ನಿರ್ಮಾಪಕರಿಂದ ಹಣ ಪಡೆದು ಎಸ್ಕೇಪ್ ಆದ ಆರೋಪ/ ರಾಯಚೂರಿನಲ್ಲಿ ಗಂಡನೊಂದಿಗೆ ಪ್ರತ್ಯಕ್ಷಳಾದ ನಾನ್ ಸೆನ್ಸ್ ನಟಿ/ ಸಾಕು ತಂದೆಯ ಮೇಲೆಯೇ ಆರೋಪ ಮಾಡಿದ ನಟಿ
ರಾಯಚೂರು[ಜ.09] ನಿರ್ಮಾಪಕರಿಗೆ ಲಕ್ಷ ಲಕ್ಷ ವಂಚನೆ ಮಾಡಿ ಪ್ರಿಯಕರ ನಿರ್ದೇಶಕನೊಂದಿಗೆ ಪರಾರಿಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ನಟಿ ವಿಜಯಲಕ್ಷ್ಮೀ ರಾಯಚೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ನಮಗೆ ರಕ್ಷಣೆ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದೇವೆ ಎಂದು ಆತಂಕ ತೋಡಿಕೊಂಡಿದ್ದಾರೆ. ನಮ್ಮ ಮೇಲೆ ಬಂದಿರಿವ ಆರೋಪಗಳೆಲ್ಲಾ ಸುಳ್ಳು. ನಾವು ಯಾರಿಗೂ ಮೋಸ ಮಾಡಿಲ್ಲ. ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ
ನನ್ನ ಬಗ್ಗೆ ಬರುತ್ತಿರುವ ಎಲ್ಲ ಸುದ್ದಿ ಸುಳ್ಳು. ನಾನು ಮದುವೆಯಾಗಿ ಗಂಡನ ಮನೆಯಲ್ಲಿ ಇದ್ದೇನೆ. ಯಾರೇ ಬಂದು ಕೇಳಿದರೂ ಉತ್ತರ ನೀಡುವೆ ಎಂದು ಹೇಳಿದ್ದಾರೆ.