್‌ಗೆ ಶೋಧ

ಎರಡು ವರ್ಷ ಜಾಮೀನು ಸಿಗಲ್ಲ:

ಕೋಕಾ ಕಾಯ್ದೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಎರಡು ವರ್ಷ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ. ಈ ಹಿಂದೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧವೂ ಕೋಕಾ ಕಾಯ್ದೆ ಜಾರಿಗೊಳಿಸಲಾಗಿತ್ತು. ಆರೋಪಿಗಳಿಗೆ ಜಾಮೀನು ಸಿಕ್ಕರೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರೌಡಿ ಕಪಿಲ್‌ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧವೂ ಕೋಕಾ ಕಾಯ್ದೆ ಜಾರಿ ಮಾಡಲಾಗಿದೆ.

ರೌಡಿ ಶೀಟರ್‌ ಕಪಿಲ್‌ ಭೀಕರ ಹತ್ಯೆ: ಕ್ಯಾಮೆರಾ ಕಣ್ಣಲ್ಲಿ ಹಂತಕರ ಕೌರ್ಯ

ಕಪಿಲ್‌ ವಿರುದ್ಧವೂ ಕೋಕಾ ಜಾರಿ ಆಗಿತ್ತು!

ರೌಡಿ ನಕರಾ ಬಾಬು ಕೊಲೆ ಪ್ರಕರಣದ ಆರೋಪಿಯಾಗಿದ್ದ ರೌಡಿ ಶೀಟರ್‌ ಕಪಿಲ್‌ ವಿರುದ್ಧ ಮಡಿವಾಳ ಠಾಣೆ ಪೊಲೀಸರು 2014ರಲ್ಲಿ ಕೋಕಾ ಕಾಯ್ದೆ ಜಾರಿ ಮಾಡಿದ್ದರು. ಇದೀಗ ಅದೇ ಕಪಿಲ್‌ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧವೂ ಕೋಕಾ ಕಾಯ್ದೆ ಜಾರಿಯಾಗಿದೆ.

click me!