Bengaluru Crime: ಬೆಂಗಳೂರಲ್ಲಿ ಬೈಕ್‌ ಕದ್ದು ಉತ್ತರ ಕರ್ನಾಟಕದಲ್ಲಿ ಮಾರಾಟ: ಇಬ್ಬರ ಬಂಧನ

By Kannadaprabha News  |  First Published Dec 5, 2022, 7:10 AM IST

 ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮನೆ ಎದುರು ಹಾಗೂ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು, ಕೊಪ್ಪಳ, ಗದಗ, ರಾಯಚೂರು, ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ಆರೋಪಿಗಳು ಹ್ಯಾಂಡಲ್‌ ಲಾಕ್‌ ಮುರಿದು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು.


ಬೆಂಗಳೂರು (ಡಿ.5) : ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮನೆ ಎದುರು ಹಾಗೂ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಮೂಲದ ರಘು ನಾಯ್‌್ಕ ಅಲಿಯಾಸ್‌ 220 ಮತ್ತು ದೌಲತ್‌ ಖಾನ್‌ ಬಂಧಿತರು. ಆರೋಪಿಗಳಿಂದ .16 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 24 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಆನಂದರಾವ್‌ ಎಂಬುವವರು ನ.12ರಂದು ಮಧ್ಯಾಹ್ನ ಜೆ.ಪಿ.ನಗರ 3ನೇ ಹಂತದ ಮಾಂಡೋವಿ ಶೋ ರೂಮ್‌ ಬಳಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಕಾರ್ಯ ನಿಮಿತ್ತ ತೆರಳಿದ್ದರು. ಕೆಲ ಹೊತ್ತಿನ ಬಳಿಕ ವಾಪಾಸ್‌ ಬಂದಾಗ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

Bengaluru crime: ಬಾಡಿಗೆ ಮನೆ ಅಡ್ವಾನ್ಸ್‌ಗಾಗಿ ಕಳ್ಳತನಕ್ಕಿಳಿದ ದಂಪತಿ!

ಆರೋಪಿಗಳು ಬೆಳ್ಳಂದೂರಿನ ಕಾರ್ಮಿಕರ ಶೆಡ್‌ನಲ್ಲಿ ನೆಲೆಸಿದ್ದರು. ಇಬ್ಬರೂ ವೃತ್ತಿಪರ ಕಳ್ಳರಾಗಿದ್ದಾರೆ. ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದು ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿದ್ದರು.

ಬೆಂಗಳೂರು, ಕೊಪ್ಪಳ, ಗದಗ, ರಾಯಚೂರು, ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ಆರೋಪಿಗಳು ಹ್ಯಾಂಡಲ್‌ ಲಾಕ್‌ ಮುರಿದು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು. ಕದ್ದ ದ್ವಿಚಕ್ರ ವಾಹನಗಳನ್ನು ಉತ್ತರ ಕರ್ನಾಟಕದ ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಪರಿಚಿತರಿಗೆ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದರು. ತಿಂಗಳ ಬಳಿಕ ದಾಖಲೆ ನೀಡುತ್ತೇವೆ. ಬಳಿಕ ಉಳಿದ ಹಣ ಕೊಡಿ ಎಂದು ಹೇಳುತ್ತಿದ್ದರು. ನಂತರ ಆರೋಪಿಗಳು ಆ ಕಡೆಗೆ ಹೋಗುತ್ತಿರಲಿಲ್ಲ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Bengaluru Crime: ಟೆಕ್ಕಿಯ ಅಪಹರಿಸಿ 8 ಲಕ್ಷ ಸುಲಿದವರ ಸೆರೆ

click me!