Bengaluru crime: ಓದಿದ್ದು ಬಿಟೆಕ್; ಮಾಡ್ತಿದ್ದಿದ್ದು ಬೈಕ್ ಎಗರಿಸೋ ಕೆಲಸ!

Published : Aug 06, 2023, 05:00 AM IST
Bengaluru crime: ಓದಿದ್ದು ಬಿಟೆಕ್; ಮಾಡ್ತಿದ್ದಿದ್ದು ಬೈಕ್ ಎಗರಿಸೋ ಕೆಲಸ!

ಸಾರಾಂಶ

ಮೋಜು ಮಾಡಲು ಮನೆ ಎದುರು ನಿಲ್ಲಿಸಿದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳವು ಮಾಡಿದ್ದ ಇಬ್ಬರು ಬಿಟೆಕ್‌ ಪದವೀಧರರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.6) :  ಮೋಜು ಮಾಡಲು ಮನೆ ಎದುರು ನಿಲ್ಲಿಸಿದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳವು ಮಾಡಿದ್ದ ಇಬ್ಬರು ಬಿಟೆಕ್‌ ಪದವೀಧರರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರು ಮೂಲದ ಹೇಮಾದ್ರಿ(23) ಮತ್ತು ಪವನ್‌(23) ಬಂಧಿತರು. ಆರೋಪಿಗಳಿಂದ .3 ಲಕ್ಷ ಮೌಲ್ಯದ ಎರಡು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಹನುಮಂತನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮನೆ ಎದುರು ನಿಲುಗಡೆ ಮಾಡಿದ್ದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳ್ಳತನವಾಗಿತ್ತು. ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ತನ್ನಿಂದ ದೂರ ಆಗುತ್ತಿದ್ದ ಪ್ರೇಯಸಿಗೆ ರಾಡಲ್ಲಿ ಹೊಡೆದ ಪ್ರೇಮಿ; ಆರೋಪಿ ಬಂಧನ

ಆರೋಪಿಗಳಿಬ್ಬರು ಆಂಧ್ರಪ್ರದೇಶದಲ್ಲಿ ಬಿಟೆಕ್‌ ಪದವಿ ಪಡೆದಿದ್ದು, ಉದ್ಯೋಗ ಇಲ್ಲದೆ ಕೆಲಸಕ್ಕಾಗಿ ಹುಡುಕಾಡುತ್ತಿದ್ದರು. ಆರೋಪಿ ಹೇಮಾದ್ರಿ ಇತ್ತೀಚೆಗೆ ನಗರಕ್ಕೆ ಬಂದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಖಾಸಗಿ ಏಜೆನ್ಸಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದ. ಈ ಬಗ್ಗೆ ತನ್ನ ಸಹಪಾಠಿ ಪವನ್‌ಗೂ ವಿಚಾರ ತಿಳಿಸಿ ನಗರಕ್ಕೆ ಕರೆಸಿಕೊಂಡಿದ್ದ. ಇಬ್ಬರು ಉದ್ಯೋಗಕ್ಕಾಗಿ ಕೆಲ ದಿನ ನಗರದಲ್ಲಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಊರಿಗೆ ವಾಪಾಸಾಗಲು ನಿರ್ಧರಿಸಿದ್ದರು.

Crime news: ಜ್ಯುವೆಲರಿ ಅಂಗಡಿ ಬಾಗಿಲು ಮುರಿದು ಕಳ್ಳತನ: ನಾಲ್ವರು ಆರೋಪಿಗಳ ಬಂಧನ

ಇದಕ್ಕೂ ಮುನ್ನ ನಗರದಲ್ಲಿ ರಾಯಲ್‌ ಎನ್‌ಫೀಲ್ಡ್‌ ಕಳ್ಳತನ ಮಾಡಿಕೊಂಡು ತೆರಳಲು ಸಂಚು ರೂಪಿಸಿದ್ದರು. ಅದರಂತೆ ಹನುಮಂತನಗರ ಹಾಗೂ ಕೆಂಪೇಗೌಡ ನಗರದಲ್ಲಿ ಮನೆ ಎದುರು ನಿಲುಗಡೆ ಮಾಡಿದ್ದ ಎರಡು ಬೈಕ್‌ ಕದ್ದು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯ ಹಾಗೂ ಮೊಬೈಲ್‌ ಕರೆಗಳ ಆಧಾರದ ಮೇಲೆ ಆಂಧ್ರಪ್ರದೇಶದ ನೆಲ್ಲೂರು ಬಳಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ