ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ಅಣವೀರ ಮಲ್ಲಪ್ಪ ದೀವಟಗಿ ಎಂಬುವವರ ಮೇಲೆಯೇ ಹಲ್ಲೆ ನಡೆಸಿ ಮೊಬೈಲ್, ನಗದು ಹಣ ಮತ್ತು ಬೆಳ್ಳಿಯ ಬ್ರಾಸ್ ಲೇಟ್ ದೋಚಲಾಗಿದೆ.
ಕಲಬುರಗಿ(ಜೂ.11): ಬೈಕ್ ಸವಾರನ ಅಡ್ಡಗಟ್ಟಿ ಹಲ್ಲೆ ನಡೆಸಿ 38,800 ರು. ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋದ ಘಟನೆ ನಗರದ ಹಾಗರಗಾ ಕ್ರಾಸ್ ಬಳಿ ನಡೆದಿದೆ. ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ಅಣವೀರ ಮಲ್ಲಪ್ಪ ದೀವಟಗಿ ಎಂಬುವವರ ಮೇಲೆಯೇ ಹಲ್ಲೆ ನಡೆಸಿ ಮೊಬೈಲ್, ನಗದು ಹಣ ಮತ್ತು ಬೆಳ್ಳಿಯ ಬ್ರಾಸ್ ಲೇಟ್ ದೋಚಲಾಗಿದೆ. ಅಣವೀರ ದೀವಟಗಿ ಅವರು ಬೈಕ್ ಮೇಲೆ ಹೆಬ್ಬಾಳದಿಂದ ಕಲಬುರಗಿಗೆ ಆಗಮಿಸಿ ಹುಮನಾಬಾದ ರಿಂಗ್ ರೋಡ್ನಲ್ಲಿರುವ ಅವರ ಸೋದರ ಮಾವ ಶಿವಕುಮಾರ ಮರ್ತೂರಕರ್ ಅವರನ್ನು ಭೇಟಿಯಾಗಿ ಮರಳಿ ಹೆಬ್ಬಾಳಗೆ ಹೊರಟಿದ್ದರು.
ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ರಫಿಕ್ ಚೌಕ್ ಹತ್ತಿರ ಅವರನ್ನು ಅಡ್ಡಗಟ್ಟಿದ್ದಾರೆ. ಅದರಲ್ಲಿ ಒಬ್ಬ ಹಾಗರಗಾ ಕ್ರಾಸ್ವರೆಗೆ ಡ್ರಾಪ್ ನೀಡುವಂತೆ ಕೇಳಿದ್ದಾನೆ. ಆಗ ಅಣವೀರ ದೀವಟಗಿ ಅವರು ಹಾಗರಗಾ ಕ್ರಾಸ್ವರೆಗೆ ಆತನಿಗೆ ಡ್ರಾಪ್ ನೀಡಿದ್ದಾರೆ. ಬೈಕ್ ಮೇಲೆ ಹಿಂದೆಯೇ ಬಂದ ಇನ್ನೊಬ್ಬ ಮತ್ತು ಡ್ರಾಪ್ ಕೇಳಿದ ವ್ಯಕ್ತಿ ಸೇರಿ ಅಣವೀರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿ ಅವರ ಬಳಿ ಇದ್ದ 20 ಸಾವಿರ ರು. ಮೌಲ್ಯದ ಮೊಬೈಲ್, 400 ರು.ನಗದು, 2,400 ರು. ಮೌಲ್ಯದ 40 ಗ್ರಾಂ. ಬೆಳ್ಳಿಯ ಬ್ರಾಸ್ಲೇಟ್ ಮತ್ತು ಅಣವೀರ ಅವರ ತಂದೆಯ ಹೆಸರಿನಲ್ಲಿದ್ದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ.
undefined
ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ
ನಂತರ ಅಣವೀರ ಅವರನ್ನು ಹೆದರಿಸಿ ಎಟಿಎಂನ ಪಿನ್ ನಂರ್ಬ ಪಡೆದಿದ್ದಾರೆ. ತದನಂತರ ಎಟಿಎಂನಿಂದ 16 ಸಾವಿರ ಡ್ರಾ ಮಾಡಿದ್ದಾರೆ. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.