ಐಷಾರಾಮಿ ಹೋಟೆಲ್‌ನಲ್ಲಿ ‘ದೊಡ್ಡವರಿಗೆ’ ಬಲೆ ಬೀಸ್ತಿದ್ದ ಬಿಗ್ ಬಾಸ್ ಸ್ಪರ್ಧಿಯ ಮಾಜಿ ಲವರ್!

By Suvarna News  |  First Published Jan 14, 2020, 12:00 AM IST

ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿಬಿದ್ದ ಬಿಗ್ ಬಾಸ್ ಸ್ಪರ್ಧಿ ಮಾಜಿ ಲವರ್/ ಮಾಜಿ ಲವರ್ ನನ್ನ ಬಂಧನಕ್ಕೆ ಕಾರಣ ಎಂದು ಆರೋಪಿಸಿದ ನಟಿ/ ಇಬ್ಬರು ನಟಿಯರನ್ನು ಬಂಧಿಸಿದ ಪೊಲೀಸರು


ಮುಂಬೈ[ಜ. 13] ಬಿಗ್ ಬಾಸ್ ಹಿಂದಿ ಸೀಸನ್ ನಲ್ಲಿ ಭಾಗವಹಿಸುವ ಅರ್ಹಾನ್ ಖಾನ್ ಅವರ ಮಾಜಿ ಪ್ರಿಯತಮೆ ಅಮೃತಾ ಧನೋವಾ ಇದೀಗ ಸೆಕ್ಸ್ ಸ್ಕಾಂಡಲ್ ನಲ್ಲಿ ಅರೆಸ್ಟ್ ಆಗಿದ್ದಾರೆ.  ಐಷರಾಮಿ ಹೋಟೆಲ್ ಒಂದರಲ್ಲಿ ಅಮೃತಾ ಜತೆ ಶೃಜಾ ಸಿಂಹ ಎಂಬ ನಟಿಯನ್ನು ಬಂಧಿಸಲಾಗಿದೆ. ಆದರೆ ಈ ಸುದ್ದಿ ಇಲ್ಲಿಗೆ ನಿಲ್ಲುವುದಿಲ್ಲ.

ಅರ್ಹಾನ್ ಖಾನ್ ತನಗೆ 5 ಲಕ್ಷ  ರೂ. ವಂಚನೆ ಮಾಡಿದ್ದಾನೆ ಎಂದು ಅಮೃತಾ ಆರೋಪ ಮಾಡಿದ್ದಳು. ಈ ಬಗ್ಗೆ ಪೊಲೀಸರಿಗೆ ದೂರು ಸಹ ನೀಡಿದ್ದಳು. ಇದೇ ಕಾರಣಕ್ಕೆ ಈಕೆಯ ಬಂಧನವಾಗಿದೆ ಎಂಬ ವದಂತಿಗಳು ಹುಟ್ಟಿಕೊಂಡಿವೆ.

Tap to resize

Latest Videos

ಬದಲಾದ ನಿವೇದಿತಾ ಗೌಡ... 

ನನಗೂ ಈ ರೀತಿಯ ಸುದ್ದಿ ಹರಡುತ್ತಿರುವುದು ಗೊತ್ತಾಗಿದೆ. ನನಗೆ ಆಕೆ ಯಾರೂ ಎಂಬುದೇ ಗೊತ್ತಿಲ್ಲ. ಅವಳು ಏನು ಮಾಡುತ್ತಿದ್ದಾಳೆ ಎಂಬುದೇ ತಿಳಿಯದು, ನಾನೇಕೆ ಅವರನ್ನು ಅರೆಸ್ಟ್ ಮಾಡಿಸಲಿ? ಎಂದು ಅರ್ಹಾನ್ ಖಾನ್ ಪ್ರಶ್ನೆ ಮಾಡಿದ್ದಾರೆ.

ಒಂದು ವೇಳೆ ನಾನು ಹಣ ತೆಗೆದುಕೊಂಡಿದ್ದೇ ಆದರೆ ಬ್ಯಾಂಕ್ ದಾಖಲೆಗಳನ್ನು ನೀಡಲಿ. ಆಕೆಯೊಂದಿಗೆ ಡೇಟ್ ಮಾಡಿದ್ದೇ ಎನ್ನುವುದಾದರೆ ಸಂಬಂಧಿಸಿದ ಪೋಟೋಗಳನ್ನು ಹಾಜರುಪಡಿಸಲಿ ಎಂದು ಖಾನ್ ಸವಾಲು ಹಾಕಿದ್ದಾರೆ.

ಇನ್ನೊಂದು ವಿಚಾರವೂ ಈ ಸುದ್ದಿಯೊಂದಿಗೆ ಸೇರಿಕೊಳ್ಳುತ್ತದೆ. ಸದ್ಯ ಬಿಗ್ ಬಾಸ್ ಮನೆಯಲ್ಲೇ ಇರುವ ಹಿಂದಿ ಕಿರುತೆರೆ ತಾರೆ ರಶ್ಮಿ ದೇಸಾಯಿ ಅವರೊಂದಿಗೆ ಖಾನ್ ಮತ್ತಷ್ಟು ಹತ್ತಿರವಾಗಿದ್ದರು. ಇಬ್ಬರು ಬಿಗ್ ಬಾಸ್ ಮನೆಯಲ್ಲೇ ಮದುವಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

click me!